Thursday, February 9, 2012



ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , 
ನಿನ್ನೊಲವಿನ ಬಿಸಿ ತಟ್ಟಿದ್ದರೂ,ನಾ ಮಾತ್ರ ಹೀಗೇ,
 ಏನೂ ಗೊತ್ತಿಲ್ಲದ ಹಾಗೆ ಒಳಗೊಳಗೇ ಮನಸಿನಂಗಳದಲ್ಲಿ,
 ಎದೆಬಿಚ್ಚಿ ಮಾತನಾಡುತ್ತಿರುತ್ತೇನೆ, 
ಹೇಳಲೋ ಬೇಡವೋ ಎಂಬ ವಕಾಲತ್ತುಗಳ, 
ನಡುವೆ ಕಾದಾಡುತ್ತಿರುತ್ತೇನೆ., 
ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , 
ಅದೆಸ್ಟು ಆಮಿಷಗಳ ಮೆಟ್ಟಿ ನನ್ನೊಟ್ಟಿಗಿರುತ್ತದೋ,
 ನಿನ್ನ ಮನ ? ಕಾದು ನೋಡುತ್ತೇನೆ ,
 ಕಾಯಬೇಕು ಹುಡುಗೀ ,,
 ಕಾದಷ್ಟೂ ನಮ್ಮೊಳಗಿನ ಹುಸಿ ಬಯಲಾಗಬೇಕು , 
ಭ್ರಮೆ ಬೆತ್ತಲಾಗಬೇಕು ,ಪೊರೆ ಹರಿಯಬೇಕು ..., 
ಇಲ್ಲ ಹುಡುಗೀ ,,,ಇನ್ನಷ್ಟು ದಿನ ಹೇಳುವುದಿಲ್ಲ,
 ನಾ ನಿನ್ನ ಪ್ರೀತಿಸುವುದ,
 ನಿನ್ನೊಲವಿನ ಬಳ್ಳಿ ಚಿಗುರಲಿ ನನ್ನೊಳಗೂ ಟಿಸಿಲೋಡೆಯುತ್ತದೆ, 
ಹಾದಿಗುಂಟ ಮುಳ್ಳು ಕಂಟಿಗಳ ದಾಟಿ ,
 ಮುಂದೊಂದು ದಿನ ನನ್ನ ಬೆಸೆಯುತ್ತದೆ ., 
ಅಲ್ಲಿಯವರಗೂ ನಾ ಮಾತ್ರ ಹೀಗೇ, ಏನೂ ಗೊತ್ತಿಲ್ಲದ ಹಾಗೆ ...,
 ನಿನ್ನ ಮನಸಿನಂಗಳದಲ್ಲಿ ಎದೆ ಬಿಚ್ಚಿ, ಮಾತನಾಡುತ್ತಿರುತ್ತೇನೆ

13 comments:

  1. ವೆಂಕಟೇಶ..

    ಕವನಗಳ ಭಾವರ್ಥ ತುಂಬಾ ಸುಂದರವಾಗಿ ಮೂಡಿ ಬಂದಿದೆ...
    ಇದರಲ್ಲಿ ತುಂಬಾ ಇಷ್ಟವಾಗುವ ಸಾಲುಗಳಿವೆ..

    ಅಭಿನಂದನೆಗಳು ಸುಂದರ ಸಾಲುಗಳಿಗೆ..

    "ಕಾಯಬೇಕು ಹುಡುಗೀ ,,
    ಕಾದಷ್ಟೂ ನಮ್ಮೊಳಗಿನ ಹುಸಿ ಬಯಲಾಗಬೇಕು ,
    ಭ್ರಮೆ ಬೆತ್ತಲಾಗಬೇಕು ,ಪೊರೆ ಹರಿಯಬೇಕು ...,
    ಇಲ್ಲ ಹುಡುಗೀ ,,,ಇನ್ನಷ್ಟು ದಿನ ಹೇಳುವುದಿಲ್ಲ,
    ನಾ ನಿನ್ನ ಪ್ರೀತಿಸುವುದ,
    ನಿನ್ನೊಲವಿನ ಬಳ್ಳಿ ಚಿಗುರಲಿ ನನ್ನೊಳಗೂ ಟಿಸಿಲೋಡೆಯುತ್ತದೆ",

    ReplyDelete
  2. ಮನಸ್ಸಿಗೆ ಕಚಗುಳಿ ಇಡುವ ಕವನ....ಜೊತೆ ಜೊತೆ ಗೆ ಪ್ರೀತಿ ಕ್ಷಣಿಕವಾದದ್ದಲ್ಲ..ಕಾದಷ್ಟು ಮಾಗುತ್ತದೆ... ಪ್ರೀತಿ ಗಟ್ಟಿಯಾಗುತ್ತದೆ ಎಂಬಾ ಸಂದೇಶವೂ ಇದೆ...ಚಂದದ ಕವನ...

    ReplyDelete
  3. ತುಂಬಾ ಚಂದ ಇದ್ದು ವೆಂಕಣ್ಣಾ.. :)))

    ReplyDelete
  4. ವೆಂಕಟೇಶ್ ಒಟ್ಟಾರೆ ಕವನ ಪ್ರಭಾವಿ ರೂಪದಲ್ಲಿ ಪ್ರತಿಬಿಂಬಿತವಾದರೂ ನನಗೆ ಈ ಸಾಲುಗಳು ಇಷ್ಟವಾದವು.
    ಭ್ರಮೆ ಬೆತ್ತಲಾಗಬೇಕು ,ಪೊರೆ ಹರಿಯಬೇಕು ...,
    ಇಲ್ಲ ಹುಡುಗೀ ,,,ಇನ್ನಷ್ಟು ದಿನ ಹೇಳುವುದಿಲ್ಲ,
    ನಾ ನಿನ್ನ ಪ್ರೀತಿಸುವುದ,
    ಶುಭವಾಗಲಿ.

    ReplyDelete
  5. ಧನ್ಯವಾದಗಳು ಅಜಾದ್ ಸರ್

    ReplyDelete
  6. ಕಾವ್ಯಾತ್ಮಕ ಶೈಲಿ ಮತ್ತು ನಿರೂಪಣೆಯಲ್ಲಿನ ಸರಳತೆ ಮನಸಿಗೆ ಹಿಡಿಸಿತು.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete