ಇತ್ತಿತ್ತಲಾಗಿ ನನಗೂ ಚಿಕ್ಕದಾಗಿ ಹೊಟ್ಟೆ ಬರುತ್ತಿದೆ ಸುಖಾ ಸುಮ್ಮನೆ ಸ್ಲಿಮ್ ಆಗಿ ಇದ್ದ ನಾನು ಸ್ವಲ್ಪ ದಪ್ಪನಾಗುತ್ತಿದ್ದೇನೆ ... ಎಲ್ಲ ಕಡೆಯೂ ಅಲ್ಲ ಹೊಟ್ಟೆ ಮಾತ್ರ ... ಓಡಾಟವಿಲ್ಲ , ಬಸ್ ಹಿಡಿದು ಒಡಬೇಕಾಗಿಲ್ಲ.. ಸುಮ್ಮನೆ ಕುಳಿತಲ್ಲಿಯೇ ಕೆಲಸ .. ಹೊಟ್ಟೆ ಮಾತ್ರ ತನ್ನ ಇರುವನ್ನ ತೋರಿಸುತ್ತಿದೆ .. ಅದೊಂದು ಕಾಲವಿತ್ತು ಎಲ್ಲ ಗಾಳಿಯನ್ನೂ ಹೊಟ್ಟೆಯೊಳಗೆ ತುಂಬಿ ನನಗೂ ಹೊಟ್ಟೆ ಇದೆ ಎಂದು ತೋರಿಸಬೇಕಾಗಿತ್ತು ಈಗ ಉಸಿರ ಒಳಗೆ ಎಳೆದು ಕೊಂಡರೂ ಹೊಟ್ಟೆ ಮಾತ್ರ ಹೊರಗೆ ಇಣುಕುತ್ತದೆ ಪಾಪದ ಪ್ಯಾಂಟು ಗಳೋ ಹೊಟ್ಟೆಯ ಮುಚ್ಚಿಡಲು ಹರಸಾಹಸ ಮಾಡುತ್ತವೆ ಮೊದಮೊದಲು ಹೊಟ್ಟೆ ಇರುವವರನ್ನು ಕಂಡರೆ ಒಂಥರ ...ಥೋ ಹೇಗಪ್ಪ ಇವರ ಹೊಟ್ಟೆಗೆ ಜಾಗ ಬಿಡುವುದು ?? ಅವರೋ ತಮ್ಮ ಹೊಟ್ಟೆಯ ಜೊತೆ ನನ್ನನ್ನೂ ತಳ್ಳಿಕೊಂಡು ಹೋಗುತ್ತಿದ್ದರು ಈಗ ಚಿಂತೆ ಶುರುವಾಗಿದೆ ನನ್ನ ಹೊಟ್ಟೆಯೂ ಇವರ ಸಾಲಿಗೆ ಸೇರುವದ ?? ಬೆಳಗ್ಗೆದ್ದು ಓಡಲು ಹೊಟ್ಟೆಗೂ ಬೇಸರ ...ಚಳಿಗೆ ಸುಮ್ಮನೆ ಮಗ್ಗಲ ಬದಲಿಸುತ್ತದೆ ... ಜಿಮ್ಮು ಸ್ವಿಮ್ಮು ಅಂತ ಹೋದರೆ ಹೊಟ್ಟೆಯ ಜೊತೆ ಉಳಿದವಕ್ಕೆಲ್ಲ ಉಪವಾಸ ... ಹೊಟ್ಟೆಗೂ ನಾಲಿಗೆಗೂ ಅದಾವ ಜನುಮದ ದ್ವೇಷವೋ .. ಮನಸ್ಸು ಯಾವಾಗಲು ನಾಲಿಗೆಯ ಪರ .. ಆಗಾಗ ಕೇಳುತ್ತಿರುತ್ತದೆ ಏನು ನಿನಗೊಬ್ಬನಿಗಾ ಹೊಟ್ಟೆ ಇರುವುದು ? ಏನೋ ಇನ್ನು ಚಿಕ್ಕದು .ಸ್ವಲ್ಪ ಓಡಾಡಿದರೆ .ಕಡಿಮೆಯಾಗುತ್ತದೆ ಬಿಡು ಅನ್ನುತ್ತದೆ.. ಆದರೂ ಉಳಿದ ಹೊಟ್ಟೆಗಳು ಕೆಂಗಣ್ಣು ಬೀರುತ್ತಿವೆ .. ನಮಗೆ ಜಾಗವಿಲ್ಲ ನೀ ಮತ್ತೆ ಬರಬೇಡ ಎಂದು ...
