Thursday, March 22, 2012


ಅದೊಂದು ದಿನ ನನ್ನ ಹಳೆ ಪುಸ್ತಕಗಳನ್ನು 
ಜಾಲಾಡಿದಾಗ ನನಗೆ ನೀ ಕೊಟ್ಟ ನವಿಲುಗರಿ 
ಸಿಕ್ಕಿತ್ತು .. 
ಅಲ್ಲೆಲ್ಲೋ ಪಾಪದ ನವಿಲು ಗರಿಬಿಚ್ಚಿ ಕುಣಿವಾಗ 
ಬಿದ್ದ  ಗರಿಯದು ..ನಿನಗದು ನಮ್ಮಿಬ್ಬರ ಪ್ರೀತಿಯ 
ಸಂಕೇತವಾಗಿತ್ತದು ..
ಆ ಬೆಳದಿಂಗಳ ನಡುವೆ ಮರದ ಕೆಳಗೆ 
ಬುಜದ ಮೇಲೆ ತಲೆಯಾನಿಸಿ ಪಿಸುನುಡಿದಿದ್ದೆ
ನನ್ನಾಣೆ .. ಈ ನವಿಲುಗರಿಯಲ್ಲಿದೆ ನನ್ನ ಹೃದಯ 
ಕಳೆಯಬೇಡ.. ಹೇಗೆ ಬಚ್ಚಿಡುತ್ತೀಯ ಕೇಳಿದ್ದಳವಳು..
ಸುಮ್ಮಗೆ  ಮುಂಗುರುಳ ಸರಿಸಿ , ನಕ್ಕು ಹೇಳಿದ್ದೆ .....
ಎಂದೂ ನಾ ನೋಡದ ಪುಸ್ತಕದಲ್ಲಿಡುತ್ತೇನೆ.. 
ಕಣ್ಣಂಚಿನ ಕಂಬನಿಯೊಂದು ಜಾರಿ ನನ್ನ ಎದೆಯ ಮೇಲೆ 
ಬಿದ್ದಿತ್ತು ...ನಾ ರಾಧೆ ,, ನೀ ಕೃಷ್ಣ .. ಹೀಗೆ ಇರಲಿ ನಮ್ಮಿಬ್ಬರ 
ಪ್ರೀತಿ ಎಂದು ಬಿಗಿದಪ್ಪಿದ್ದಳು ... 
ಅಲ್ಲೆಲ್ಲೋ ಮಿಂಚಿನ ಬೆಳಕು ಭುವಿಯ ಸೇರಿತ್ತು ..
ಅಲ್ಲೇ ಕೀಟಲೆ ಮಾಡಿದ್ದೆ ... ನೀ ರಾಧೆಯಾದರೆ .....
ರುಕ್ಮಿಣಿ ಯಾರು ಅಂದು ... 
ನೀ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ ... ರುಕ್ಮಿಣಿಯ ಮಾತು ಮರೆತು ಹೋಗಿತ್ತು ..
ಹಾಗೆ ಹೇಳಿದವಳೇ ಮೌನವಾಗಿದ್ದೆ ..
ನವಿಲುಗರಿಯೂ ಕನಸ ಕಂಡಿತ್ತು ..
ಎಂದೂ ನೋಡದ ಪುಸ್ತಕದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದು ..
ಪಾಪದ ನವಿಲುಗರಿ ... ಇನ್ನೂ ಹಾಗೆ ಇದೆ ..
ಇಂದೇಕೋ ನವಿಲು ಗರಿ ಮತ್ತೆ ನೆನಪಾಗುತ್ತಿದೆ ..
ಬಚ್ಚಿಟ್ಟುಕೊ ಎಂದ  ರಾಧೆಯೂ ಮೌನ ತಳೆದಿದ್ದಾಳೆ ... 







11 comments:

  1. ವಾವ್ವ..ವಾವ್ವ..
    ಪ್ರೇಮದ ನವಿರು ಭಾವಗಳಿಂದ ತುಂಬಿದ ಪ್ರೇಮ ಕವನ...ಸೂಪರ್...

    ReplyDelete
  2. ವಾಹ್ !
    ತುಂಬಾ ಸುಂದರ ಸಾಲುಗಳು...!
    ಬಹಳ ಇಷ್ಟವಾಯ್ತು...

    ಅಭಿನಂದನೆಗಳು ಚಂದದ ಸಾಲುಗಳಿಗೆ...

    ReplyDelete
  3. ಧನ್ಯವಾದಗಳು ಪ್ರಕಾಶಣ್ಣ

    ReplyDelete
  4. ಆಹಾ, ಭರ್ಜರಿ ಕವನ ವೆಂಕಟಣ್ಣ :)

    ReplyDelete
  5. ಸುಂದರ ಕವನ ... ನವಿಲುಗರಿಯಷ್ಟೇ ಮುದ್ದಾಗಿದೆ

    ReplyDelete
  6. ವಾವ !! ಕನಸುಗಳ ಭಾವಲೋಕ, ನವಿಲುಗರಿಯ ಪದ್ಯ ಎಲ್ಲಾ ಚೆನ್ನಾಗಿದ್ದು ವೆಂಕಣ್ಣ :-)

    ReplyDelete