Tuesday, December 28, 2010

ಉಲ್ಕಾಪಾತ













ಆಗಸದಲಿ ಉಲ್ಕಾಪಾತ ವಾದಾಗ 


ನೆನಪಾಯಿತು ಮಾತೊಂದು 

ನೆನಸಿದ್ದು ನನಸಾಗುವುದು



 ಈ ಹೃದಯದ ಭಾವನೆಗಳು
 
ಬೀಳುವ ಉಲ್ಕೆಗಳಿಗೆಲ್ಲ ನೆನಸಿದೆ ...



ಅವಳು ನನ್ನವಳಾಗಲೆಂದು 

ಆ ಮಾತು ನಿಜವಾಯಿತು ...

.
ನಿಜವಾಗಿಯೂ ಆಯಿತು.... 


ನನ್ನ ಹೃದಯದಲ್ಲಿ ಮಾತ್ರ ....;

Saturday, December 25, 2010

ಮನದೊಳಗಿನ ನೂರು ಮಾತು ಕಣ್ಣಂಚಿನಲಿ
 ಬರುವ ಸಮಯ ..
ಕಾಯುತ್ತಿತ್ತು ಈ ಮನಸು ನೂರಾರು ಕನಸುಗಳೊಟ್ಟಿಗೆ  ..
ಬೆಚ್ಚಗೆ ಕುಳಿತು ಪಿಸುನುಡಿಯುವ ಕಾತರದ ಕ್ಷಣಗಳಿಗೆ ..
ಬರೀ ಮೌನಗಳೊಟ್ಟಿಗೆ ಸರಿಯುತ್ತಿದ್ದವು ..ಕಾತರದ 
ಕ್ಷಣಗಳೆಲ್ಲ ... ಸಂಕೋಚದ ಪರದೆ ಹಾಕಿ ..
ಹೃದಯದಲಿ ಬಚ್ಚಿಟ್ಟು ಕೊಂಡಿರುವ  ಬಾವನೆಗಳೆಲ್ಲ 
ಕೆಣಕುತ್ತಿದ್ದವು...ಹುಚ್ಚಾ ಕಲಿಸಬಾರದೆ , ಮೌನಗಳಿಗೆಲ್ಲ ..ಮಾತನ್ನ ..??.
ಮಾತು ಕಲಿಸುವ ಪ್ರಯತ್ನದಲಿ ತೊದಲು ನುಡಿಯಲಾಗದೆ...
ಮತ್ತೆ ಮೌನಕ್ಕೆ ಶರಣಾಗಿದ್ದೆ ....
ಕಾಯುತ್ತಿದ್ದೇನೆ ಮಾತು ಕಲಿಯುವ ಕ್ಷಣಗಳಿಗಾಗಿ ..
ಕನಸು ಸಾಕಾರಗೊಳ್ಳಲು ಬೇಕಿನ್ನೂ ಸಮಯ....
ಅಲ್ಲಿಯವರೆಗೆ ಕಾಯಬೇಕು ಹೀಗೆ .. ಮೌನಿಯಾಗಿ ...          

Sunday, November 28, 2010





ಅದೇ ಆಫೀಸ್ಗಳು, ಅದೇ ಕೇಸುಗಳು , ದ್ರಾಫ್ಟಿ0ಗುಗಳು,
 ಪರ ಪರನೇ ತೆಲೆಕೆರೆದು ಮಾಡುವ ಕೇಸ್ ಸರ್ಚುಗಳು ,
 ತಲೆ ಒಡೆದು ಕೈ ಹಾಕಿ ತೂರಿಸಿದರೂ 
ಅರ್ಥವಾಗದ ಇನಕಮ್ಮು ಟಾಕ್ಸುಗಳು,
ಹಿಯರಿಂಗು ಗಳು ಎಡ್ ಜರ್ನುಗಳು , 
ಎಲ್ಲಾ ನೋಡಿ ಬೇಸರವಾದರೂ ಶೇಂಗಾ  ತಿನ್ನಲು ಬಿಡದ ಜಡ್ಜುಗಳು ...



ಎಲ್ಲಿ ನೋಡಿದರೂ ಕರಿ ಕೋಟುಗಳು ಮೇಲೆ ಒಂದು ಗೌನುಗಳು ,,.
.ಯುವರ್ ಹಾನರಗಳು, ಮೈ ಲಾರ್ಡ್ ಗಳು ,
 ಮೈ ಲಾರ್ಡ್ ಶಿಪ್ ಗಳು , ಆರ್ಗ್ಯೂಮೆಂಟ್ ಗಳು ,  ಆರ್ಡರ್ ಸುಗಳು , 
ಎಂದೆಲ್ಲ ಪೂಸಿ ಹೊಡೆಯುವ ಸಿನಿಯರ್ರುಗಳು ...!   
ಮೆಮೋಗಳು , ಡಾಕ್ಯು ಮೆಂಟುಗಳು, ದಪ್ಪ ದಪ್ಪ ಫಯಿಲುಗಳು ,
 ತುಂಬಲೆಂದೇ ಇರುವ ದೊಡ್ಡ ಬ್ಯಾಗುಗಳು , 
ಪಾಪ ಏದುಸಿರು ಬಿಟ್ಟು ತಡವರಿಸಿ ಹೊತ್ತುಕೊಂಡು ಬರುವ ಜುನಿಯರ್ರುಗಳು ಮತ್ತು ಕ್ಲರ್ಕುಗಳು 
,,,,,ಇದೆ ಕೋರ್ಟಿನ ರಿಪೋರ್ಟುಗಳು...... ! 
  ಗುರುಗಳೇ ಇವತ್ತಿಗಿಷ್ಟು ಸಾಕು  ನಿದ್ದೆ ಮಾಡುವ ಹೊತ್ತಾಯಿತು....  !                           

ಅತಿ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೊಲೀಸರು
ಹುಡುಕುತ್ತಿದ್ದರು ...
ಕೂಡಲೇ ನಾನು ನನ್ನ ಹುಡುಗಿಯ ತುಟಿಗಳಿಗೆ
ಕಾವಲು ನಿಂತೆ !

Monday, November 15, 2010

ಬುಗುರಿ





ಏನಾದರೂ ಸರಿಯೇ 
ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸೋದೆ ಹೆಗ್ಗುರಿ 
ಎಂದೆಲ್ಲ ಬಡಬಡಿಸಿ,ಹುರುಪಿನಿಂದಲೇ ಎಲ್ಲಾ ಕಚೇರಿ ಗಳನು ತಿರುಗಿ,
ಕೇಳಿದವರಿಗಿಷ್ಟು, ಬೇಡಿದವರಿಗಿಷ್ಟು ,
ಎಂದೆಲ್ಲ ಹಣವ ಚೆಲ್ಲಿ ....
ಎಲ್ಲಾ ದಸ್ತಾವೇಜುಗಳ ಜಾಲಾಡಿ, 
ಕೇಸು ಜಡಿದವರೀಗ,  
 ಕೊನೆಗೆ, ಕಟ್ಟ ಕಡೆಗೆ ,ಚಟ್ಟವೇರಿ.....     
ಅವರ ವಾರಸುದಾರರೆಲ್ಲ ಸುತ್ತುತ್ತಲೇ ಇದ್ದಾರೆ  
ಚಾವಟಿಯಿಲ್ಲದ ಬುಗುರಿಯಂತೆ 

Thursday, November 11, 2010

Friend Naveen s Post





ಗೆಳತಿ, ಓ ಗೆಳತಿ , ಕೇಳಿದರೆ ನನ್ನ ವ್ಯತೆ ನೀ ನಗುತ್ತಿ.
ಪ್ರೀತಿಯ ಸವಿ ಉಣಿಸಲು ನಾ ನಿಂತರೆ ಮುಂದೆ,
ಬೇಡಿಕೆಯ ಪಟ್ಟಿ ಇಡುವೆ ನೀ ನನ್ನ ಮುಂದೆ.
ನನಗೆ ಬರುವುದೋ ಒಂದೇ ಸಂಬಳ,
ಪಲ್ಟಿ ಹೊಡೆದರೂ ಸಿಗುತಿಲ್ಲ ಗಿಂಬಳ.
ವಿದ್ಯಾರ್ಥಿ ಬವನ, ಶಾಂತಿಸಾಗರ್ ಎಂದರೆ ನಾನು,
KFC, Mcdonalds ಎನ್ನುವೆ ನೀನು, ಸಂಪಿಗೆ ರೋಡ್,
ಜಯನಗರ ಎಂದರೆ ನಾನು, Forum, Garuda Mall ಎಂದು ನೀನು,
ಒಳ್ಳೇ offerಗಳಿವೆ ಎಂದರೆ ನಾನು,ಪಾಪರ್ ಮಾಡುವೆ ನೀನು.
ಅರುಣ್ ಐಸ್ ಕ್ರೀಮ್ ಎಂದರೆ ನಾನು, Baskin Robins ಎನ್ನುವೆ ನೀನು,
ರೋಡ್‌ಸೈಡ್ ಟೀ ಗೆ ನಾನು ಮುಂದು,Coffee Day, Barista ಗೆ ನೀ ಮುಂದು.
ಗೆಳತಿ, ಇದು ಪ್ರೀತಿಯೇ ಎಂದರೆ ನಾನು, ಮುಗುಳ್ನಕ್ಕು ನಾಚಿಸುವೆ ನನನ್ನು ನೀನು.
ಎಂದು ಆಗುವುದೋ ಖಾಲಿ  ನನ್ನ ಜೇಬು,ಎಂಬ ಆತಂಕದಲ್ಲಿ ನಾನಿಂದು.
Credit card ಬಿಲ್ಲು ಗಗನಕ್ಕೆ, Bank Balance ಪಾತಲಕ್ಕೆ.
ಕಾಮನಬಿಲ್ಲಿಗೆ ಏನೇ ಆದರೂ 7 ಬಣ್ಣ, ನನ್ನ ಗೆಳತಿಗೋ ಗಳಿಗೆಗೊಂದು ಬಣ್ಣ,
ನಕ್ಕರೆ ಜೊತೆಗೆ ನಗಬೇಕು,ಅತ್ತರೆ ಸುಮ್ಮನೇ ಪಕ್ಕದಲ್ಲಿ ಕೂತು ನೋಡಬೇಕು.
ಹೆಚ್ಚು ಮಾತನಾಡಿದರೆ ಕೊಡುವಳು ಕಾಟ, ಅಯೋ ರಾಮ, ಯಾಕೆ ಹೇಳಲಿ ನನ್ನ ಪರದಾಟ.
ಎಲ್ಲ ಹುಡುಗಿರು ಹೀಗೇನ? ಅಥವ ನನ್ನ ಪಾಡು ಮಾತ್ರ ಹೀಗೇನ?

