Friday, July 30, 2010

ಮಳೆಗಾಲದ ಸಂಜೆ



ಅದೊಂದು ಮಳೆಗಾಲದ ಸಂಜೆ
ನಾ ಕುಳಿತು ಆಗಸದೆಡೆ ಕಣ್ಣು ನೆಟ್ಟಿದ್ದೆ .
ಆ ಕಪ್ಪು ಮೋಡಗಳು ಆಗಸದ ತುಂಬೆಲ್ಲ ,
ಇನ್ನೇನು ಮಳೆ ಹನಿ ಹನಿಯಾಗಿ ಬರಬೇಕು ,
ಅಷ್ಟರಲ್ಲೇ ನೀನು ಬಂದೆ ಕೋಲ್ಮಿಂಚಿನಂತೆ .
ಮೆಲ್ಲಗೆ ಚುಂಬಿಸಿ ಕಣ್ಣು ತೆರೆಯುವುದರಷ್ಟಲ್ಲೇ
ಮಾಯವಾಗಿ ಬಿಟ್ಟಿದ್ದೆ .
ನಿನ್ನ ನೆನಪಲೆ ಕುಳಿತಿದ್ದೆ ,ಆಗಲೇ ಹನಿಹನಿಯಾಗಿ
ಬೀಳುತ್ತಿದ್ದವು ಜಲಧಾರೆ ....
ಹಾಗೆ ಕಣ್ಣು ಮುಚ್ಚಿದೆ ನಿನ್ನ ನೆನಪಿಗಾಗಿ ,
ಮತ್ತೆ ಬಂದೆ ಸದ್ದಿಲ್ಲದೇ ......
ಕಿವಿಕಚ್ಚಿ, ಪಿಸುನುಡಿದು ಓಡಿ ಬಿಟ್ಟಿದ್ದೆ
ಕಣ್ಣು ಬಿಟ್ಟಾಗ ತೊಟ್ಟಿಕ್ಕುದ್ದವು ಎಲೆಗಳ ತುದಿಯಲ್ಲಿ
ಮಳೆಹನಿಗಳು ....
ಇದೇನು ಕನಸೋ ,ನನಸೋ ಎಂಬ ಭ್ರಮೆಯಲ್ಲಿರುವಾಗ
ಮತ್ತೆ ನೀ ಬಂದೆ ....ಹತ್ತಿರ,, ಹತ್ತಿರ,, ಬಲು ಹತ್ತಿರ ...
ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ
ಕೈಗೆ ಸಿಗದೇ ಚಿಟ್ಟೆಯಾಗಿ ಹಾರಿ ಬಿಟ್ಟಿದ್ದೆ

6 comments:

  1. ನಿಮ್ಮಲ್ಲಿಗೆ ಮೊದಲ ಭೇಟಿ ...ವೆಂಕಟೇಶ್ ಸೊಗಸಾಗಿದೆ.. ನಿಮ್ಮ ಕವನರೂಪಿ ಗದ್ಯ ಅಥವಾ ಗದ್ಯರೂಪೀ ಕವನ....ಮುಂದುವರೆಯಲಿ...

    ReplyDelete
  2. ಧನ್ಯವಾದಗಳು , ಈ ಬೇಟಿ ಹೀಗೇ ಮುಂದುವರಿಯುತ್ತಿರಲಿ , ಹಾಗೆ ನನ್ನ ಕವನಗಳೆಲ್ಲ ಸುಮಾರಾಗಿ ಗದ್ಯರೂಪದಲ್ಲೇ ಇದೆ , ಇನ್ನೂ ಚುಟುಕಾದ ಕವನಗಳ ತಂಟೆಗೆ ಹೋಗಿಲ್ಲ , ನೋಡೋಣ ನನ್ನ ಬಾವನೆಗಳು ಕಡಿಮೆಯಾದಾಗ ಚುಟುಕು ಮೂಡಿ ಬರಬಹುದೇನೋ ? ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  3. ಇದು ಗದ್ಯವೋ ಪದ್ಯವೋ ತಿಳಿಯಲಿಲ್ಲ, ನವ್ಯಕಾವ್ಯವನ್ನು ನೀವಿ ಬರೆಯುವುದಾದರೆ ಒಂದು ಗುಟ್ಟು ಹೇಳುತ್ತೇನೆ ಕೇಳಿ, ಬರೆದದ್ದನ್ನು ವೈದ್ಯರು ಮಾಡುತ್ತಾರಲ್ಲ 1 -1 -1 ಹಾಗೇ ಬರೆದಾದ ಮೇಲೆ ಮಧ್ಯೆ ಮಧ್ಯೆ ತುಂಡು ಮಾಡಿ, ಆಗ ಕವನ ಸಿದ್ಧ ! ರೆಡಿ ಟು ಈಟ್ ಫುಡ್ ! ,ಭಾವನೆಗಳು ಓಕೆ ಆದ್ರೆ ಯಾವುದಾದರೂ ಒಂದು ರ್ರೋಪ ಕೊಡಲಿಲ್ಲ ಯಾಕೆ ? ಧನ್ಯವಾದಗಳು

    ReplyDelete
  4. ಸರ್,

    ನನ್ನ ಬ್ಲಾಗಿಗೆ ಬಂದಾಗ ನೀವು ಎಂದು ನೋಡಲು ಬಂದರೆ ಮೊದಲ ಬಾರಿಗೆ ಕವನ. ಮೊದಲ ರೊಮ್ಯಾಂಟಿಕ್ ಕವನ ಓದಿ ಖುಷಿಯಾಯ್ತು..

    ReplyDelete