Sunday, August 29, 2010

ಮುಸ್ಸಂಜೆ ಹೊತ್ತು
ಮುಸ್ಸಂಜೆಯ ಹೊತ್ತು ,
ನೆನಪುಗಳು ಕಾಡುವ ಹೊತ್ತು.
ಹೃದಯ ಬುಟ್ಟಿಯ ತುಂಬಾ ಮಾಗಿದ ಸಿಹಿ ನೆನಪುಗಳು
ಕಾಡುವ ಹೊತ್ತು ಮುಸ್ಸಂಜೆಯ ಹೊತ್ತು.
ಕಣ್ಣ ನೋಟ ತುಂಬ ಕಾಣುವ ಸಿಹಿ ಕನಸುಗಳು
ಮನಸ ಮೂಲೆಯ ಬದಿ ನೋವಿನ ನನಸು ,ಕಾಡುವ ಹೊತ್ತು
ಮುಸ್ಸಂಜೆಯ ಹೊತ್ತು .
ಸಿಹಿ ಕನಸುಗಳ ಜೊತೆಗೆ ಬಾವಗಳ ತುಳುಕಾಟ
ಕಹಿ ನನಸುಗಳ ಪಾಲಿಗೆ ದುಃಖಗಳ ಮುಲುಗಾಟ,
ಕಾಡುವ ಹೊತ್ತು ಮುಸ್ಸಂಜೆ ಹೊತ್ತು .
ಹೊತ್ತು ಕಳೆದಂತೆ ಮುಗಿಯುವ ಮಾಗಿದ ಸಿಹಿ ನೆನಪುಗಳು
ಯಾರಿಗೂ ಬೇಡದೆ ಉಳಿಯುವ ಕಹಿನೆನಪುಗಳು
ಮತ್ತೆ ಮತ್ತೆ ಕಾಡುವವು ಮುಸ್ಸಂಜೆ ಹೊತ್ತು

Friday, August 27, 2010

ಪ್ರತೀ ಸಲ  ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ
ಮನದ ಬಾವನೆಗಳೆಲ್ಲ ಬೆತ್ತಲಾಗುತ್ತವೆ ,
ಮಾಡಿದ ತಪ್ಪುಗಳೆಲ್ಲ ಮುಖದ ಮೇಲಿನ
ಸುಕ್ಕುಗಳಂತೆ ಎದ್ದು ಕಾಣುತ್ತದೆ ..
ಅಣಕಿಸುತ್ತವೆ ಮೂರ್ಖನಾಗಿಸುವ ಎಷ್ಟೋ ಘಟನೆಗಳು ,
ಆದರೂ ಖುಷಿ ಪಡುತ್ತೇನೆ ,ಎಷ್ಟೋ ಸಲ ಮನದ
ಭೂತಕಾಲವನ್ನು ನೆನೆದು ....
ಎಷ್ಟೋ ಬೆಳೆದಿದ್ದೇನೆ ಜೀವನದಲ್ಲಿ
ಮಾಡಿದ ತಪ್ಪುಗಳಿಂದ  ಕಲಿತಿದ್ದೇನೆ .
ನಕ್ಕಿದ್ದೇನೆ ಮನದಲ್ಲೇ ನಾ ಮಾಡಿದ ತಪ್ಪನ್ನೆ
ಬೇರೆಯವರು ಮಾಡಿದಾಗ .....
ನನ್ನಂತೆ ಮೂರ್ಖರಾದಾಗ ......
ಆದರೆ ನನಗೆ ಗೊತ್ತು ,ಅವರೂ ನನ್ನಂತೆ
ಬೆಳೆಯುತ್ತಿದ್ದಾರೆ ಎಂದು ....
ಮಾಡುವ ತಪ್ಪುಗಳಿಂದ ಕಲಿಯುತ್ತಿದ್ದಾರೆ ಎಂದು ....

Monday, August 23, 2010ನಿನ್ನೆ ಮಧ್ಯರಾತ್ರಿ ,ನನ್ನ ತುಟಿಕಚ್ಚಿ
ಹುಡುಗಾ ನಿನ್ನ ಅಧರವೆಷ್ಟು ಸಿಹಿ
ಅಂದಾಗಲೇ ಗೊತ್ತಿತ್ತು ..ನೀನು ...
........................ಹೆಣ್ಣು ಸೊಳ್ಳೆ ಎಂದು $#$!!!      

