Tuesday, March 15, 2011

ಈ ಪ್ರೀತಿ ಎನ್ನುವುದು .. ಕೆಂಪು ತುಟಿ ಬಿರಿದು 
ಹೂ ನಗೆ ಎಸೆದು ,ಕಣ್ಣು ಮಿಟುಕಿಸಿ ಕೆಣಕುವಾಗ
ಎದೆಯಲ್ಲೇನೋ  ಕಂಪನದ ಅಲೆ ..
ಈ ಪ್ರೀತಿ ಎನ್ನುವುದು ಕಂಡ ಕೂಡಲೇ ಪುಳಕಿಸಿ
  ಮಾತನಾಡಲು ತವಕಿಸಿ , ಎದುರಿಗೆ ಹೋದಾಗ 
ಸಣ್ಣಗೆ ನಡುಗಿಸಿ ಸಾಧ್ಯವಾಗದೆ ಮತ್ತೆ ಬರುವ ...
ಈ ಪ್ರೀತಿ ಎನ್ನುವುದು ಕಣ್ಣ ನೋಟ ಕೂಡಲು..
ಹೃದಯ ಮಾತನಾಡಲು ,ಬಾವನೆಗಳೇ ಉಕ್ಕೇರಿ ಬರುವ 
ಸಾಗರದ ಅಲೆ ...
ಈ ಪ್ರೀತಿ ಎನ್ನುವುದು ಹೃದಯದಲಿ ಬಚ್ಚಿಟ್ಟುಕೊಂಡ ಯಾತನೆ ... 
ಮೇಲೆ ಕಾಣುವುದು ಎಲ್ಲೆಡೆ ಹಸಿರ ಎಲೆ 
ಆದರೆ ಒಳಗೆ ಮಾತ್ರ ತಲ್ಲಣದಾ  ಮಳೆ ...
  

3 comments:

  1. kavana chennagi iddu adre yaryarddaru photo tand hakada ha?...

    ReplyDelete
  2. ಹೂಂ. ಪ್ರೀತಿ ಅಂದರೇನೆ ಹಾಗೆ.....
    ಆಕಾಶದಿಂದ ನಕ್ಷತ್ರ ಜಾರಿದಂತೆ......
    ಯಾವಾಗ ಬರುತ್ತೋ ಗೊತ್ತೇ ಆಗುವುದಿಲ್ಲ.....
    ಪ್ರೀತಿಯಲ್ಲಿನ ತಾಕಲಾಟಗಳೆಲ್ಲಾ ಒಂದು ಮಧುರವಾದ ಯಾತನೆ...
    ಚನ್ನಾಗಿದೆ ಕವಿತೆ

    ReplyDelete
  3. ಪ್ರೀತಿಯ ಕಲ್ಪನೆ ಮತ್ತು ವರ್ಣನೆ ಚೆನ್ನಾಗಿದೆ

    ReplyDelete