Thursday, May 17, 2012


ಹಾಗೆ ಬಂದು ಸುಮ್ಮನೆ ಹೋಗಿ ಬಿಡಿ ಮೋಡಗಳೇ 
ಈಗಷ್ಟೇ ಸಿಂಗರಿಸಿದ್ದೇನೆ ಕನಸುಗಳ ನನ್ನ ಸಂಗಾತಿಗೆಂದು 
ಮಳೆಸುರಿಸಬೇಡಿ...
ಒಂದಷ್ಟು ಹಣತೆಗಳ ಹಚ್ಚಿಟ್ಟು , ಬೆಳದಿಂಗಳಿಗಾಗಿ ಕಾಯುತ್ತಿದ್ದೇನೆ 
ಈ ಮುಸ್ಸಂಜೆ ಬೆಳದಿಂಗಳಿಗೆ ಮಾತ್ರ ಆಮಂತ್ರಣ ..
ತಂಗಾಳಿಗೂ ಹೇಳಿಬಿಟ್ಟಿದ್ದೇನೆ .. ಕದ್ದು ಕದ್ದು ನೋಡ ಬೇಡವೆಂದು ,..
ನನ್ನವಳ ಜೊತೆಗೊಂದು ಸುಂದರ ಮುಸ್ಸಂಜೆಯ ನನಗೆ ಬಿಡು ..
ನಮ್ಮಿಬ್ಬರ ಆತುರಕ್ಕೆ ಸೂರ್ಯನೂ ನಾಚಿ ಮೊದಲೇ ಮರೆಯಾಗಿ 
 ಮುಸ್ಸಂಜೆಯ  ಕಳಿಸಿ ಕೊಟ್ಟಿದ್ದಾನೆ ..
ಹಂಚಿ ಕೊಳ್ಳುವುದಿದೆ ಎಷ್ಟೋ ಕನಸುಗಳ ಮುಸ್ಸಂಜೆ ಸಾಕ್ಷಿಯಾಗಿ ..
ಇಡೀ ರಾತ್ರಿ ಕೈ ಕೈ ಹಿಡಿದು ಆಗಸದ ನಕ್ಷತ್ರಗಳ ಪಾಲು ಮಾಡ ಬೇಕಿದೆ ..
ಕಾಲುಗಳ ನೀರಲ್ಲಿ ಬಿಟ್ಟು ಹಾಗೆ ಆಗಸವ ನೊಡುತ್ತ ಅಷ್ಟೂ ಬೆಳದಿಂಗಳ  
ಬೆಳಕನ್ನು ನನ್ನವಳ ಕಣ್ಣ ತುಂಬಬೇಕಿದೆ ..
ನಮಗಾಗೆ ಇರುವ ಮುಸ್ಸಂಜೆಯಿದು ಸುಮ್ಮನೆ ದೂರದಿಂದ 
ನಾಲ್ಕೇ ನಾಲ್ಕು ಹನಿಯ ನಯವಾಗಿ ನನ್ನವಳ ತುಟಿಯ ಮೇಲೆ  ಸುರಿಸಿಬಿಡು ..
ಬೆಳದಿಂಗಳ ಬೆಳಕಿಗೆ ನೀರ ಹನಿಗಳೆಲ್ಲ  ಮುತ್ತಾಗಲಿ..
ಆ ಮುತ್ತುಗಳನೆಲ್ಲ  ಬಚ್ಚಿಡಬೇಕಿದೆ  ನನ್ನೊಳಗಿನ ಕನಸುಗಳಲ್ಲಿ ...

4 comments:

  1. ರಸಿಕ ಚಿತ್ತಕೆ ಒಲಿದ ಕಾವ್ಯಧಾರೆ.

    ಆಕೆ ಸಂಭ್ರಮಿಸಲು ಇಂತಹ ಸನ್ನಿವೇಶ ಸೃಷ್ಟಿಸಿದ ನೀವೂ ಮಾನ್ಯರೇ.

    ಉತ್ತಮ ಲಾಲಿತ್ಯ ಪೂರ್ಣ ಕವನ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ನಕ್ಷತ್ರಗಳನ್ನೆಲ್ಲ ರಾತ್ರಿಯ ಆಕಾಶದ ತುಂಬೆಲ್ಲಾ ಹರಡಿದಂತೆ,
    ಮನಸ್ಸ ತುಂಬೆಲ್ಲಾ ನಲ್ಲೆಯ ಕನಸುಗಳಿಂದ ಹರಡಿ-ಕಾಯುತ್ತಿರುವಿರಿ... :)
    ನಲ್ಲೆಯ ಚಿತ್ತನ್ನ ಸೂರೆಗೊಳಿಸುವ ಕವನ...:) :) :)

    ReplyDelete
  3. ದನ್ಯವಾದ ಬದರಿ ಸರ್ , & ಗೋಪಾಲ ಕೃಷ್ಣ

    ReplyDelete
  4. "ಒಂದಷ್ಟು ಹಣತೆಗಳ ಹಚ್ಚಿಟ್ಟು , ಬೆಳದಿಂಗಳಿಗಾಗಿ ಕಾಯುತ್ತಿದ್ದೇನೆ
    ಈ ಮುಸ್ಸಂಜೆ ಬೆಳದಿಂಗಳಿಗೆ ಮಾತ್ರ ಆಮಂತ್ರಣ .."superb lines ....

    ReplyDelete