Wednesday, January 25, 2012

ದಾರಿ


ಗಮ್ಯವೆಂಬುದಿಲ್ಲ ದಾರಿಗೆ ..
ಒಂದರ ಜೊತೆ ಮತ್ತೊಂದು ,ಹೀಗೆ ಕೂಡುತ್ತ ಸಾಗುತ್ತದೆ
ನಡೆವ ದಾರಿಯಲ್ಲಿವೆ ಕಲ್ಲು ಮುಳ್ಳುಗಳು ..
ಪಯಣ ಸುಲಭವಲ್ಲ , 
ದಾರಿ ಸವೆದಿದೆ .. ಬಹುಶ ಸರಿಯಾದ ದಾರಿಯಿರಬೇಕು 
ಅಂದುಕೊಂಡು ನಡೆದರೂ ಕೆಲವೊಮ್ಮೆ ತಪ್ಪಿಸಿಬಿಡುತ್ತದೆ..
ಹೊಸ ಹೊಸ ಕವಲುಗಳು ಎಲ್ಲ ದಾರಿಗಳಿಗೂ ..
ಸಂಬಂದಗಳ ಹಾಗೆ .. .. ಬಿಟ್ಟು ತನ್ನದೇ ದಾರಿ ಎಂದು 
ಹೋಗಿರಬೇಕು ...
ಹೊಸ ದಾರಿ ಹಿಡಿದು ಹೋಗುವುದೇನು ಸುಲಭವಲ್ಲ ..
ಅಲ್ಲಿ ಮತ್ತೂ ದೊಡ್ಡ  ಹಳ್ಳ ಕೊಳ್ಳ ಕಂದರಗಳಿರುತ್ತದೆ..
ಸರಿ  ದಾರಿಯ ಬಿಟ್ಟು ಹೊಸ ಹಾದಿಯ ಹಿಡಿದು ಹೋದವರಿಗೆನು ಗೊತ್ತು ..
ಅಲ್ಲಿ ದಾರಿಯೇ ಇಲ್ಲ ಹೋದದ್ದೇ ದಾರಿ ಎಂದು ..
ದಾರಿಯೂ ಹಾಗೆ ಹೊಸ ಹೊಸ ಸಂಬಂದಗಳ ಜೋಡಿಸುತ್ತದೆ ..
 ಸಂಬಂದಗಳ ಕೊಂಡಿಯನ್ನೂ ಕಳಚುತ್ತದೆ ..
ದಾರಿಗೆ ಗಮ್ಯವೆಂಬುದಿಲ್ಲ ..ಅದು ಯಾವಾಗಲೂ ಹಾಗೆ .. 
ಹೊಸ ಹಾದಿಯ ಹಿಡಿದು ಹೊರಟವರ ದಿಕ್ಕು ತಪ್ಪಿಸುತ್ತದೆ 
ಹಾಗೆ ಹಳೆ ಹಾದಿಯಲ್ಲೇ ಹೋಗುವವರಿಗೆ 
ಹೊಸ ದಾರಿಯ ಕೊಂಡಿ ಕೂಡಿಸುತ್ತದೆ ...


10 comments:

  1. ದಾರಿ ಮತ್ತೆ ಸಂಬಂಧ ಎರಡೂ ಒಂದೇ.. ನಡೆದದ್ದೆ ದಾರಿ , ಹೊಂದಿದ್ದೆ ಸಂಬಂಧ.. ಚೆನ್ನಾಗಿದೆ :)

    ReplyDelete
  2. ದಾರಿ ಸವೆದಿದೆ .. ಬಹುಶ ಸರಿಯಾದ ದಾರಿಯಿರಬೇಕು
    hi venky.... ee saalu exclusiveaagi andre.... ulidante ulida ella saalugaLannu berpadisi, bare ee saalannu odidare.... tumbaa arthagarbhitavaagide - i liked it.

    ReplyDelete
  3. ದಾರಿ ಮತ್ತು ಸಂಬಂಧಗಳನ್ನು ಒಂದಕ್ಕೊಂದು ಜೋಡಿಸಿ ಸಾಮ್ಯತೆಯನ್ನು ಗುರುತಿಸಿದ ಪರಿ ಅದ್ಭುತ.....

    Good one..

    ReplyDelete
  4. ದಾರಿಗಳ ಚಿಂತನೆ ಮತ್ತು ಅವು ಸೃಷ್ಟಿಸುವ ಪೀಕಲಾಟ ವರ್ಣನಾತೀತ.

    ReplyDelete
  5. ಹೊಸತನ್ನು ಹುಡುಕಹೊರಟ ಎಲ್ಲರಿಗೂ ಅನ್ವಯ.. ನಾನು ಇದನ್ನು ನನ್ನ ಸಂಶೋಧನಾ ಕ್ಷೇತ್ರಕ್ಕೆ ಹಾಕಿ ನೋಡಿದೆ... ಹೌದು...ಪ್ರತಿ ಪದ ಎಷ್ಟು ಚನ್ನಾಗಿ ಹೊಂದಿಕೊಳ್ಳುತ್ತೆ..!!!
    ಹೊಸ ಹಾದಿಯ ಹಿಡಿದು ಹೊರಟವರ ದಿಕ್ಕು ತಪ್ಪಿಸುತ್ತದೆ
    ಹಾಗೆ ಹಳೆ ಹಾದಿಯಲ್ಲೇ ಹೋಗುವವರಿಗೆ
    ಹೊಸ ದಾರಿಯ ಕೊಂಡಿ ಕೂಡಿಸುತ್ತದೆ ...
    ಇಷ್ಟ ಆಯ್ತು...ಸರಳ ಮತ್ತು ಅರ್ಥಗರ್ಭಿತ.

    ReplyDelete
  6. ಧನ್ಯವಾದಗಳು ಆಜಾದ್ ಸರ್ , ಬದರಿನಾಥ್ ಸರ್ ..

    ReplyDelete
  7. ದಾರಿ ಮತ್ತೆ ಸಂಬಂಧಗಳ ನಡುವೆ ತುಂಬಾ ಸಾಮ್ಯತೆಯಿದೆ.....ಚೆನ್ನಾಗಿದೆ ನಿಮ್ಮ ಬರಹ...

    ReplyDelete
  8. ದಾರಿಗೆ ಗಮ್ಯ ವಿಲ್ಲ...... ಈ ಸಾಲು ತುಂಬಾ ಚನ್ನಾಗಿದೆ.

    ReplyDelete