Thursday, November 4, 2010



ನಿನ್ನ ಕೊರಳ ನೋಡಿ
ಕಡಲೂ ತನ್ನಲ್ಲಿದ್ದ ಮುತ್ತುಗಳನ್ನೆಲ್ಲ 
ತೀರಕ್ಕೆ ಚೆಲ್ಲಿತ್ತು ...
ನಿನ್ನ ತುಟಿಯ ನೋಡಿ 
ನನ್ನಲ್ಲಿ ಇರುವ 
ಒಂದು ಮುತ್ತೂ ಖಾಲಿಯಾಗಿತ್ತು....! 

Thursday, October 14, 2010



ನನ್ನ ಮನದಲ್ಲಿ ಮೈಯ ಕಣ ಕಣದಲ್ಲಿ ತುಂಬಿ ಬರುತಿದೆ 
ಈ ನಿನ್ನ ಸುಂದರ  ರೂಪ
ಬೀಸೋ ತಂಗಾಳಿಯಲಿ ,ಚಿಮ್ಮಿ ಹರಿಯುವ ನೀರಿನಲಿ 
ತೇಲಿ ಬರುತಿದೆ ನಿನ್ನ ಸವಿ ನೆನಪು .
ಹುಣ್ಣಿಮೆಯ ಬೆಳದಿಂಗಳಲಿ ಮಂಜಿನ ಹನಿಗಳಲಿ 
ಈ ಸುತ್ತ ಪರಿಸರದಿ ನೀನೇ ನೀನು ....
ನಿದ್ದೆಯಾ ಸವಿಗನಸಿನಲಿ ನೀನು ಬಂದೆ 
ಈ ಹೃದಯ ತರಂಗಗಳನು ಮೀಟಿ ನಿಂತೆ..
ಆ ಕಣ್ಣ ನೋಟದಲಿ ಮನಸೆಳೆದೆ ನನ್ನ
ಈ ಹೃದಯ ಪ್ರೀತಿಸಿತು ಅರಿವಿಲ್ಲದೆ ನಿನ್ನ 
ನನಗರಿವಿಲ್ಲದೆ ನಿನ್ನ ಪ್ರೀತಿಸಿದೆ 
ನಿನಗಾಗಿ ನನ್ನೀ ಹೃದಯವನು ಮುಡುಪಾಗಿಟ್ಟೆ.
ನಿನ್ನ ಪ್ರೀತಿಯೇ ಶಾಶ್ವತವಾದರೆ, ಆಹಾ ಅದೆಷ್ಟು ಸುಂದರ ..!
ನಿನ್ನ ಪ್ರೀತಿಯೊಳು ನಾ ಹುಚ್ಚನಾದಾಗ ,
ನನ್ನ ನೋಡಿ ನಗುತ ನೀ ದೂರ ಹೋದೆ ..
ನಿನ್ನ ಹುಡುಕುತ ಕನವರಿಸಿ ನಡೆದಾಗ ,
ಕ್ಷಣದೊಳಗೆ ಮಾಯವಾದೆ ಈ ಕಣ್ಣಿನಿಂದ 
ನಿನ್ನ ಕಾಣದೆ ನಾ ಪರಿತಪಿಸುತಿರುವಾಗ 
ಸದ್ದಿಲ್ಲದೆ ಬಂದೆ ಕನಸಿನಲಿ ನನ್ನ 
ನೀನೆನಗೆ ಚೈತನ್ಯ, ನಿನ್ನ ಹೊರತೆಲ್ಲ ಶೂನ್ಯ 
ಈ ನಿನ್ನ ಪ್ರೀತಿಯಲೇ ಇರುವುದೆನ್ನ ಜೀವನ ..... !        
   

Thursday, October 7, 2010

ಹೀಗೊಂದು ಕುಡುಕರ ಲೆಕ್ಕ .....

