Tuesday, August 2, 2011



ಜುಳು ಜುಳು ಹರಿವ ನೀರ ಮೇಲೆ ತೇಲಿ ಹೋದ 
ಬಂಗಾರದೆಲೆಯ ಬಣ್ಣ ನನ್ನ ಚೆಲುವೆಯ ಮೈಬಣ್ಣ  ..
ಹುಣ್ಣಿಮೆ ಚಂದ್ರನ ಬೆಳಕನ್ನೂ ಹೀರಿ ಕಣ್ಣಲ್ಲೇ ಕೊಲ್ಲೋ ಚೆಲುವೆ ..
ನೋಡಬೇಕವಳ ತುಟಿಯ ಕೊಂಕುತನವನ್ನ ..
ಸದ್ದಾಗದಂತೆ ಚಿಟ್ಟೆಯೂ ಕಾಲು ಕಿತ್ತಿವೆ  ... 
ಅವಳ ಸ್ಪರ್ಶಕೆ ಬಂದ ಹೂಗಳೂ ...ಮೆಲ್ಲಗೆ ನಿದ್ದೆ ಹೋಗಿವೆ ...
ಬೀಸಿ ಬಂದ ಗಾಳಿ ..ಅವಳ ನೋಡುತ್ತಲೇ ಮೆಲ್ಲಗೆ 
ಪಕ್ಕ ಸರಿದು ಮುಂಗುರುಳ ನೀವಿ  ಹೋಗಿದೆ ..
ಹಸಿರ ಮರಗಳೆಲ್ಲ ಇಬ್ಬನಿಯ ಹಾಗೆ ತಬ್ಬಿ ಹಿಡಿದಿವೆ ..
ಎಲ್ಲಿ ಜಾರುವುದೋ ಎಂದು ...
ನೋಡಬೇಕವಳ ಚೆಲುವ ... 
ಮುಂಜಾವಿನ ಬಿನ್ನಾಣ ಗಳನೆಲ್ಲ  ..
ಹರವಿ  ಕುಳಿತಿದೆ ಪ್ರಕೃತಿ ... ನನ್ನವಳ ಚೆಲುವಿಗೆ ಸಾಟಿಯಾಗಲು..
ನಾನೋ .. ಎಲ್ಲ ನೋಡುತ್ತಲೇ ಬಂದಿಯಾಗಿದ್ದೆ...
ಅವಳ ಬಿಸಿ ಅಪ್ಪುಗೆಯಲ್ಲಿ ... 

 
     

1 comment:

  1. ಹಸಿರ ಮರಗಳೆಲ್ಲ ಇಬ್ಬನಿಯ ಹಾಗೆ ತಬ್ಬಿ ಹಿಡಿದಿವೆ ..
    ಎಲ್ಲಿ ಜಾರುವುದೋ ಎಂದು ...

    ಪಕ್ಕದಲ್ಲಿರುವ ಫೋಟೋಕ್ಕೆ ಸಾಲುಗಳು ಹೊಂದಿಕೊಳ್ಳುತ್ತದೆ.....

    ಚನ್ನಾಗಿದೆ....

    ReplyDelete