Thursday, February 23, 2012
ಅದಾವ ಆಕರ್ಷಣೆಯೋ ನಾ ಕಾಣೆ .. ನೀ ಮಾತನಾಡುವಾಗ ನಿನ್ನ ಕಣ್ಣನ್ನೇ ನೋಡುತ್ತಾ ಕುಳಿತಿರುವ ಮೌನಿ ನಾನು .. ಯಾವ ಬಂಧವೋ ನಿನ್ನಲ್ಲಿ , ನೋಡುತ್ತಲೇ ಕನಸುಗಳೆಲ್ಲ ಬಿಕರಿಯಾಗಿವೆ ...
ನೂರು ಸಾರಿ ನಿನ್ನ ನೋಡಿ , ತಿರು ತಿರುಗಿ ನೋಡುವಾಸೆ ಮತ್ತೆ ಕಾಡಿದೆ ... ಪ್ರೀತಿ ಹೃದಯದೊಳಗೆ ಬಚ್ಚಿಟ್ಟ ನಿಧಿ .. ಒಮ್ಮೆ ನನ್ನ ಹೃದಯದ ಬಾಗಿಲ ಕಡೆ ಇಣುಕಿ ನೋಡು ನಿನಗಷ್ಟೆ ಇರುವ ಪ್ರೀತಿ .. ನನಗಲ್ಲಿ ಖಾಸಗಿ ಸಂಬ್ರಮ ..
ಸುಮ್ಮನೆ ಕೈ ಹಿಡಿದು ಬಿಡು ....ನಾವಲ್ಲಿ ನಡೆವ ಹಾದಿ ಎಂದೂ ಕೊನೆಯಾಗದು .. ಕಣ್ಣನು ಮುಚ್ಚಿ ನೋಡಿದರೂ ಅಲ್ಲಿ ಕಾಣುವ ಲೋಕ ಉನ್ಮಾದಕ
ನನ್ನ ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೆ ಸೆಳೆದುಬಿಡು ನಿನ್ನ ಒಲುಮೆಯೂರಿಗೆ .... ಅಲ್ಲಿ ನನ್ನ ನಾನು ಮರೆವಂತೆ ಮಾಡು..
Thursday, February 9, 2012
ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , ನಿನ್ನೊಲವಿನ ಬಿಸಿ ತಟ್ಟಿದ್ದರೂ,ನಾ ಮಾತ್ರ ಹೀಗೇ, ಏನೂ ಗೊತ್ತಿಲ್ಲದ ಹಾಗೆ ಒಳಗೊಳಗೇ ಮನಸಿನಂಗಳದಲ್ಲಿ, ಎದೆಬಿಚ್ಚಿ ಮಾತನಾಡುತ್ತಿರುತ್ತೇನೆ, ಹೇಳಲೋ ಬೇಡವೋ ಎಂಬ ವಕಾಲತ್ತುಗಳ, ನಡುವೆ ಕಾದಾಡುತ್ತಿರುತ್ತೇನೆ., ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , ಅದೆಸ್ಟು ಆಮಿಷಗಳ ಮೆಟ್ಟಿ ನನ್ನೊಟ್ಟಿಗಿರುತ್ತದೋ, ನಿನ್ನ ಮನ ? ಕಾದು ನೋಡುತ್ತೇನೆ , ಕಾಯಬೇಕು ಹುಡುಗೀ ,, ಕಾದಷ್ಟೂ ನಮ್ಮೊಳಗಿನ ಹುಸಿ ಬಯಲಾಗಬೇಕು , ಭ್ರಮೆ ಬೆತ್ತಲಾಗಬೇಕು ,ಪೊರೆ ಹರಿಯಬೇಕು ..., ಇಲ್ಲ ಹುಡುಗೀ ,,,ಇನ್ನಷ್ಟು ದಿನ ಹೇಳುವುದಿಲ್ಲ, ನಾ ನಿನ್ನ ಪ್ರೀತಿಸುವುದ, ನಿನ್ನೊಲವಿನ ಬಳ್ಳಿ ಚಿಗುರಲಿ ನನ್ನೊಳಗೂ ಟಿಸಿಲೋಡೆಯುತ್ತದೆ, ಹಾದಿಗುಂಟ ಮುಳ್ಳು ಕಂಟಿಗಳ ದಾಟಿ , ಮುಂದೊಂದು ದಿನ ನನ್ನ ಬೆಸೆಯುತ್ತದೆ ., ಅಲ್ಲಿಯವರಗೂ ನಾ ಮಾತ್ರ ಹೀಗೇ, ಏನೂ ಗೊತ್ತಿಲ್ಲದ ಹಾಗೆ ..., ನಿನ್ನ ಮನಸಿನಂಗಳದಲ್ಲಿ ಎದೆ ಬಿಚ್ಚಿ, ಮಾತನಾಡುತ್ತಿರುತ್ತೇನೆ