..
ಮೊನ್ನೆ ಏಕೋ ಈ ಫೋಟೋ ನೋಡಿ ಕಾಲೇಜ್ ನ ದಿನಗಳು ನೆನಪಿಗೆ ಬಂದವು .ನಾವು ಆರು ಜನ ಪಿಯುಸಿ   ಯಿಂದಲೂ ಒಳ್ಳೆ ಸ್ನೇಹಿತರು ಆಗ್ಗಾಗ್ಗೆ ಎಲ್ಲರೂ ಸೇರಿ ಟ್ರಿಪ್ ಗೆ ಹೋಗುವ ಪರಿಪಾಠವಿತ್ತು . ಪ್ರತಿ ಸಲ ರಾತ್ರಿ ಉಳಿಯುವ ಹಾಗೆ ಟ್ರಿಪ್ ಗೆ ಹೋಗುತ್ತಿದ್ದೆವು . ಏನೇ ಹೇಳಿ ಆ ತರಹದ ಟ್ರಿಪ್ ನ ಮಜವೇ ಬೇರೆ. ನಮ್ಮ ಆರು ಜನರಲ್ಲಿ ಮೂರೂ ಜನ ಪಕ್ಕಾ ಕುಡುಕರು ( ತಪ್ಪು ತಿಳಿಯಬೇಡಿ, ಅವರೂ ಈ ತರಾ ಟ್ರಿಪ್ ಗೆ ಹೋದಾಗ ಮಾತ್ರ ಕುಡಿಯುತ್ತಾರೆ  )  ಎಲ್ಲರೂ ಸೇರಿ ಅಡಿಗೆ ಗೆ ಬೇಕಾದ ಸಾಮನುಗಳನ್ನ ತೆಗೆದುಕೊಂದು ಹೋಗುತ್ತಿದ್ದೆವು .ಅಲ್ಲಿ ಎಲ್ಲವನ್ನು ತಯಾರಿ ಮಾಡಿಕೊಂಡು ರಾತ್ರಿ ಬೆಂಕಿಯನ್ನು ಹಾಕಿಕೊಂಡು ಊಟ ಮಾಡುವುದು (ಜೊತೆಗೆ ಲೈಟುಗಳು ಇರುತ್ತಿದ್ದವು) ರೂಢಿ . ಒಮ್ಮೆ ಎಲ್ಲ ಹೀಗೆ ಸೇರಿ  ಸಾತೊಡ್ಡಿ ಗೆ ಹೋಗಿದ್ದೆವು .ಎಲ್ಲ ಸೇರಿ ಆರು ಕಿಲೋಮೀಟರು ನಡೆಯುತ್ತಾ ಸಂಜೆ 5 ಘಂಟೆ ಸುಮಾರಿಗೆ ಸಾತೊಡ್ಡಿ ತಲುಪಿದ್ದೆವು . ಮದ್ಯಾಹ್ನ ವೆ ಯಲ್ಲಾಪುರಕ್ಕೆ ಬಂದು ಬೇಕಾದ ಸಾಮಾನುಗಳನ್ನೂ ತೆಗೆದುಕೊಂಡಿದ್ದೆವು . ಅದರಲ್ಲೂ ಎರಡು ರೀತಿಯಲ್ಲಿ ಸಾಮಾನು ತೆಗೆದುಕೊಳ್ಳುವುದಿತ್ತು. ನಮಗೆ ಊಟ ಮಾಡಲು ಹಾಗೂ ಅವರಿಗೆ ಗುಂಡು ಪಾರ್ಟಿ ಮಾಡಲು. ಅದರಲ್ಲೂ ತಮಗೆ ಬೇಕಾದ ಬ್ರಾಂಡುಗಳನ್ನೇ ಹೇಳುತ್ತಿದ್ದರು .ಅದನ್ನು ಅವರವರೆ ಹೋಗಿ ತಂದುಕೊಳ್ಳುತ್ತಿದ್ದದು ನನ್ನ ಪುಣ್ಯ .ಆದರೆ ಅಡಿಗೆಯ ಲೆಕ್ಕ ಮಾತ್ರ ನನಗೆ ಬರುತ್ತಿತ್ತು . (ದುಡ್ಡು ಮಾತ್ರ ಬರುತ್ತಿರಲಿಲ್ಲ). ಸಂಜೆ ಅಂತು ಇಂತೂ ಎಲ್ಲರೂ ಸಾತೊಡ್ಡಿ ಬಸ್ ಸ್ಟ್ಯಾಂಡ್ ಗೆ ಬಂದು ಇಳಿಯುವಾಗ ಎಲ್ಲ ಸರಿನೆ ಇತ್ತು .ಆದರೆ ಎಲ್ಲ ಬ್ಯಾಗ್ ಗಳನ್ನೂ ಹೊತ್ತುಕೊಂಡು 6 ಕಿ ,ಮೀ ನಡೆಯಬೇಕಿತ್ತು . ಸರಿ ಎಲ್ಲ ಒಂದೊಂದು ಬ್ಯಾಗ್ ಗಳನ್ನೂ ಹೊತ್ತುಕೊಂಡು ಹೆಜ್ಜೆ ಹಾಕಲು ಶುರುಮಾಡಿದೆವು . ನಾನು ಮೊದಲೇ ನಿಮ್ಮ ಬಾಟಲುಗಳಿಗೆ ನೀವೇ ಜವಾಬ್ದಾರರು, ನಾನಂತು ಹೊರುವುದಿಲ್ಲ ಎಂದು ಹೇಳಿಬಿಟ್ಟಿದ್ದೆ . ಎಲ್ಲದಕ್ಕಿಂತ ಅದರ ಭಾರವೇ ಜಾಸ್ತಿ ಇತ್ತು .ಅಂತು ಅವತ್ತಿನ ಸ್ಪೆಷಲ್ , ರೋಟಿ, egg  rice, ಮಿರ್ಚಿ , ಜೊತೆಗೆ ಒಂದಷ್ಟು ಖಾರಾ ಪ್ಯಾಕ್ ,ಜೊತೆಗೊಂದಿಷ್ಟು ತರಕಾರಿ ಎಲ್ಲ ಇತ್ತು . ಇದನ್ನೆಲ್ಲಾ ತಗೆದುಕೊಳ್ಳುವಾಗಲೇ, ಒಬ್ಬ ಗೆಳೆಯನ ಸಂಭಂದಿಕ ಸಿಕ್ಕಿ , ನಮ್ಮನೆಗೆ ಬರಲೇ ಬೇಕೆಂದು ಹಠ ಹಿಡಿದಿದ್ದ . ಅಂಗಡಿಯವನೂ ಸಹ ಮನೆಯಲ್ಲಿ  ಏನು ವಿಶೇಷ ನಾ?  ಅಂತ ಕೇಳಿದ್ದ. ಅಂತೂ ಇಂತೂ ಇದನ್ನೆಲ್ಲಾ ತೆಗೆದುಕೊಂಡಾಗ ಅಂಗಡಿಯವನಿಗೂ ಲೆಕ್ಕ ತಪ್ಪಿ 3  ಖಾರ ಪ್ಯಾಕ್  ನ ಲೆಕ್ಕವೇ ತಪ್ಪಿ ಹೋಗಿತ್ತು.  ದಾರಿಯಲ್ಲಿ ಇದನ್ನೆಲ್ಲಾ ಹೇಳಿಕೊಂಡು ನಗುತ್ತ ಹೋಗುತ್ತಿರುವಾಗಲೇ ,ಒಬ್ಬ ಗೆಳೆಯನಿಗೆ  ಜ್ಞಾನೋದಯವಾಗಿತ್ತು . ಅಷ್ಟೂ ಬಾಟಲುಗಳನ್ನ ಅಲ್ಲಿ  ಹೊತ್ತುಕೊಂಡು ಹೋಗಿ ಕುಡಿಯುವ ಬದಲು ಸ್ವಲ್ಪ ಇಲ್ಲೇ ಕುಡಿದು ಬಿಟ್ಟರೆ , ಭಾರವು ಕಡಿಮೆಯಾಗುತ್ತದಲ್ಲ ಎನ್ನಬೇಕೆ ?. ಹೇಳಿದ್ದೇ ಬಾಟಲು ತೆಗೆದು ಕುಡಿಯಲೂ ಶುರು ಮಾಡಿಬಿಟ್ಟ . ಅದನ್ನು ನೋಡಿ ಉಳಿದವರೂ ಸಹ ತಮ್ಮ ಪಾಲು ಎಲ್ಲಿ ಕಡಿಮೆಯಾಗುವುದೋ ಎಂದು ಅವರೂ ಶುರು ಮಾಡಿಬಿಟ್ಟರು . ಕುಡಿಯುವುದೂ ಒಂದು ಕಲೆಯಂತೆ ಒಬ್ಬ ಶುರು ಮಾಡಿಬಿಟ್ಟ . ನಾನು ಹೇಳಪ್ಪ ಅಂತಂದೆ . ಆಗ ಶುರು ಮಾಡಿದ , ಕುಡಿದರೆ ಅರಗಿಸಿ ಕೊಳ್ಳಬೇಕಂತೆ , ಆಕಡೆ ,ಈಕಡೆ ತೂರಾಡಬಾರದಂತೆ, ಇಂಪಾರ್ಟೆಂಟು ಏನೆಂದರೆ ಕುಡಿದು ಹೆಚ್ಚಾದರೂ ಸಹ ವಾಂತಿ ಮಾಡಿಕೊಳ್ಳಬಾರದಂತೆ.ಅದಾಗಲೇ ಶುರುವಾಗಿತ್ತು ಚಾಲೆಂಜುಗಳು , ನಾನು ವಾಂತಿ  ಮಾಡಿಕೊಳ್ಳುವುದಿಲ್ಲ ಎಂದು . ಒಬ್ಬನಂತೂ ಅವನಿಗೆ ಹೇಳಿದ್ದಕ್ಕೆ ಕೂಗಾಡಲೇ ಶುರು ಮಾಡಿದ್ದ .ಅಂತೂ ಇಂತೂ ಎಲ್ಲ ಸಂಬಾಳಿಸಿ , ಸಾತೊಡ್ಡಿ ತಲುಪಿಯಾಗಿತ್ತು . ಅಲ್ಲಿ ನಿಂತ ಹಿನ್ನೀರ ನೋಡಿದಾಗ ಎಲ್ಲರಿಗೂ ನೆನಪಾಗಿತ್ತು ,ಯಾರೂ ಕುಡಿಯುವ ನೀರೇ ತಂದಿಲ್ಲ ಎಂದು . ಅದಾಗಲೇ ಒಬ್ಬ ಡೈಲಾಗ್ ಬಿಟ್ಟಿದ್ದ , ಹರಿಯುವ ನೀರು ಶುದ್ದ ಕಣ್ರೋ ಎಂದು .ಸರಿ ಎಂದು ಎಲ್ಲರೂ ತಂದ ಮೂಟೆಯನ್ನೆಲ್ಲ ಬೀಸಾಕಿ ಫಾಲ್ಸ್ ಕಡೆ ನಡೆದಿದ್ದೆವು . ಸುಮಾರು ಅರ್ಧ ಗಂಟೆ ಕಳೆದಿರಬೇಕು , ಸ್ವಲ್ಪ ಹಸಿವಾಗಲು ಶುರುವಾಗಿತ್ತು. ಖಾರ ಬ್ರೆಡ್ಡುಗಳನ್ನಾದ್ರೂ ತಿನ್ನೋಣವೆಂದು ಮೊದಲಿಗೆ ಬಂದ ಒಬ್ಬ ಗೆಳೆಯ ಕೂಗಿಕೊಂಡ ,ನಾವೆಲ್ಲಾ ಏನಾಯ್ತೆಂದು ಬಂದು ನೋಡಿದಾಗ ಅವನು ನಗುತ್ತ  ಮರದ ಕಡೆ ನೋಡುತ್ತಿದ್ದ . ನಾವೆಲ್ಲಾ ಏನೆಂದು ನೋಡಿದಾಗ ಸುಮಾರು ಹತ್ತಿಪ್ಪತ್ತು ಮಂಗಗಳು ನಮ್ಮ ಪುಕ್ಕಟೆ ಬಂದ ಖಾರಾ ಪ್ಯಾಕ್ ಗಳನ್ನೂ, ಬ್ರೆಡ್ ಗಳನ್ನೂ ಅವೆಲ್ಲ ಸೇರಿ ಪಾರ್ಟಿ ಮಾಡಾಗಿತ್ತು .