Thursday, September 30, 2010

ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !



ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಎಲ್ಲ ಸಾಲಾಗಿ ನಿಲ್ಲುವರು ಪರಮಾತ್ಮನೆಂದು 
ಅದೆಂತ ಭಕ್ತಿಯೋ ನಾ ಕಾಣೆ 
ಮೊದಮೊದಲು ಸ್ವಲ್ಪ ಒಗರಂತೆ ,
ಕೆಲವೊಂದು ಹುಳಿಯಂತೆ .ಕೆಲಕೆಲವು 
ಕಹಿಯಂತೆ .... ಕುಡಿದಾದಮೇಲೊಂದು
ಗಾಳಿಯಲ್ಲೇ ತೇಲುವರಂತೆ...
ಅಕ್ಕ ಪಕ್ಕದಲ್ಲೊಂದು, ನೆಚ್ಚಿಕೊಳ್ಳಲೊಂದು 
ಬೇಕಂತೆ ಉಪ್ಪು ಹುಳಿ ಕಾರ ....!
 ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಬೇರೆ ಬೇರೆ ವೇರಯ್ಟಿ ಗಳಂತೆ 
ಅದಕ್ಕೂ ಬೇರೆ ರೆಟಂತೆ
ಕುಡಿದರೆ ಸ್ವರ್ಗ ಸುಖ ಗ್ಯಾರಂಟಿ ಯಂತೆ  
  ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಈಗ ಎಲ್ಲ  ಕಾಮನ್ ಅಂತೆ,  
ಅದಕ್ಕಿಲ್ಲವಂತೆ ಭೇಧ ಭಾವ , 
ಪಾರ್ಟಿ ಎಂಬ ಪೂಜೆಯಲ್ಲಿ ಅದೇ 
ಪವಿತ್ರ ತೀರ್ಥವಂತೆ ! .

Thursday, September 23, 2010

ಮಧ್ಯರಾತ್ರಿ ಚಂದ್ರ




ಮಧ್ಯರಾತ್ರಿ ಚಂದ್ರ ಛಳಿಯ ಹೊತ್ತು ತಂದ 
 ಬೀಸೋ ಗಾಳಿ ,ಮಂಜಿನ ಹನಿ ,
ಬೆರೆತ ಕ್ಷಣ ಈ ಧರೆಗೆ
ಮಧ್ಯರಾತ್ರಿ ಚಂದ್ರ ಛಳಿಯ ಹೊತ್ತು ತಂದ 
ಹನಿ ಹನಿ ಮುತ್ತು ಎಲೆಯ ಮೇಲೆ 
ಇಬ್ಬನಿ ಸಾಲು ಹಾದಿಗುಂಟ ..
ತೋರಿಸುತ್ತಿದ್ದ ಬೆಳ್ಳಂಬೆಳಕ 
ಮಧ್ಯರಾತ್ರಿ ಚಂದ್ರ ಧರೆಗೆ 
ಬೆಳ್ಳಿ ಬೆಳಕ ತಂದ 
ಮಾಗಿದ ಚಳಿಯಲಿ ಹೊತ್ತು ಕಳೆದಂತೆ
ಮುತ್ತುಗಳು ಒಡೆದಂತೆ 
ಸಾಲು ತಪ್ಪಿದ ಇಬ್ಬನಿಗಳ ನೊಡುತ್ತ
ನಿಂತ ಚಂದ್ರ,
ಪಡುವಣದ ಮೂಲೆಯಲಿ !

Sunday, September 19, 2010

(ನಿ)ವೇದನೆ



ಕನಸುಗಳಲ್ಲಿ....
ನೀ
ಹಾಡುವುದೆಲ್ಲ
ಅರ್ಥವಾಗುವುದು ನಲ್ಲೇ.....
ಆದರೆ,
ನೆನಪುಗಳಲ್ಲಿ
ನೀ
ಕಾಡುವುದೇತಕೆ ಅರ್ಥವಾಗದಲ್ಲೇ!

Friday, September 17, 2010

ಈ ವಯಸೇ ಹೀಗೆ,




ಈ ವಯಸೇ ಹೀಗೆ,
ಕನಸುಗಳ ಬೆನ್ನು ಹತ್ತಿ ವಾಸ್ತವಗಳ ಕಣ್ಣು ಕಟ್ಟಿ ,
ಕಲ್ಪನೆಗಳ ಬಿಸಿಲುಕುದುರೆಯನೆರುವ
ಈ ವಯಸೇ ಹೀಗೆ ...
ಪ್ರೀತಿಯೆಂಬ ಮೋಡಿಯಲಿ ಸಿಲುಕಿ ,
ಬಾವನೆಗಳ ಅಡಿಯಲಿ ನಲುಗಿ ,
ನೋವಿನಲೂ ನಲಿವನ್ನು ಕಾಣುವ
ಈ ವಯಸೇ ಹೀಗೆ ...
ಬಯಸುವುದು ಕಣ್ಣಿಗೆ ಕಾಣಿಸುವುದ ,
ಅರಸುವುದು ಮನಸಿಗೆ ಅನಿಸುವುದ ..
ಕೈಗೆ ಸಿಗದಾಗ ಮುಮ್ಮಲ ಮರುಗುವ ,
ಈ ವಯಸೇ ಹೀಗೆ ...
ಕನಸುಗಳಲಿ ಹುಟ್ಟಿ ಕಲ್ಪನೆಗಳಲಿ ಸಾಯುವ
ಈ ವಯಸೇ ಹೀಗೆ ...
ಹುಚ್ಚು ವಯಸು ...... 









Sunday, September 5, 2010

ಆ ಕೆಂಪು ಗುಲಾಬಿ





ಕೊನೆಗೂ ನಿನಗೆ ಕೊಡಲಾಗದೆ ಇರುವ
ಆ ಕೆಂಪು ಗುಲಾಬಿ , ಇನ್ನೂ ನನ್ನ ಪುಸ್ತಕದ
ಮದ್ಯೆ ಹಾಗೆ ಇದೆ ,,
ಪ್ರತೀ ಸಲ ಪುಟವನ್ನು ತಿರುವಿದಾಗಲೂ
ಉದುರುತ್ತಿವೆ ಕಪ್ಪಾದ ಒಂದೊಂದೇ
ಎಸಳುಗಳು ....ಮಸುಕಾದ ನಿನ್ನ ನೆನಪಿನ ಹಾಗೆ !