ಒಮ್ಮೆ ಇಣುಕಿ ನೋಡು ನನ್ನೊಳಗಿನ ಕನಸಿಗೆ ..
ಸುಮ್ಮಗೆ ಬಲಗಾಲಿಟ್ಟು ಒಳಗೆ ಬಂದು
ಒಂದಷ್ಟು ದಿನ ಹಾಗೆ ಸುಮ್ಮನೆ ಅತಿಥಿಯಾಗಿದ್ದುಬಿಡು ,
ನಿನಗಾಗಿಯೇ ತೂಗುತ್ತಿದೆ ಕನಸಿನ ಪಲ್ಲಂಗ ..
ಸುಮ್ಮನೆ ಹೆಗಲಿಗೆ ತಲೆ ಇಟ್ಟು ಕೈಯ ಬಳಸಿಬಿಡು ...
ನಮಗಾಗಿಯೇ ಮಿನುಗುತ್ತಿವೆ ಸಾವಿರ ನಕ್ಷತ್ರಗಳು ..
ಸುಮ್ಮನೆ ಬರೆದು ಬಿಡು ನನ್ನ ನಿನ್ನಯ ಹೆಸರ ..
ಶಾಶ್ವತ ವಾಗಿ ಮಿನುಗುತ್ತಿರಲಿ ಆ ಚಂದ್ರನ ಜೊತೆ .
ಸುಮ್ಮಗೆ ಕಾಪಿಟ್ಟುಕೋ...ಒಂದಷ್ಟು ಹಾಗೆ
ಬೇಕಾಗಬಹುದು ಮುಂದೊಂದು ದಿನ,
ನಮ್ಮ ಕನಸಿನ ದಿಬ್ಬಣವ ಅಲಂಕರಿಸಲು ..
ನಮ್ಮಿಬ್ಬರ ಕನಸಿಗೆ ಸಿದ್ದವಾಗಿಯೇ ಇದೆ
ಒಡ್ಡೋಲಗ ,,,ಹಾಗೆ ಸಾಗಿಬಿಡಲಿ ಒಂದು ಸುಮುಹೂರ್ತ
ಸಮಯದಲಿ ..ಕನಸಿನೂರಿನ ಕಡೆಗೆ ..