ತಂದ 50 ಮೊಟ್ಟೆಗಳಲ್ಲಿ ಅರ್ಧಕರ್ಧ ಒಡೆದು ಹೋಗಿತ್ತು . ಮಿರ್ಚಿ ಮಾಡಲೆಂದೇ ತಂದ  2Kg  ಮೈದ  ಹಿಟ್ಟನ್ನು  ಸುತ್ತ ಮುತ್ತೆಲ್ಲ ಹರಡಿ ಹಾಕಿದ್ದವು .ನಮ್ಮ ಎಲ್ಲ ಪ್ಲಾನು  ತಲೆಕೆಳಗಾಗಿತ್ತು . ಸರಿ ಏನು ಮಾಡುವುದೆಂದು ಯೋಚನೆ ಮಾಡಲು ಶುರು ಮಾಡಿದೆವು . ಇದ್ದಿದರಲ್ಲಿ ಮೊಟ್ಟೆಗಳು ಒಡೆದಿದ್ದರೂ ಎಲ್ಲವೂ ಕೊಟ್ಟೆಯಲ್ಲಿ ಭದ್ರವಾಗಿತ್ತು .ಮೆಣಸು ಮತ್ತು ತರಕಾರಿಯನ್ನು ಮುಟ್ಟಿರಲಿಲ್ಲ . ನಂತರ ಒಬ್ಬರು ಅಡಿಗೆ ಗೆ ತಯಾರಿ ಮಾಡುವುದು ,ಮತ್ತಿಬ್ಬರು ಅಲ್ಲೇ ಸನಿಹದಲ್ಲಿದ್ದ (ಸುಮಾರು 1  ಕಿ ಮೀ) ದೂರದಲ್ಲಿದ್ದ ಮನೆಗೆ ಹೋಗಿ ಮಿರ್ಚಿ ಮಾಡಲು ಬೇಕಾದ ಮೈದಾ ಹಿಟ್ಟು ಏನಾದರೂ ಸಿಗುವುದೋ ನೋಡುವುದು ಎಂದು ,ನಾನು ಮತ್ತೊಬ್ಬ ಗೆಳೆಯ ಇಬ್ಬರೂ ಬ್ಯಾಟರಿ ಹಿಡಿದು ಹೊರೆಟೆವು .ಅಂತು ಅಲ್ಲಿಗೆ ಹೋಗಿ ಕೇಳಿದಾಗ ನಮ್ಮ ಪುಣ್ಯಕ್ಕೆ ಸುಮಾರು  1 Kg ಯಷ್ಟು ಹಿಟ್ಟು ಇತ್ತು ಅದೂ ಆ ಬಡವೆ ಎಲ್ಲಾ ಪುರಾಣ ಹೇಳುವವರೆಗೂ ಬಿಟ್ಟಿರಲಿಲ್ಲ .ಕೊನೆಗೆ ಎಷ್ಟೆಂದು ಕೇಳಿದಾಗ ಕೊಡಿ ಅಂತಂದಳು . ಸರಿ ಎಂದು 50 ರೂಪಾಯಿಯನ್ನು ತೆಗೆದು ಕೊಟ್ಟೆ . ಚೇಂಜ್ ತರಲು ಮನೆ ಒಳಗೆ ಹೋದ ಆ ಬಡವೆ 15 ನಿಮಿಷ ಆದ ಮೇಲೆ ಬಂದು ಚೇಂಜ್  ಇಲ್ವಲ್ಲ ಅಂತಂದಳು . ನನ್ನ ಕರ್ಮ ಇವತ್ತೆಲ್ಲ ಹೀಗೆ ಆಗುತ್ತಿದೆ ಎಂದು , ಸರಿ ಬಿಡಿ ಪರವಾಗಿಲ್ಲ ಎಂದು ಬಂದೆವು . ನಮಗೆ ದುಡ್ಡು ಹೋದರು ಮೈದಾ ಹಿಟ್ಟು ಸಿಕ್ಕಿದ್ದಕ್ಕೆ ಸ್ವಲ್ಪ ಕುಶಿಯಾಗಿತ್ತು. ಅಂತು ಗೆಳೆಯರ ಹತ್ತಿರ ಬಂದು ಸೇರಿ ಕೊಂಡಾಗ ಅಡುಗೆ ತಯಾರಿ ಸುಮಾರಿಗೆ ಮುಗಿದಿತ್ತು .ಒಬ್ಬ ಮೈದಾ ಹಿಟ್ಟನ್ನು ತೆಗೆದು ಕೊಂಡು ಕಲಸಲು ನೋಡಿದವ , ಪ್ರಾಣಿ , ಕ್ರಿಮಿ, ಕೀಟಗಳ ಹಿಂಸೆ ಮಹಾಪಾಪ ಏನು ಮಾಡಲಿ ?ಎಂದ . ಏನಪ್ಪಾ ಈಗಲೇ ಜಾಸ್ತಿಯಾಯ್ತ ? ಎಂದು ಕೇಳಿದಾಗ ,ಬಂದು ನೋಡು ಎಂದ . ಎಲ್ಲರೂ ಹೋಗಿ ನೋಡಿದಾಗ ಅದರಲ್ಲಿ  ಸುಮಾರು ಅರ್ಧ Kg ಮೈದಾ ಹಿಟ್ಟು ಮತ್ತರ್ಧ Kg  ಸುರಭಿ (ಕೀಟ) ಇದ್ದವು .
ಎಲ್ಲಾ ಹಿಡಿ ಶಾಪ ಹಾಕುತ್ತ ಅದನ್ನೇ ಚೊಕ್ಕ ಮಾಡಲು ಶುರು ಮಾಡಿದೆವು . ಮತ್ತೊಬ್ಬನಿಗೆ ಏನು ಹೊಳೆಯಿತೋ ಏನೋ,  ಒಂದು ಪ್ಲೇಟು ಮತ್ತೊಂದು ಬ್ಯಾಟರಿ ಹಿಡಿದು ಹೊರಟೆ ಬಿಟ್ಟ . ಆಮೇಲೆ ಗೊತ್ತಾಯ್ತು ಅವನು ಮಂಗಗಳು ನೆಲದ ಮೇಲೆ ,ಬದಿಗೆ ಇದ್ದ ಕಂದಕದಲ್ಲಿ  ಚೆಲ್ಲಿದ್ದ ಮೈದಾ ಹಿಟ್ಟನ್ನು ತರಲು  ಹೋಗಿದ್ದ ಎಂದು . ಇದ್ದಿದ್ದರಲ್ಲಿ ಮಂಗಗಳು ಕೊಟ್ಟೆಯಲ್ಲಿ  ಸ್ವಲ್ಪ ಉಳಿಸಿ ಹೋಗಿದ್ದವು.ಅಂತೂ ಎಲ್ಲಾ ಚೊಕ್ಕ ಮಾಡಿ , ಒಬ್ಬ ಸ್ಪೆಷಲಿಸ್ಟ್ ಆಮ್ಲೆಟ್, ಮಿರ್ಚಿ , ಎಲ್ಲಾ ಮಾಡಲು ಬಂಡಿಯ ಎದುರು ಕುಳಿತ . ಅವನು ಎಲ್ಲಾ ಹದ ಮಾಡಿ ಕರಿಯಲು ಕುಳಿತಾಗಲೇ ಒಬ್ಬೊಬ್ಬರಾಗಿ (ಗುಂಡು ಪಾರ್ಟಿಯೂ ಸೇರಿ)  ರುಚಿ ನೋಡಲು ಶುರು ಮಾಡಿದ್ದರು.ಎಲ್ಲವೂ ತೆಗೆಯಲು ಇಟ್ಟ ಪ್ಲೇಟ್ ಬದಲಾಗಿ ಒಬ್ಬೊಬ್ಬರ ಹೊಟ್ಟೆ ಸೇರುತ್ತಿದ್ದವು. ನಮಗೆ ಆವಾಗಲೇ ಗೊತ್ತಾಗಿದ್ದು ಮಿರ್ಚಿಗೆ ಮೈದಾ ಹಿಟ್ಟಿನ ಜೊತೆ ರುಚಿಗೆ ತಕ್ಕಷ್ಟು ಉಪ್ಪಿನ ಜೊತೆ ಸುರಭಿಯನ್ನು (ಕೀಟ) ಸೇರಿಸಿದರೆ ಮತ್ತೂ ರುಚಿಯಾಗುತ್ತದೆ ಎಂದು.ಅಂತೂ ಮಾಡಿದ್ದನ್ನೆಲ್ಲ ತಿಂದು ಮುಗಿಸಿ ಹಾಸಿಗೆ ಹಾಸಿದೆವು ಅಷ್ಟರ ನಂತರ ಶುರುವಾಗಿತ್ತು ಗೆಳೆಯರ ಗುಂಡಿನ ಕರಾಮತ್ತು . ಅಲ್ಲೊಬ್ಬ ಮೊದಲ ಬಾರಿಗೆ ರುಚಿ ನೋಡಿದ್ದ , ಅದೂ ಒಂದೇ ಸಲ  ಜಾಸ್ತಿ ಕುಡಿಯಲು ಹೆದರಿ , ಸ್ಪೂನ್ ಲ್ಲಿ ಟ್ರೈ ಮಾಡಿದ . ಅವನ ಮುಖವನ್ನೊಮ್ಮೆ ನೋಡಬೇಕಾಗಿತ್ತು . ಆಮೇಲೆ ಒಂದಷ್ಟು ಸಕ್ಕರೆಯನ್ನು ಬಾಯಲ್ಲಿ ತುರುಕಿಕೊಂಡ ಎನ್ನಿ. ಸುಮಾರು ಮದ್ಯ ರಾತ್ರಿ 12 ಗಂಟೆಗೆ ಎಲ್ಲರಿಗೂ ಕುಡಿದು ಮುಗಿಸಿಯಾಗಿತ್ತು . ಇದ್ದುದರಲ್ಲಿ ನಾವೊಂದು  ಮೂರ್ನಾಲ್ಕು ಜನ ಮಹಾ ಪಾಪಿಗಳು , ಎಲ್ಲರನ್ನು ಮದ್ಯ ಸೇರಿಸಿ ಎರಡೂ ಕಡೆ ಇಬ್ಬಿಬ್ಬರು ಮಲಗುವುದು ಎಂದು ತೀರ್ಮಾನ ಮಾಡಿಯಾಗಿತ್ತು . ಕುಡಿದ ಅಮಲಿನಲ್ಲಿ ಎಲ್ಲಾದರೂ ಹೋಗಿ ಹೊಳೆ ಹಾರಿಕೊಂಡಾರು ಎಂಬ ಭಯ ನಮಗಿತ್ತು . ಒಬ್ಬನಂತೂ ಆಗಲೇ ತನ್ನ ಪ್ರತಾಪ ತೋರಿಸಿದ್ದ (2  ಸಲ ವಾಂತಿ ಮಾಡಿಕೊಂಡು ಸುಸ್ತಾಗಿ ಮಲಗಿ ಬಿಟ್ಟಿದ್ದ) . ನಾನು ಸ್ವಲ್ಪದರಲ್ಲಿ ಮೈ ಮೇಲೆ ಬೀಳಿಸಿಕೊಳ್ಳುವದರಿಂದ ಬಚಾವಾಗಿದ್ದೆ. ಮತ್ತೊಬ್ಬ ನಾನೊಂದು ಚೂರೂ ವಾಂತಿ ಮಾಡಿಕೊಳ್ಳುವುದಿಲ್ಲ ಎಂದು ಕೊಚ್ಚಿಕೊಂಡವನು ಒಂದು ಮೂಲೆಯಲ್ಲಿ ಹೋಗಿ ಬೆರಳುಗಳನ್ನು ಗಂಟಲ ವರೆಗೂ ತೂರಿಸಿಕೊಂಡು ವಾಂತಿ ಮಾಡುವ ಪ್ರಯತ್ನದಲ್ಲಿದ್ದ . ಅಂತೂ ಅವನು ಸುಮಾರು ಹೊತ್ತು ಟ್ರೈ ಮಾಡಿ ಸರಿಯಾದ ಎನ್ನಿ . ಮತ್ತೆಲ್ಲ ಗೆಳೆಯರು ಅದಾಗಲೇ ಸುಸ್ತಾಗಿ ಮಲಗಿಬಿಟ್ಟಿದ್ದರು. ಅಲ್ಲಿ ನಿದ್ದೆ ಮಾಡದಿದ್ದವನು ನಾನೊಬ್ಬನೇ . ಈಗಲೂ ಕೆಲವೊಮ್ಮೆ ಎಲ್ಲಾ ಸಿಕ್ಕಾಗ ಹೇಳಿಕೊಂಡು ನಗುವುದಿದೆ . ಕುಡುಕರ ಲೆಕ್ಕ ಎಂದು .                          

