Friday, December 2, 2011

ಕವನವೆಂದರೆ ...



ಕವನ ಬರೆಯುವುದು ಸುಲಭವಲ್ಲ ಬರೆದದ್ದೆಲ್ಲವೂ ಕವನವಾಗುವುದಿಲ್ಲ ..
ಶಬ್ದಗಳ ಪೋಣಿಸಬೇಕು ಮನಸ ಮೂಲೆಯಿಂದ ಆರಿಸಿ 
ಪದಪುಂಜಗಳ ಜೋಡಿಸಬೇಕು ...
ಕನಸ ಲೋಕದೊಳಗೆ ಲಗ್ಗೆಯಿಡಬೇಕು...
ಒಂದೊಂದೇ ಕನಸುಗಳ ಹೆಕ್ಕಿ ಸ್ವಲ್ಪ ಬಣ್ಣ ಬಳಿದು 
ಜುಳು ಜುಳು ಹರಿವ ತೊರೆಯ ನೀರಲ್ಲಿ ದೋಣಿಯಂತೆ 
ಹರಿಯ ಬಿಡಬೇಕು ....
ಒಮ್ಮೆ ಹರಿಯಬಿಟ್ಟರೆ ಅದು ಗಮ್ಯದವರೆಗೆ ಸಾಗಬೇಕು ...
ಅಲ್ಲಿಯವರೆಗೂ ಮರೆನಿಂತು ನೋಡಬೇಕು ....
ಕವನವೆಂದರೆ ...
ಅತೀತ ವರ್ಣನೆಗಳ ಮಾಯಾಲೋಕ ...
ಬಾವನೆಗಳ ವರ್ಣಿಸಬೇಕು....ಅತಿಶಯೋಕ್ತಿಗಳ ತಬ್ಬಿ ಕೂರಬೇಕು 
 ಮಾಯಾನಗರಿಯ ಮೂಲೆ ಮೂಲೆ ಗಳ ತಡಕಾಡಬೇಕು... 
ಬಚ್ಚಿಟ್ಟ ನಿಧಿಯ ಹುಡುಕಿ ತೆಗೆದು ...
ಮನಸ ಮೂಲೆಯೊಳಗೆ ಕಾಪಿಡಬೇಕು ....
ಕವನವೆಂದರೆ ಮತ್ತೇನಿಲ್ಲ.... ಎನ್ನುತ್ತಲೇ ಮನಸ ಬಾವನೆಗಳ 
ಹರಿಬಿಡಬೇಕು...  

 

5 comments:

  1. ವಕೀಲ್ರೆ, ಚೊಲೋ ಇದ್ರೋ !! ಶುಭಮಸ್ತು

    ReplyDelete
  2. ವಾಹ್! ತುಂಬಾ ಚೆನ್ನಾಗಿ ಹೇಳಿದ್ದೀರ ಕವನದ ಬಗ್ಗೆ.. ಇಷ್ಟವಾಯಿತು!

    ReplyDelete
  3. ಧನ್ಯವಾದಗಳು ಭಟ್ರೇ ,ಪ್ರದೀಪ್ & ವಿಜು

    ReplyDelete
  4. ಕವನವೆಂದರೆ......
    ಅದು.....
    ಬೇಡಾ ಬಿಡಿ.... ನೀವೇ ಹೇಳಬಿಟ್ಟಿದ್ದೀರಾ....
    ಚನ್ನಾಗಿದೆ........

    ReplyDelete