Friday, August 20, 2010

ಮೌನಿ !ಹೇಗೆ ಕೊಡಲಿ ನನ್ನ ಮೌನಗಳಿಗೆಲ್ಲ ಕಾರಣವ ?
ಒಂದೊಂದು ಮೌನಗಳಿಗೂ ನೂರಾರು ಕಾರಣಗಳಿವೆ 
ಅರ್ಥವಾಗಬೇಕಲ್ಲ ......
ಸೋತಿದ್ದೇನೆ ಹಲವಾರು ಸಲ 
ಮೌನಗಳಿಗೆಲ್ಲ  ಕಾರಣಗಳ ಹುಡುಕಿ,
ನನಗಿನ್ನೂ ಉತ್ತರ ಸಿಕ್ಕಿಲ್ಲ.
ಹುಡುಕುತ್ತ ಹೋದ ಹಾಗೇ ಮೌನಗಳೆಲ್ಲ 
ಬರೀ ಪ್ರಶ್ನೆಗಳು ....ಉತ್ತರ ಸಿಗದ ಪ್ರಶ್ನೆಗಳು .....!
ಹುದುಗಿರುವ ಎಷ್ಟೋ  ಬಾವನೆಗಳ ನೋವುಗಳ  ಮಿಶ್ರಣ
ನನ್ನ ಮೌನಗಳು ....!ಕಂಡರೂ ಕಾಣದಿರುವ ವಿಷಾದ ಛಾಯೆ 
ಕೆಲವೊಮ್ಮೆ ನನ್ನ ಮೌನಗಳಿಗೆ ನನಗೆ ಕಾರಣ ಗೊತ್ತಿರುವುದಿಲ್ಲ
ಮನಸ ತುಂಬಾ ಬೆಚ್ಚಗೆ ಹೊದ್ದು ಕುಳಿತುಬಿಟ್ಟಿರುತ್ತದೆ
ನಾನೇನು ಮಾಡಲಿ ಹುಡುಗೀ 
ನಿನ್ನ ನೋಡಿದಾಗ ಸಹ ನಾನು ಮೊರೆಹೋಗುವುದು 
ಮೌನ ಸಂಬಾಷಣೆಗೆ ....
ಆದರೆ ನಿನಗರ್ಥವಾಗಬೇಕಲ್ಲ !


Wednesday, August 18, 2010

ಮೊದಲ ವರ್ಷಧಾರೆ


ಅದೊಂದು ಮುಸ್ಸಂಜೆ ,ಸೂರ್ಯ ಕಿರಣವ ತಡೆದು ,
ಮಂಜಿನ ಹನಿಗಳ ಕಡೆಗಣಿಸಿ ,
ಬಂತು ಮೊದಲ ವರ್ಷಧಾರೆ .
ಚಿಟ್ಟೆಗಳ ಮನವ ತಣಿಸಲು ,ಮಿಡತೆಗಳ ತುಡಿತವ ಕೆಣಕಲು ,
ಈ ಇಳೆಯ ತಾಕಿತು ಮೊದಲ ವರ್ಷಧಾರೆ .
ದಟ್ಟನೆಯ ಮೋಡಗಳಲಿ ಅಡಗಿ ಕುಳಿತು
ಬೆಂದ ಭುವಿಗೆ ನೊಂದ ಜೀವಿಗೆ ,
ತಂಪನ್ನೆರೆಯಲು ಬಂತು ಈ ವರ್ಷಧಾರೆ .
ರಪರಪನೆ ಜಿಟಜಿಟನೆ ತೊಟ್ಟಿಕ್ಕಿದವು
ಈ ಇಳೆಯ ಚುಂಬಿಸಲು .
ಹಸುರ ಹೊದ್ದಿಗೆಯ ಹಾಸಲು
ಬಂತು ಮೊದಲ ವರ್ಷಧಾರೆ
ಒಮ್ಮೊಮ್ಮೆ ಜೋರಾಗಿ ಮರುಕ್ಷಣವೇ ಮಿತವಾಗಿ ,
ಹಿತವಾಗಿ ಬಂತು ಈ ಧಾರೆ
ತಿಳಿ ನೀರ ಕದಡಿ ,ಹೊಂಬಣ್ಣಗಳ ಹರಡಿ
ಮಿಂಚಾಗಿ ಬಂತು ಜಲಧಾರೆ
ಮೈ ಮನ ತಣಿಸಲು ,ಕನಸುಗಳ ಉಳಿಸಲು
ಸಂಜೀವಿನಿಯಾಗಿ ಬಂತು ಮೊದಲ ವರ್ಷಧಾರೆ

Sunday, August 15, 2010

ಅವಳೊಂದು ತಬ್ಬಲಿ ಹುಡುಗಿ

                                                                               