Thursday, September 30, 2010

ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !



ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಎಲ್ಲ ಸಾಲಾಗಿ ನಿಲ್ಲುವರು ಪರಮಾತ್ಮನೆಂದು 
ಅದೆಂತ ಭಕ್ತಿಯೋ ನಾ ಕಾಣೆ 
ಮೊದಮೊದಲು ಸ್ವಲ್ಪ ಒಗರಂತೆ ,
ಕೆಲವೊಂದು ಹುಳಿಯಂತೆ .ಕೆಲಕೆಲವು 
ಕಹಿಯಂತೆ .... ಕುಡಿದಾದಮೇಲೊಂದು
ಗಾಳಿಯಲ್ಲೇ ತೇಲುವರಂತೆ...
ಅಕ್ಕ ಪಕ್ಕದಲ್ಲೊಂದು, ನೆಚ್ಚಿಕೊಳ್ಳಲೊಂದು 
ಬೇಕಂತೆ ಉಪ್ಪು ಹುಳಿ ಕಾರ ....!
 ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಬೇರೆ ಬೇರೆ ವೇರಯ್ಟಿ ಗಳಂತೆ 
ಅದಕ್ಕೂ ಬೇರೆ ರೆಟಂತೆ
ಕುಡಿದರೆ ಸ್ವರ್ಗ ಸುಖ ಗ್ಯಾರಂಟಿ ಯಂತೆ  
  ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಈಗ ಎಲ್ಲ  ಕಾಮನ್ ಅಂತೆ,  
ಅದಕ್ಕಿಲ್ಲವಂತೆ ಭೇಧ ಭಾವ , 
ಪಾರ್ಟಿ ಎಂಬ ಪೂಜೆಯಲ್ಲಿ ಅದೇ 
ಪವಿತ್ರ ತೀರ್ಥವಂತೆ ! .

Thursday, September 23, 2010

ಮಧ್ಯರಾತ್ರಿ ಚಂದ್ರ




ಮಧ್ಯರಾತ್ರಿ ಚಂದ್ರ ಛಳಿಯ ಹೊತ್ತು ತಂದ 
 ಬೀಸೋ ಗಾಳಿ ,ಮಂಜಿನ ಹನಿ ,
ಬೆರೆತ ಕ್ಷಣ ಈ ಧರೆಗೆ
ಮಧ್ಯರಾತ್ರಿ ಚಂದ್ರ ಛಳಿಯ ಹೊತ್ತು ತಂದ 
ಹನಿ ಹನಿ ಮುತ್ತು ಎಲೆಯ ಮೇಲೆ 
ಇಬ್ಬನಿ ಸಾಲು ಹಾದಿಗುಂಟ ..
ತೋರಿಸುತ್ತಿದ್ದ ಬೆಳ್ಳಂಬೆಳಕ 
ಮಧ್ಯರಾತ್ರಿ ಚಂದ್ರ ಧರೆಗೆ 
ಬೆಳ್ಳಿ ಬೆಳಕ ತಂದ 
ಮಾಗಿದ ಚಳಿಯಲಿ ಹೊತ್ತು ಕಳೆದಂತೆ
ಮುತ್ತುಗಳು ಒಡೆದಂತೆ 
ಸಾಲು ತಪ್ಪಿದ ಇಬ್ಬನಿಗಳ ನೊಡುತ್ತ
ನಿಂತ ಚಂದ್ರ,
ಪಡುವಣದ ಮೂಲೆಯಲಿ !

Sunday, September 19, 2010

(ನಿ)ವೇದನೆ



ಕನಸುಗಳಲ್ಲಿ....
ನೀ
ಹಾಡುವುದೆಲ್ಲ
ಅರ್ಥವಾಗುವುದು ನಲ್ಲೇ.....
ಆದರೆ,
ನೆನಪುಗಳಲ್ಲಿ
ನೀ
ಕಾಡುವುದೇತಕೆ ಅರ್ಥವಾಗದಲ್ಲೇ!

Friday, September 17, 2010

ಈ ವಯಸೇ ಹೀಗೆ,




ಈ ವಯಸೇ ಹೀಗೆ,
ಕನಸುಗಳ ಬೆನ್ನು ಹತ್ತಿ ವಾಸ್ತವಗಳ ಕಣ್ಣು ಕಟ್ಟಿ ,
ಕಲ್ಪನೆಗಳ ಬಿಸಿಲುಕುದುರೆಯನೆರುವ
ಈ ವಯಸೇ ಹೀಗೆ ...
ಪ್ರೀತಿಯೆಂಬ ಮೋಡಿಯಲಿ ಸಿಲುಕಿ ,
ಬಾವನೆಗಳ ಅಡಿಯಲಿ ನಲುಗಿ ,
ನೋವಿನಲೂ ನಲಿವನ್ನು ಕಾಣುವ
ಈ ವಯಸೇ ಹೀಗೆ ...
ಬಯಸುವುದು ಕಣ್ಣಿಗೆ ಕಾಣಿಸುವುದ ,
ಅರಸುವುದು ಮನಸಿಗೆ ಅನಿಸುವುದ ..
ಕೈಗೆ ಸಿಗದಾಗ ಮುಮ್ಮಲ ಮರುಗುವ ,
ಈ ವಯಸೇ ಹೀಗೆ ...
ಕನಸುಗಳಲಿ ಹುಟ್ಟಿ ಕಲ್ಪನೆಗಳಲಿ ಸಾಯುವ
ಈ ವಯಸೇ ಹೀಗೆ ...
ಹುಚ್ಚು ವಯಸು ...... 









Sunday, September 5, 2010

ಆ ಕೆಂಪು ಗುಲಾಬಿ





ಕೊನೆಗೂ ನಿನಗೆ ಕೊಡಲಾಗದೆ ಇರುವ
ಆ ಕೆಂಪು ಗುಲಾಬಿ , ಇನ್ನೂ ನನ್ನ ಪುಸ್ತಕದ
ಮದ್ಯೆ ಹಾಗೆ ಇದೆ ,,
ಪ್ರತೀ ಸಲ ಪುಟವನ್ನು ತಿರುವಿದಾಗಲೂ
ಉದುರುತ್ತಿವೆ ಕಪ್ಪಾದ ಒಂದೊಂದೇ
ಎಸಳುಗಳು ....ಮಸುಕಾದ ನಿನ್ನ ನೆನಪಿನ ಹಾಗೆ !

Sunday, August 29, 2010

ಮುಸ್ಸಂಜೆ ಹೊತ್ತು




ಮುಸ್ಸಂಜೆಯ ಹೊತ್ತು ,
ನೆನಪುಗಳು ಕಾಡುವ ಹೊತ್ತು.
ಹೃದಯ ಬುಟ್ಟಿಯ ತುಂಬಾ ಮಾಗಿದ ಸಿಹಿ ನೆನಪುಗಳು
ಕಾಡುವ ಹೊತ್ತು ಮುಸ್ಸಂಜೆಯ ಹೊತ್ತು.
ಕಣ್ಣ ನೋಟ ತುಂಬ ಕಾಣುವ ಸಿಹಿ ಕನಸುಗಳು
ಮನಸ ಮೂಲೆಯ ಬದಿ ನೋವಿನ ನನಸು ,ಕಾಡುವ ಹೊತ್ತು
ಮುಸ್ಸಂಜೆಯ ಹೊತ್ತು .
ಸಿಹಿ ಕನಸುಗಳ ಜೊತೆಗೆ ಬಾವಗಳ ತುಳುಕಾಟ
ಕಹಿ ನನಸುಗಳ ಪಾಲಿಗೆ ದುಃಖಗಳ ಮುಲುಗಾಟ,
ಕಾಡುವ ಹೊತ್ತು ಮುಸ್ಸಂಜೆ ಹೊತ್ತು .
ಹೊತ್ತು ಕಳೆದಂತೆ ಮುಗಿಯುವ ಮಾಗಿದ ಸಿಹಿ ನೆನಪುಗಳು
ಯಾರಿಗೂ ಬೇಡದೆ ಉಳಿಯುವ ಕಹಿನೆನಪುಗಳು
ಮತ್ತೆ ಮತ್ತೆ ಕಾಡುವವು ಮುಸ್ಸಂಜೆ ಹೊತ್ತು

Friday, August 27, 2010





ಪ್ರತೀ ಸಲ  ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ
ಮನದ ಬಾವನೆಗಳೆಲ್ಲ ಬೆತ್ತಲಾಗುತ್ತವೆ ,
ಮಾಡಿದ ತಪ್ಪುಗಳೆಲ್ಲ ಮುಖದ ಮೇಲಿನ
ಸುಕ್ಕುಗಳಂತೆ ಎದ್ದು ಕಾಣುತ್ತದೆ ..
ಅಣಕಿಸುತ್ತವೆ ಮೂರ್ಖನಾಗಿಸುವ ಎಷ್ಟೋ ಘಟನೆಗಳು ,
ಆದರೂ ಖುಷಿ ಪಡುತ್ತೇನೆ ,ಎಷ್ಟೋ ಸಲ ಮನದ
ಭೂತಕಾಲವನ್ನು ನೆನೆದು ....
ಎಷ್ಟೋ ಬೆಳೆದಿದ್ದೇನೆ ಜೀವನದಲ್ಲಿ
ಮಾಡಿದ ತಪ್ಪುಗಳಿಂದ  ಕಲಿತಿದ್ದೇನೆ .
ನಕ್ಕಿದ್ದೇನೆ ಮನದಲ್ಲೇ ನಾ ಮಾಡಿದ ತಪ್ಪನ್ನೆ
ಬೇರೆಯವರು ಮಾಡಿದಾಗ .....
ನನ್ನಂತೆ ಮೂರ್ಖರಾದಾಗ ......
ಆದರೆ ನನಗೆ ಗೊತ್ತು ,ಅವರೂ ನನ್ನಂತೆ
ಬೆಳೆಯುತ್ತಿದ್ದಾರೆ ಎಂದು ....
ಮಾಡುವ ತಪ್ಪುಗಳಿಂದ ಕಲಿಯುತ್ತಿದ್ದಾರೆ ಎಂದು ....

