Sunday, August 15, 2010

ಅವಳೊಂದು ತಬ್ಬಲಿ ಹುಡುಗಿ

                                                                               


ಏಕೋ ಏನೋ ಅವಳ ಕಣ್ಣುಗಳು
ತನ್ನ ಹೊಳಪನ್ನು ಕಳೆದುಕೊಂಡಿವೆ
ಬಾಡಿದ ಮುಖ ,ಕಣ್ಣಂಚಿನ ನೀರು ..
ಅವಳ ಅವ್ಯಕ್ತ ನೋವಿನ ಸೆಲೆಯಂತಿದೆ.
ತುತ್ತು ಕೂಳಿಗೂ ,ಹಸಿದ ಕಣ್ಣುಗಳ ಕಾಟ,
ಆದರೂ ಬದುಕಬೇಕಲ್ಲ ,ಎಲ್ಲ ವೇದನೆಗಳ ಮುಚ್ಚಿಟ್ಟು..
ಕನಸಿಗಂತೂ ಬರವಿಲ್ಲ ,ಆದರೇಕೋ ,ಏನೋ ಒಳಗೊಂದು
ಅವ್ಯಕ್ತ ಭೀತಿ ..
ಕನಸ ನನಸಾಗಿಸಲು ಮಾಡುವುದೇನು ಬಂತು?
ಎಲ್ಲ ಬಿಡುವುದು ಮಾತ್ರ ...
ತುತ್ತು ಕೂಳ ತುಂಬಿಸಲು ..
ಬದುಕಬೇಕಲ್ಲ ...ಹಸಿದ ಕಣ್ಣುಗಳ ತಣಿಸಿ .
ಎಲ್ಲ ವೇದನೆಗಳ ಮುಚ್ಚಿಟ್ಟು ....

2 comments:

  1. ತಯಾರಾಗಿಬಿಟ್ಟಿರಿ ವಕೀಲರೇ. ಅನಾಥ ಹುಡುಗಿ ಹಲವು ಪಡ್ಡೆಗಳ ಕಣ್ಣು ತಣಿಸಿ ಅದರಿಂದ ಕಾಸು ಪಡೆದು ಬದುಕು ನಿಭಾಯಿಸುವ ವಸ್ತುವಿಟ್ಟು ಬರೆದಿರಿ, ಚೆನ್ನಾಗಿದೆ, ಸದ್ಯಕ್ಕೆ ಕಲ್ಯಾಣ್ ಆಗದಿದ್ದರೂ ಆಮೇಲೆ ಕುವೆಂಪುವೇ ಆಗುತ್ತೀರೆನೋ { ಬೇಸರಿಸಬೇಡಿ, just kidding], thanks

    ReplyDelete
  2. Thanks V.R.bhatre.but its real facts that these are all the things daily happens in our social life. I feel very sympathy about that teenage girls who begging in the streets. In my view they are mostly harassed by people..

    ReplyDelete