ಏಕೋ ಏನೋ ಅವಳ ಕಣ್ಣುಗಳು
ತನ್ನ ಹೊಳಪನ್ನು ಕಳೆದುಕೊಂಡಿವೆ
ಬಾಡಿದ ಮುಖ ,ಕಣ್ಣಂಚಿನ ನೀರು ..
ಅವಳ ಅವ್ಯಕ್ತ ನೋವಿನ ಸೆಲೆಯಂತಿದೆ.
ತುತ್ತು ಕೂಳಿಗೂ ,ಹಸಿದ ಕಣ್ಣುಗಳ ಕಾಟ,
ಆದರೂ ಬದುಕಬೇಕಲ್ಲ ,ಎಲ್ಲ ವೇದನೆಗಳ ಮುಚ್ಚಿಟ್ಟು..
ಕನಸಿಗಂತೂ ಬರವಿಲ್ಲ ,ಆದರೇಕೋ ,ಏನೋ ಒಳಗೊಂದು
ಅವ್ಯಕ್ತ ಭೀತಿ ..
ಕನಸ ನನಸಾಗಿಸಲು ಮಾಡುವುದೇನು ಬಂತು?
ಎಲ್ಲ ಬಿಡುವುದು ಮಾತ್ರ ...
ತುತ್ತು ಕೂಳ ತುಂಬಿಸಲು ..
ಬದುಕಬೇಕಲ್ಲ ...ಹಸಿದ ಕಣ್ಣುಗಳ ತಣಿಸಿ .
ಎಲ್ಲ ವೇದನೆಗಳ ಮುಚ್ಚಿಟ್ಟು ....

Friday, August 13, 2010

ಕಣ್ಣೀರ ಬಿಂದು


ನನಗಾಗಿ ಬಿಟ್ಟುಬಿಡು ಒಂದು 
ಕಣ್ಣೀರ ಬಿಂದು ,
ಕೊನೆಯ ಕ್ಷಣ ನಾನು ನನ್ನ ಕಾಣಬೇಕಿದೆ
ನಿನ್ನ ಕಣ್ಣೀರ ಪ್ರತಿಬಿಂಬದೊಳಗೆ 
ಹಾಗೆ ಒಮ್ಮೆ ಆಲಂಗಿಸು ನಿನ್ನ ತೆಕ್ಕೆಯೊಳಗೆ 
ನನ್ನ ತಬ್ಬಿ , 
ಸಾಯಬೇಕಿದೆ ನಿನ್ನ ತೆಕ್ಕೆಯೊಳಗೆ 
ನನ್ನ ನೋಡುತ್ತಾ ನಿನ್ನ ಕಣ್ಣೀರ ಪ್ರತಿಬಿಂಬದಲಿ 
ಕೊನೆಯ ಉಸಿರು ಬಿಡುವ ಮುನ್ನ 
ನನಗಾಗಿ ಬಿಟ್ಟುಬಿಡು ಒಂದು 
ಕಣ್ಣೀರ ಬಿಂದು . 

Saturday, August 7, 2010

ಹುಚ್ಚುಮನಸು
ಅದಾವ ಆಕರ್ಷಣೆ ನಿನ್ನಲ್ಲಿ
ಬರಿ ಕನಸ ಗೋಪುರ ಕಟ್ಟಿ ನಿನ್ನ
ನೆನಪಲ್ಲೇ ಹುಚ್ಚನಾದನಲ್ಲೇ ...
ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಿಲ್ಲ ,
ಮಾತನಾಡಿದ್ದಿಲ್ಲ ..ನನ್ನೊಳಗೆ
ನಾನೇ ಮೌನಿಯಾದೆನಲ್ಲೇ
ನೀನಿಲ್ಲದಾಗೂ ನಿನ್ನ ಹುಡುಕುವ
ಎದುರಿಗೆ ಬಂದರೆ ಮತ್ತೆಲ್ಲೋ ನೋಡುವ
ಈ ಹುಚ್ಚು ಮನಸಿಗೇನು ಮಾಡಲೇ ?
ನಿನ್ನ ಬಾವನೆಗಳ ಅರಿಯದೆ ,
ನನ್ನ ಬಾವನೆಗಳ ಬಿರಿಯದೆ
ಅಲ್ಲೇ ಗುಟ್ಟಾಗಿ ಮುಚ್ಚಿಟ್ಟುಕೊಂಡ
ಈ ಪ್ರೀತಿಗೇನು ಮಾಡಲೇ?
ಎದುರಿಗೆ ಹೇಳಿಕೊಳ್ಳಲು ಕಳೆದುಕೊಳ್ಳುವ ಭೀತಿ ,
ಹೇಳಿಕೊಳ್ಳದೆ  ಕಳೆದುಕೊಂಡ ರೀತಿ 
ಈ ರೀತಿ ಮನಸ ಹಚ್ಚಿಕೊಂಡೂ
ನಿನ್ನ ಹೇಗೆ ಕಳೆದುಕೊಳ್ಳಲೇ
ಹೇಗೆ ತಿಳಿಸಲೇ ನಿನಗೆ ನನ್ನೆಲ್ಲ ಬಾವನೆಗಳ .....?