Monday, August 23, 2010







ನಿನ್ನೆ ಮಧ್ಯರಾತ್ರಿ ,ನನ್ನ ತುಟಿಕಚ್ಚಿ
ಹುಡುಗಾ ನಿನ್ನ ಅಧರವೆಷ್ಟು ಸಿಹಿ
ಅಂದಾಗಲೇ ಗೊತ್ತಿತ್ತು ..ನೀನು ...
........................ಹೆಣ್ಣು ಸೊಳ್ಳೆ ಎಂದು $#$!!!      

Friday, August 20, 2010

ಮೌನಿ !







ಹೇಗೆ ಕೊಡಲಿ ನನ್ನ ಮೌನಗಳಿಗೆಲ್ಲ ಕಾರಣವ ?
ಒಂದೊಂದು ಮೌನಗಳಿಗೂ ನೂರಾರು ಕಾರಣಗಳಿವೆ 
ಅರ್ಥವಾಗಬೇಕಲ್ಲ ......
ಸೋತಿದ್ದೇನೆ ಹಲವಾರು ಸಲ 
ಮೌನಗಳಿಗೆಲ್ಲ  ಕಾರಣಗಳ ಹುಡುಕಿ,
ನನಗಿನ್ನೂ ಉತ್ತರ ಸಿಕ್ಕಿಲ್ಲ.
ಹುಡುಕುತ್ತ ಹೋದ ಹಾಗೇ ಮೌನಗಳೆಲ್ಲ 
ಬರೀ ಪ್ರಶ್ನೆಗಳು ....ಉತ್ತರ ಸಿಗದ ಪ್ರಶ್ನೆಗಳು .....!
ಹುದುಗಿರುವ ಎಷ್ಟೋ  ಬಾವನೆಗಳ ನೋವುಗಳ  ಮಿಶ್ರಣ
ನನ್ನ ಮೌನಗಳು ....!ಕಂಡರೂ ಕಾಣದಿರುವ ವಿಷಾದ ಛಾಯೆ 
ಕೆಲವೊಮ್ಮೆ ನನ್ನ ಮೌನಗಳಿಗೆ ನನಗೆ ಕಾರಣ ಗೊತ್ತಿರುವುದಿಲ್ಲ
ಮನಸ ತುಂಬಾ ಬೆಚ್ಚಗೆ ಹೊದ್ದು ಕುಳಿತುಬಿಟ್ಟಿರುತ್ತದೆ
ನಾನೇನು ಮಾಡಲಿ ಹುಡುಗೀ 
ನಿನ್ನ ನೋಡಿದಾಗ ಸಹ ನಾನು ಮೊರೆಹೋಗುವುದು 
ಮೌನ ಸಂಬಾಷಣೆಗೆ ....
ಆದರೆ ನಿನಗರ್ಥವಾಗಬೇಕಲ್ಲ !


Wednesday, August 18, 2010

ಮೊದಲ ವರ್ಷಧಾರೆ


ಅದೊಂದು ಮುಸ್ಸಂಜೆ ,ಸೂರ್ಯ ಕಿರಣವ ತಡೆದು ,
ಮಂಜಿನ ಹನಿಗಳ ಕಡೆಗಣಿಸಿ ,
ಬಂತು ಮೊದಲ ವರ್ಷಧಾರೆ .
ಚಿಟ್ಟೆಗಳ ಮನವ ತಣಿಸಲು ,ಮಿಡತೆಗಳ ತುಡಿತವ ಕೆಣಕಲು ,
ಈ ಇಳೆಯ ತಾಕಿತು ಮೊದಲ ವರ್ಷಧಾರೆ .
ದಟ್ಟನೆಯ ಮೋಡಗಳಲಿ ಅಡಗಿ ಕುಳಿತು
ಬೆಂದ ಭುವಿಗೆ ನೊಂದ ಜೀವಿಗೆ ,
ತಂಪನ್ನೆರೆಯಲು ಬಂತು ಈ ವರ್ಷಧಾರೆ .
ರಪರಪನೆ ಜಿಟಜಿಟನೆ ತೊಟ್ಟಿಕ್ಕಿದವು
ಈ ಇಳೆಯ ಚುಂಬಿಸಲು .
ಹಸುರ ಹೊದ್ದಿಗೆಯ ಹಾಸಲು
ಬಂತು ಮೊದಲ ವರ್ಷಧಾರೆ
ಒಮ್ಮೊಮ್ಮೆ ಜೋರಾಗಿ ಮರುಕ್ಷಣವೇ ಮಿತವಾಗಿ ,
ಹಿತವಾಗಿ ಬಂತು ಈ ಧಾರೆ
ತಿಳಿ ನೀರ ಕದಡಿ ,ಹೊಂಬಣ್ಣಗಳ ಹರಡಿ
ಮಿಂಚಾಗಿ ಬಂತು ಜಲಧಾರೆ
ಮೈ ಮನ ತಣಿಸಲು ,ಕನಸುಗಳ ಉಳಿಸಲು
ಸಂಜೀವಿನಿಯಾಗಿ ಬಂತು ಮೊದಲ ವರ್ಷಧಾರೆ

Sunday, August 15, 2010

ಅವಳೊಂದು ತಬ್ಬಲಿ ಹುಡುಗಿ

                                                                               


ಏಕೋ ಏನೋ ಅವಳ ಕಣ್ಣುಗಳು
ತನ್ನ ಹೊಳಪನ್ನು ಕಳೆದುಕೊಂಡಿವೆ
ಬಾಡಿದ ಮುಖ ,ಕಣ್ಣಂಚಿನ ನೀರು ..
ಅವಳ ಅವ್ಯಕ್ತ ನೋವಿನ ಸೆಲೆಯಂತಿದೆ.
ತುತ್ತು ಕೂಳಿಗೂ ,ಹಸಿದ ಕಣ್ಣುಗಳ ಕಾಟ,
ಆದರೂ ಬದುಕಬೇಕಲ್ಲ ,ಎಲ್ಲ ವೇದನೆಗಳ ಮುಚ್ಚಿಟ್ಟು..
ಕನಸಿಗಂತೂ ಬರವಿಲ್ಲ ,ಆದರೇಕೋ ,ಏನೋ ಒಳಗೊಂದು
ಅವ್ಯಕ್ತ ಭೀತಿ ..
ಕನಸ ನನಸಾಗಿಸಲು ಮಾಡುವುದೇನು ಬಂತು?
ಎಲ್ಲ ಬಿಡುವುದು ಮಾತ್ರ ...
ತುತ್ತು ಕೂಳ ತುಂಬಿಸಲು ..
ಬದುಕಬೇಕಲ್ಲ ...ಹಸಿದ ಕಣ್ಣುಗಳ ತಣಿಸಿ .
ಎಲ್ಲ ವೇದನೆಗಳ ಮುಚ್ಚಿಟ್ಟು ....

Friday, August 13, 2010

ಕಣ್ಣೀರ ಬಿಂದು


ನನಗಾಗಿ ಬಿಟ್ಟುಬಿಡು ಒಂದು 
ಕಣ್ಣೀರ ಬಿಂದು ,
ಕೊನೆಯ ಕ್ಷಣ ನಾನು ನನ್ನ ಕಾಣಬೇಕಿದೆ
ನಿನ್ನ ಕಣ್ಣೀರ ಪ್ರತಿಬಿಂಬದೊಳಗೆ 
ಹಾಗೆ ಒಮ್ಮೆ ಆಲಂಗಿಸು ನಿನ್ನ ತೆಕ್ಕೆಯೊಳಗೆ 
ನನ್ನ ತಬ್ಬಿ , 
ಸಾಯಬೇಕಿದೆ ನಿನ್ನ ತೆಕ್ಕೆಯೊಳಗೆ 
ನನ್ನ ನೋಡುತ್ತಾ ನಿನ್ನ ಕಣ್ಣೀರ ಪ್ರತಿಬಿಂಬದಲಿ 
ಕೊನೆಯ ಉಸಿರು ಬಿಡುವ ಮುನ್ನ 
ನನಗಾಗಿ ಬಿಟ್ಟುಬಿಡು ಒಂದು 
ಕಣ್ಣೀರ ಬಿಂದು . 









