Sunday, May 1, 2011



ಇದೀಗ ತಾನೇ ಚದುರುತ್ತಿವೆ  .. ತುಂಡು ಮೋಡಗಳ ಜೊತೆ ,
ನೀಲಾಕಾಶದಲ್ಲಿ ಹಾಗೆ ಸುಮ್ಮನೆ 
ಒಂದಷ್ಟು ಅಕ್ಷರಗಳನು ಪೋಣಿಸಿಟ್ಟು ಗೀಚಿದ ನಿನ್ನಯ ಹೆಸರು ..
ಒಂದಷ್ಟು ಮಳೆ  ಹೊಯ್ದಂತೆ, ತೊಯ್ದ ಮರಳಿನ ಮೇಲೆ 
ಉಗುರ ತುದಿಯಲ್ಲಿ ತೀಡಿದ ,ನನ್ನನಿನ್ನಹೆಸರು....
ಬೇಕಂತಲೆಂದೇ ಬಿತ್ತಿದ ಒಂದಷ್ಟು ಬೀಜಗಳು 
ಮೊಳಕೆಯಡದಿವೆ ಅಚ್ಚಾದ ಹಸುರ ನೆಲದ ಮೇಲೆ ...
ಕೈ ಕೈ ಹಿಡಿದು ತಬ್ಬಿದ ಮನದ ಹಸಿರು ಇನ್ನೂ ಹಸಿಯಾಗಿಯೇ 
ಕನಸ ಕಾಡಿವೆ..
ಇನ್ನು ಹಾಗೇ ಬಾಕಿಯಾಗಿಯೇ  ಉಳಿದಿದೆ ಜೊತೆಯಲ್ಲಿ ಕಂಡ ಎಷ್ಟೋ 
ಕನಸುಗಳು ...
ಮುಂಗುರುಳ ತಿರುವಿ ತುಟಿಯ ಮೀಟಿದ  ಕೈಯ ಬೆರಳು ಗಳು...
ಕಚ್ಚಿದ ಗಾಯವಿನ್ನೂ ಮರೆತಿಲ್ಲ ...
ಎಲ್ಲವೂ ಹಾಗೆ ಇದೆ ಇನ್ನೂ ಹಸಿಯಾದ ಸವಿಗನಸು 
ನನಸಾಗದೆ ಹಳೆಯದನ್ನೇ ಮೆಲುಕ ಹಾಕಿವೆ ..
ಬಾಕಿಯಾಗಿಯೇ  ಉಳಿದಿದೆ ಇನ್ನೂ 
ಕನಸುಗಳೆಂಬ ಅಸಲು ಬಡ್ಡಿಗಳ ಲೆಕ್ಕಾಚಾರ ...




4 comments:

  1. ಚೆನ್ನಾಗಿವೆ ಸಾಲುಗಳು..

    ReplyDelete
  2. ಚೆನ್ನಾಗಿದ್ದು ವೆಂಕಣ್ಣ...

    ಸಾಲುಗಳು ಫೊಟೋದ ಜೊತೆ ದಿಕ್ಕಾಪಾಲಾಯ್ದು :)

    ReplyDelete
  3. ಚಿತ್ರ-ಚಿತ್ರಣ...ಸೂಪರ್.

    ಅನ೦ತ್

    ReplyDelete
  4. raashi choloiddu.salugalanna innondswlpa slim madididre raashi cholo kavanadange kantittu.hingidre onnamni alvarkenala...."ಬೇಕಂತಲೆಂದೇ ಬಿತ್ತಿದ ಒಂದಷ್ಟು ಬೀಜಗಳು
    ಮೊಳಕೆಯಡದಿವೆ ಅಚ್ಚಾದ ಹಸುರ ನೆಲದ ಮೇಲೆ "super.

    ReplyDelete