Friday, September 17, 2010

ಈ ವಯಸೇ ಹೀಗೆ,




ಈ ವಯಸೇ ಹೀಗೆ,
ಕನಸುಗಳ ಬೆನ್ನು ಹತ್ತಿ ವಾಸ್ತವಗಳ ಕಣ್ಣು ಕಟ್ಟಿ ,
ಕಲ್ಪನೆಗಳ ಬಿಸಿಲುಕುದುರೆಯನೆರುವ
ಈ ವಯಸೇ ಹೀಗೆ ...
ಪ್ರೀತಿಯೆಂಬ ಮೋಡಿಯಲಿ ಸಿಲುಕಿ ,
ಬಾವನೆಗಳ ಅಡಿಯಲಿ ನಲುಗಿ ,
ನೋವಿನಲೂ ನಲಿವನ್ನು ಕಾಣುವ
ಈ ವಯಸೇ ಹೀಗೆ ...
ಬಯಸುವುದು ಕಣ್ಣಿಗೆ ಕಾಣಿಸುವುದ ,
ಅರಸುವುದು ಮನಸಿಗೆ ಅನಿಸುವುದ ..
ಕೈಗೆ ಸಿಗದಾಗ ಮುಮ್ಮಲ ಮರುಗುವ ,
ಈ ವಯಸೇ ಹೀಗೆ ...
ಕನಸುಗಳಲಿ ಹುಟ್ಟಿ ಕಲ್ಪನೆಗಳಲಿ ಸಾಯುವ
ಈ ವಯಸೇ ಹೀಗೆ ...
ಹುಚ್ಚು ವಯಸು ...... 









6 comments:

  1. ಒಳ್ಳೆಯ ಕವಿತೆ.ಇಷ್ಟವಾಯಿತು.

    ReplyDelete
  2. ಹುಚ್ಚು ಖೋಡಿ ಮನಸು............ ಕವನ ಸರಳ, ಸುಂದರವಾಗಿದೆ.

    ReplyDelete
  3. nija nija ee vayase heege . . . ಬಿಸಿಲುಕುದುರೆಯನೆರುವ ee vayase heege

    ReplyDelete
  4. ವೆಂಕಟೇಶ್ ಸರ್,
    ಈ ವಯಸೇ ಹೀಗೆ,
    ಕಾಣದ್ದು ಕಂಡಂಗೆ,
    ನೋಡಿದ್ದು ಕರಗಿದಂಗೆ,
    ಕರಗಿದ್ದು ಕೈಗೆ ಸಿಕ್ಕಂಗೆ.....

    ತುಂಬಾ ಸೊಗಸಾಗಿದೆ ಕವನ.....ಹದಿ ಹರೆಯದ ತುಮುಲ ತುಂಬಿದೆ ಕವನ....

    ReplyDelete
  5. krishnamurti sir, NRK sir, dinakar sir, & prabhamani madam THANK YOU ALL

    ReplyDelete
  6. kavana tumba chennaagide Venkatesh ji.. !!

    ReplyDelete