Saturday, August 7, 2010

ಹುಚ್ಚುಮನಸು




ಅದಾವ ಆಕರ್ಷಣೆ ನಿನ್ನಲ್ಲಿ
ಬರಿ ಕನಸ ಗೋಪುರ ಕಟ್ಟಿ ನಿನ್ನ
ನೆನಪಲ್ಲೇ ಹುಚ್ಚನಾದನಲ್ಲೇ ...
ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಿಲ್ಲ ,
ಮಾತನಾಡಿದ್ದಿಲ್ಲ ..ನನ್ನೊಳಗೆ
ನಾನೇ ಮೌನಿಯಾದೆನಲ್ಲೇ
ನೀನಿಲ್ಲದಾಗೂ ನಿನ್ನ ಹುಡುಕುವ
ಎದುರಿಗೆ ಬಂದರೆ ಮತ್ತೆಲ್ಲೋ ನೋಡುವ
ಈ ಹುಚ್ಚು ಮನಸಿಗೇನು ಮಾಡಲೇ ?
ನಿನ್ನ ಬಾವನೆಗಳ ಅರಿಯದೆ ,
ನನ್ನ ಬಾವನೆಗಳ ಬಿರಿಯದೆ
ಅಲ್ಲೇ ಗುಟ್ಟಾಗಿ ಮುಚ್ಚಿಟ್ಟುಕೊಂಡ
ಈ ಪ್ರೀತಿಗೇನು ಮಾಡಲೇ?
ಎದುರಿಗೆ ಹೇಳಿಕೊಳ್ಳಲು ಕಳೆದುಕೊಳ್ಳುವ ಭೀತಿ ,
ಹೇಳಿಕೊಳ್ಳದೆ  ಕಳೆದುಕೊಂಡ ರೀತಿ 
ಈ ರೀತಿ ಮನಸ ಹಚ್ಚಿಕೊಂಡೂ
ನಿನ್ನ ಹೇಗೆ ಕಳೆದುಕೊಳ್ಳಲೇ
ಹೇಗೆ ತಿಳಿಸಲೇ ನಿನಗೆ ನನ್ನೆಲ್ಲ ಬಾವನೆಗಳ .....?    

Friday, July 30, 2010

ಮಳೆಗಾಲದ ಸಂಜೆ



ಅದೊಂದು ಮಳೆಗಾಲದ ಸಂಜೆ
ನಾ ಕುಳಿತು ಆಗಸದೆಡೆ ಕಣ್ಣು ನೆಟ್ಟಿದ್ದೆ .
ಆ ಕಪ್ಪು ಮೋಡಗಳು ಆಗಸದ ತುಂಬೆಲ್ಲ ,
ಇನ್ನೇನು ಮಳೆ ಹನಿ ಹನಿಯಾಗಿ ಬರಬೇಕು ,
ಅಷ್ಟರಲ್ಲೇ ನೀನು ಬಂದೆ ಕೋಲ್ಮಿಂಚಿನಂತೆ .
ಮೆಲ್ಲಗೆ ಚುಂಬಿಸಿ ಕಣ್ಣು ತೆರೆಯುವುದರಷ್ಟಲ್ಲೇ
ಮಾಯವಾಗಿ ಬಿಟ್ಟಿದ್ದೆ .
ನಿನ್ನ ನೆನಪಲೆ ಕುಳಿತಿದ್ದೆ ,ಆಗಲೇ ಹನಿಹನಿಯಾಗಿ
ಬೀಳುತ್ತಿದ್ದವು ಜಲಧಾರೆ ....
ಹಾಗೆ ಕಣ್ಣು ಮುಚ್ಚಿದೆ ನಿನ್ನ ನೆನಪಿಗಾಗಿ ,
ಮತ್ತೆ ಬಂದೆ ಸದ್ದಿಲ್ಲದೇ ......
ಕಿವಿಕಚ್ಚಿ, ಪಿಸುನುಡಿದು ಓಡಿ ಬಿಟ್ಟಿದ್ದೆ
ಕಣ್ಣು ಬಿಟ್ಟಾಗ ತೊಟ್ಟಿಕ್ಕುದ್ದವು ಎಲೆಗಳ ತುದಿಯಲ್ಲಿ
ಮಳೆಹನಿಗಳು ....
ಇದೇನು ಕನಸೋ ,ನನಸೋ ಎಂಬ ಭ್ರಮೆಯಲ್ಲಿರುವಾಗ
ಮತ್ತೆ ನೀ ಬಂದೆ ....ಹತ್ತಿರ,, ಹತ್ತಿರ,, ಬಲು ಹತ್ತಿರ ...
ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ
ಕೈಗೆ ಸಿಗದೇ ಚಿಟ್ಟೆಯಾಗಿ ಹಾರಿ ಬಿಟ್ಟಿದ್ದೆ

Saturday, July 24, 2010

ಸಾವಿರ ಕನಸುಗಳ ಧಾರಾವಾಹಿ ...


ಮನಸಿನಾಳದ ಸುತ್ತ ಕಟ್ಟಿಕೊಂಡ ಕನಸುಗಳು
 ಗಿರಕಿ ಹೊಡೆಯುತ್ತಿದೆ ನಿನ್ನ ಸುತ್ತ..
ಬರಿ ಮಾತು ಚೂರು ನಗು ಒಂದು ಕಣ್ಣ ನೋಟಕ್ಕೆ
 ಕಟ್ಟಿಕೊಂಡ ರಾಶಿ ಕನಸುಗಳವು,
ಹೇಗೆ ತಿಳಿಸಲೇ ನಿನಗೆ ???
ಅದಾರೋ ಹೇಳಿದರು ಪ್ರೀತಿ ಹುಟ್ಟುವುದು ,
ಹೃದಯ ಮಿಡಿಯುವುದು ಮನಸುಗಳು ಕೂಡಿದಾಗ
ನೀನಾದರೋ ಕೈಗೆಸಿಗದ ಮರೀಚಿಕೆ ,
ನನ್ನ ಮನಸಿನ ಬಾವನೆಗಳು, ನನ್ನ ಕವನಗಳು.
ಕವನಗಳೋ ನಿನಗೊಂದು ಅರ್ಥವಾಗದ ರಾಮಾಯಣ ,
ಕೇಳಿಲ್ಲಿ ....
ಎಲ್ಲವನ್ನೂ ಹೇಳಲಾಗುವುದಿಲ್ಲ ಬಾಯ್ಬಿಟ್ಟು,
ನನ್ನ ಕಣ್ಣುಗಳನೊಮ್ಮೆ ಕಣ್ಣಿಟ್ಟು ನೋಡು ...
ಅರ್ಥವಾಗುತ್ತದೆ ನನ್ನ ಸಾವಿರ ಕನಸುಗಳ ಧಾರಾವಾಹಿ ....

Thursday, July 22, 2010

ಕೋರ್ಟು, ಕಲಾಪ ,ಪ್ರಲಾಪ


ಇಂದು ಮಾತ್ರ ಕೋರ್ಟಿನ ಕಲಾಪಗಳು
ಮನಸ್ಸಿಗೆ ಹಿತ ನೀಡಿದ್ದವು ,ಹಳೆ ಫೈಲುಗಳೆಲ್ಲ
ಧೂಳು  ಕೊಡವಿ ಅತ್ತಿಂದಿತ್ತ ಹಾರಾಡತೊಡಗಿದ್ದವು
ಪ್ರೇಮದ ಸಂದೇಶ ಹೊತ್ತು .
ಹುಡುಗೀ ಮೊದಲ ಸಲ ಏನೊಂದೂ ಗೊತ್ತಾಗುತ್ತಿರಲಿಲ್ಲ ,
ನನ್ನೆದುರಿಗೆ ಬಂದು ನಿಂತ ನಿನ್ನ ನೋಡಿ .
ನ್ಯಾಯಾಧೀಶರ ಮಾತೂ ಕೇಳದಾಗಿತ್ತು.
ಹುಡುಗೀ ನಿನ್ನ ನಗುವಿಗೆ ನನ್ನ ಮಾತೂ ಮರೆತುಹೋಗಿತ್ತು .
ಕಣ್ಣು ತೆಗೆಯದಾಗಿದ್ದೆ ನಿನ್ನ ಕಣ್ಣ ಬಿಟ್ಟು
ಮುಂಗುರುಳ ಸರಿಸಿ ಬೀರೋ ಓರೆನೋಟ ,
ಕಣ್ಣಂಚಿನ  ಕಪ್ಪು ಕಾಡಿಗೆ , ಅರಳು ಹುರಿದ ಮಾತು
ನಕ್ಕಾಗ ನಿನ್ನ ಕೆಂಪುಗೆನ್ನೆಗುಳಿಯೊಳಗೆ ನನ್ನ ನಾನೇ ಮರೆತಿದ್ದೆ
ಯಾರ ಕೂಗೂ ಕೇಳದಾಗಿತ್ತು ನನಗೆ ,
ನಿನ್ನ ನೋಡುತ್ತಾ ನನ್ನ ಕೇಸನ್ನೇ ನಾ ಮರೆತಿದ್ದೆ !  

Friday, July 16, 2010

ಬಂದಿರುವಳೆನ್ನ ಹುಡುಗಿ




ಓ ಚೈತ್ರ ಸಂಕುಲವೇ ,ಹೂವ ಮಳೆಯನು ಸುರಿಸು
ಬಂದಿರುವಳೆನ್ನ ಹುಡುಗಿ .
ಬೀಸುವ ಗಾಳಿಯೇ ರಾಗಗಳ ನೀ ನುಡಿಸು
ಬಂದಿರುವಳೆನ್ನ ಹುಡುಗಿ ,
ಆ ಸುಂದರ ಕೈಗಳಿಗೆ ,ಕೆಂಪು ಹೂ ಮದರಂಗಿಯ
ಬಳಿದುಬಿದು ತಿಳಿದ ಹಾಗೆ .
ಕಪ್ಪು ಕಾಡಿಗೆಯಾಗಿ ಬನ್ನಿ ಓ ಮೋಡಗಳೇ
ಈ ಕಪ್ಪು ಕಣ್ಣುಗಳಿಗೆ ,
ಸಿಂಗರಿಸಿ ತಾರೆಗಳೇ ,ನೀಳಜಡೆ ..ಬೈತಲೆಯ ...
ಓ ಚೆಲುವ ನೋಟಗಳೆ ಹೊದಿಸಿಬಿಡಿ ಎಲ್ಲೆಡೆ
ಬೆಳಕ ಮಕಮಲ್ಲ ಹೊದಿಕೆಯ ,
ಸಜ್ಜುಗೊಲಿಸಿವೆ ಇಲ್ಲಿ ಅರೆಬಿರಿದ ಮೊಗ್ಗುಗಳು ,
ಸೊಗಸಾದ ಪ್ರೇಮಮಂಚ.
ಅವಳ ಹೆಜ್ಜೆಯನರಸಿ ಬಂದರೂ ಬರಬಹುದು .....
ಗೊತ್ತಿರಲಿ ನಿಮಗೂ ಕೊಂಚ .
ಅವಳ ಹೆಜ್ಜೆಯನರಿಸಿ ಪ್ರೇಮರುತು ಬಂದರೂ ಬರಬಹುದು
ರಂಗಾದ ರುತುಗಳೇ ಬಣ್ಣಗಳ ಹರವಿಬಿಡಿ ,
ತುಂಬಾ ನಾಚಿಕೆಯವಳು ,ನಿಮ್ಮೆದುರು ನಸುನಾಚಿ
ಹೊರತುಹೊದಾಳು ಆಕೆ ...
ಒಂದಿಷ್ಟು ಒಳಗಿಳಿದು ಹೃದಯವನು ಚೇತರಿಸಿ ,
ಬಂದಿರುವಳೆನ್ನ ಹುಡುಗಿ














