Sunday, August 29, 2010

ಮುಸ್ಸಂಜೆ ಹೊತ್ತು




ಮುಸ್ಸಂಜೆಯ ಹೊತ್ತು ,
ನೆನಪುಗಳು ಕಾಡುವ ಹೊತ್ತು.
ಹೃದಯ ಬುಟ್ಟಿಯ ತುಂಬಾ ಮಾಗಿದ ಸಿಹಿ ನೆನಪುಗಳು
ಕಾಡುವ ಹೊತ್ತು ಮುಸ್ಸಂಜೆಯ ಹೊತ್ತು.
ಕಣ್ಣ ನೋಟ ತುಂಬ ಕಾಣುವ ಸಿಹಿ ಕನಸುಗಳು
ಮನಸ ಮೂಲೆಯ ಬದಿ ನೋವಿನ ನನಸು ,ಕಾಡುವ ಹೊತ್ತು
ಮುಸ್ಸಂಜೆಯ ಹೊತ್ತು .
ಸಿಹಿ ಕನಸುಗಳ ಜೊತೆಗೆ ಬಾವಗಳ ತುಳುಕಾಟ
ಕಹಿ ನನಸುಗಳ ಪಾಲಿಗೆ ದುಃಖಗಳ ಮುಲುಗಾಟ,
ಕಾಡುವ ಹೊತ್ತು ಮುಸ್ಸಂಜೆ ಹೊತ್ತು .
ಹೊತ್ತು ಕಳೆದಂತೆ ಮುಗಿಯುವ ಮಾಗಿದ ಸಿಹಿ ನೆನಪುಗಳು
ಯಾರಿಗೂ ಬೇಡದೆ ಉಳಿಯುವ ಕಹಿನೆನಪುಗಳು
ಮತ್ತೆ ಮತ್ತೆ ಕಾಡುವವು ಮುಸ್ಸಂಜೆ ಹೊತ್ತು

4 comments:

  1. ಬಾಳಿನ ಮುಸ್ಸಂಜೆ ಹೊತ್ತು!ಸಿಹಿನೆನಪುಗಳ ಜೊತೆ ಜೊತೆಗೆ ಕಹಿ ನೆನಪುಗಳ ಹೊತ್ತು ತರುವ ಹೊತ್ತು!ಒಳ್ಳೆಯ ಕವನ!

    ReplyDelete
  2. Nice ! ಹೃದಯ ಬುಟ್ಟಿಯ ತುಂಬಾ ಮಾಗಿದ ಸಿಹಿ ನೆನಪುಗಳು
    ಕಾಡುವ ಹೊತ್ತು ಈ ಮುಸ್ಸಂಜೆಯ ಹೊತ್ತು !!

    ReplyDelete
  3. ನೆನಪುಗಳಿಗೆ ಒತ್ತು ಕೊಡುವ ಸಂಜೆಯ ಹೊತ್ತಿನ ವಿವರ ಸೊಗಸಾಗಿದೆ.

    ReplyDelete