ನಿದ್ದೆಯೂ ಮುಷ್ಕರ ಹೂಡಿವೆ 
ನೀನು ಹೊರಟು ಹೋದ ಮೇಲೆ ...
ರಾತ್ರಿಯಿಡೀ ಕಣ್ಣುಬಿಟ್ಟು,ಆಗಸದಲ್ಲಿ 
ನಕ್ಷತ್ರಗಳ ಲೆಕ್ಕ ಹಾಕುತ್ತಿವೆ ...
ಮನಸಿಗೂ ಲೆಕ್ಕ ತಪ್ಪಿವೆ,,
ಕೂಡಿ ಕಳೆಯುವ ಲೆಕ್ಕಾಚಾರ 
ಆಕಾಶವೆಲ್ಲ ಖಾಲಿ ಖಾಲಿ 
ನೀನು ಹೊರಟು ಹೋದ ಮೇಲೆ 
ಹೃದಯ ಬುಟ್ಟಿಯ ತುಂಬಾ  ನಿನ್ನದೇ ಕನಸುಗಳ ಮೆರವಣಿಗೆ 
ದಿಕ್ಕು ತಪ್ಪಿವೆ  ಎಲ್ಲ ನಿನ್ನ ಕಾಣದೆ 
 ಬರಿ ಮೌನ  ಮನದ ಮೂಲೆಯ ತುಂಬಾ 
ಮೂಕವಾಗಿದೆ ಮನಸು ನಿನ್ನ ಮಾತು ಕೇಳದೆ ...

Wednesday, July 14, 2010

ನನ್ನ ಪ್ರೀತಿಯ ಹುಡುಗಿ



ನನ್ನ ಪ್ರೀತಿಯ ಹುಡುಗಿ ಒಂದು ದಿನ ತೀರ ನಸುಕಿನಲಿ ,
ಬೆಳಕಿನ್ನೂ ಕಣ್ಣುಜ್ಜಿಕ್ಕೊಳ್ಳುತ್ತ   ಎಚ್ಚರಾಗುವ ಸಮಯದಲಿ 
ನನ್ನ ಎದೆಯಲ್ಲೊಂದು ಕವಿತೆ ನೆಟ್ಟು ಹೋದಳು ,
ಪ್ರೀತಿಯ ಮೇಲೆ  ಬದುಕಿನ ಬದುಕಿನ ಮೇಲೆ ,
ನನ್ನ ಪ್ರೀತಿಯ ಹುಡುಗಿ ಹೊನ್ನ ಹೊಳಪುಳ್ಳ ಗೌರವರ್ಣದ ಬೆಡಗಿ ,
ಮುಗುಳ್ನಗುತ್ತ ಮಾತನಾಡುವ ,ಮಾತಿಗೆಳೆಯುವ ಇಷ್ಟಗಲ ಕಣ್ಣುಗಳ 
ಚೆಲುವೆ ,ನೋಡಬೇಕವಳ ಮೂಗಿನ ತುದಿಯ ಬಿಂಕವನ್ನ,
ಹತ್ತಿರ ಕರೆದೂ ....ದೂರವಿರಿಸುವ ,ತುಟಿಗಳ ತುಂಟತನವನ್ನ 
ಬೇಕಷ್ಟೇ ತುಟಿ ತೆರೆದು ನಕ್ಕಾಗ ಹೊಳೆವ ಸಾಲು ಹಲ್ಲುಗಳ ಮೋಹಕತೆಯ ,
ನನ್ನ ಪ್ರೀತಿಯ ಹುಡುಗಿ ,ಮಧ್ಯರಾತ್ರಿಯ ಕತ್ತಲಲಿ ,
ಕನಸು ಬೀಳುವ ಸುಮುಹೂರ್ತ ಸಮಯದಲಿ 
ಕಿವಿಯಲ್ಲುಸುರಿ ಹೋದಳು ,ನಂಬಿಸುವ ದನಿಯಲ್ಲಿ .....
ಹುಚ್ಚು ಹುಡುಗಾ ,
ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದು 
ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ .......

Saturday, July 10, 2010

ಅಮರ ಪ್ರೇಮ .


ನಾ ಹೇಳುವೆನು  ಜಗದಲ್ಲಿ  ನನ್ನದು ಮಾತ್ರ
ಅಮರ ಪ್ರೇಮ .
ಸ್ವಾರ್ಥ ,ಅಸೂಯೆ ದ್ವೇಷಗಳಲ್ಲಿ ಬೆಂದು ಹೋದವರೆಸ್ಟೋ.
ಪ್ರೀತಿಗಾಗಿ ಪ್ರಾಣ ಕೊಟ್ಟವರೆಷ್ಟೋ,,
ಅವಾವವೂ ಬದುಕುಳಿಯಲಿಲ್ಲ ...ಬದುಕಲು ಪ್ರೇಮಿಗಳು ಇದ್ದಾರೆ ತಾನೇ ?
ಅದಕ್ಕೆ ನಾ ಹೇಳುವುದು ನಾ ಮಾತ್ರ ಅಮರ ಪ್ರೇಮಿ ...
ಏಕೆಂದರೆ ನಾ ಪ್ರೀತಿಸುತ್ತಿರುವುದನ್ನು ನಿನಗೆ ಹೇಳಿದರೆ ತಾನೇ!
ಪ್ರೀತಿ ಸತ್ತರೂ ಪ್ರೇಮಿ ಬದುಕಲು ಬಿಡುವವರಾರು?
ನಿನ್ನ ಅಂತರಂಗವನ್ನು ನಾನೇನೂ ತಿಳಿಯಲಿಲ್ಲವಲ್ಲ ..
ಹೇಗಿರುವುದೋ  ಏನೋ ನನಗೇನು ಗೊತ್ತು ? 
ಈಗಿರುವ ಪ್ರೀತಿಯಲ್ಲೇ ಇರುವುದು ಒಳ್ಳೆಯದಲ್ಲವೇ ?  
ಈಗ ಮಾತ್ರ ನೀನೆ ಎಲ್ಲ ನಿನ್ನ ಬಿಟ್ಟರೆ ಉಸಿರಿಲ್ಲ  
ಎಂದೆಲ್ಲ ಹೇಳುವೆನಾದರೂ ಮುಂದೊಮ್ಮೆ ನಿನ್ನ
ಅಂತರಂಗವ ತಿಳಿದು ಈಗಿರುವ ಪ್ರೀತಿಯೂ
ಇಲ್ಲವಾದರೆ ????
ನನ್ನದಾಗುವುದು ಹೇಗೆ ಅಮರ ಪ್ರೇಮ....  

Thursday, July 8, 2010

college days

 ಮರಳಿಸು ನನಗೆ  ಕಾಲೇಜ್  ದಿನಗಳನ್ನ
ಮೋಜು ಮಸ್ತಿಯ ಕ್ಷಣಗಳನ್ನ ,
ಬದಲಾಗಿ ತೆಗೆದುಕೋ ,
 ಡಿಗ್ರಿ , ಸರ್ಟಿಫಿಕೆಟ್ , ನೌಕರಿ
ಮರಳಿಸು ನನಗೆ  ಮಧುರ ನೆನಪುಗಳನ್ನ
 ಕಾಲೇಜ್,ಬಂಕ್ ಮಾಡೋ ಕ್ಲಾಸ್ ,
ಚೀರಾಡೋ ಕ್ಲಾಸ್ , ಹಾರಾಡೋ ಕ್ಲಾಸ್ ,
ಮತ್ತು ಕನ್ನಡ ಪಿರಿಯಡ್ .
ಮರಳಿಸು ನನಗೆ  ನೆನಪುಗಳನ್ನು ,
 ನೋಟ  ಕನಸು ,ಅದಲು ಬದಲಾಗೋ
 ಕುಳಿತ ಜಾಗ .
ಮರಳಿಸು ನನಗೆ  ಎಲ್ಲ ರಾಕೆಟ್ ಗಳ
ಕ್ಲಾಸ್ ತುಂಬಾ ಹಾರಾಡಿದ ಕನಸಿನ
ಗಾಳಿಪಟಗಳ ,
ಎಲ್ಲ ಬೇಕಾಗಿದೆ ನನಗೆ ಮತ್ತೊಮ್ಮೆ
 ಗೆಳೆತನ , ಚೀರಾಟ , ಹಾರಾಟ ,
ಮತ್ತೆ ಕುಳಿತುಕೊಳ್ಳಬೇಕಾಗಿದೆ  ಎಲ್ಲ ಪಿರಿಯಡ್ ಗೆ ,
ಮತ್ತೆ ಮತ್ತೆ ,ಪ್ರಾಕ್ಸಿ ಹಾಕಲು