ಒಮ್ಮೆ ನಿನ್ನೆರಡೂ ಕೈಗಳ ನೀಡು ...
ಹಾಗೆ ನವಿರಾಗಿ ಮದರಂಗಿಯ ಬಿಡಿಸಿಬಿಡುತ್ತೇನೆ
ಚಿತ್ತಾರವಾಗಿಬಿಡಲಿ ಕೈಗಳರಡೂ ...
ಮೆಲ್ಲಗೆ ಕಾಡಿಗೆಯನ್ನೂ ಬಳಿದು ಬಿಡುತ್ತೇನೆ ಆ ಕಣ್ಣ ರೆಪ್ಪೆಗಳಿಗೆ ..
ಅಲಂಕಾರವಾಗಿಬಿಡಲಿ ....ನಿನಗೆ
ನನ್ನ ಕನಸಿನೂರಿಗೆ ಕರೆದೊಯ್ಯುವ ಮೊದಲು ..
ಸಿಂಗರಿಸಿ ನಿಂತಿದೆ ಪ್ರಕೃತಿ ..
ನೀ ಬರುವ ಸುದ್ದಿ ಕೇಳಿ ...ತನ್ನೆಲ್ಲ ಚೆಲುವ ಹರಡಿ ..
ನಿನಗೇ ಸಾಟಿಯಾಗಲು ...
ಒಮ್ಮೆ ನಕ್ಕಿಬಿಡು ಸಾಕು ಪ್ರಕೃತಿಯ ಪೆದ್ದತನಕ್ಕೆ ...
ಕಾಲಿಟ್ಟ ಕ್ಷಣವೇ ಸಾಕು ..ಭುವಿ ಬಿಸಿಯಾಗಿ ..ಆವಿಯಾಗಿ
ಮೋಡ ಕಟ್ಟಿ ಹನಿಯೊಡೆದು ಪ್ರಕೃತಿ ಒದ್ದೆಯಾಗಲು...
ಅಲ್ಲಾಗಲೇ ಮಾವಿನ ತಳಿರ ತೋರಣಗಳು ಸಿಂಗರಿಸಿವೆ..
ನಿನ್ನ ಕಾಯುತ್ತ ... ಮನೆಯೆಲ್ಲ ರಂಗೊಲಿಯಾಗಿವೆ ..
ನಿನ್ನ ಪಾದ ಸೋಕಲು ...
ಮನೆಯವರೆಲ್ಲ ಸಿಂಗರಿಸಿ ನಿಂತಿದ್ದಾರೆ ವಾದ್ಯ ಮೇಳಗಳೊಡನೆ ..
ನಿನ್ನ ಎದುರುಗೊಳ್ಳಲು ..
ನಾಚಬೇಡ ... ನೋವಾಗಲೂಬಹುದು ನನಗೆ ನೀ ನನ್ನ ಕೈ ಹಿಸುಕಿದ ರೀತಿಗೆ ..
ಎಲ್ಲ ನಿನ್ನವರೇ ...
ಈಗಷ್ಟೇ ಗೋಡೆಯ ಸಿಂಗರಿಸಿದ್ದಾರೆ ...ನಿನ್ನ ಹಸ್ತಾಕ್ಷರ ಮೂಡಿಸಲು ..
ಹಾಗೆ ಬಳಿದುಬಿಡು ಗೋಡೆಯ ತುಂಬೆಲ್ಲ ...ಏಳೂ ಬಣ್ಣಗಳ ..
ನಮ್ಮಿಬ್ಬರ ಜೀವನದ ತುಂಬೆಲ್ಲ ...
ಪ್ರವೇಶ ವಾಗಿಬಿಡಲಿ ನನ್ನ ಕನಸಿನ ಲೋಕಕ್ಕೆ ...
ನೀ ಕಾಲಿಟ್ಟ ಗಳಿಗೆಯಿಂದ ...
ಸಿಂಗಾರಗೊಳ್ಳಲಿ ಅದೂ ಕೊಂಚ ...
ಚೆನ್ನಾಗಿದೆ..:)))))
ReplyDeleteChennagide chennagide :)
ReplyDeleteವೆಂಕಟು...ಸಖತ್ತು ರೊಮ್ಯಾಂಟಿಕ್ ಕವನ ಬರೆಯಲು ಸ್ಪೂರ್ತಿ ಯಾರು ಅಂತ ಹೇಳದಿಲ್ಯನಾ..? ಮಸ್ತ್ ಇದ್ದು..
ReplyDeleteಥ್ಯಾಂಕ್ಸ್ ಟು ಆಲ್ ... ಅನ್ಸತ್ತೆ ನಿಂಗೆ ಅದನ್ನ ಹೇಳವನೆ ???
ReplyDeleteಮದುವೆ ದಿಬ್ಬಣದ ಮೆರವಣಿಗೆಯ ಪರಿಯ ನಿಮ್ಮ ನಲ್ಲೆ ಮದುವಣಗಿತ್ತಿಯಾಗಿ ಮನೆತುಂಬುವ ಸಂಭ್ರಮವನ್ನು ಚೆಂದವಾಗಿ ವರ್ಣಿಸಿದ್ದೀರಿ ವೆಂಕಟೇಶ್ ಹೆಗ್ಡೆ ಯವರೆ.. ಕಾಮನಬಿಲ್ಲಿನ ಚಿತ್ತಾರವೆಲ್ಲ ನಿಮ್ಮ ಬಾಳ ತುಂಬಿ ನಿಮ್ಮ ಮನದನ್ನೆಯನ್ನು ಸ್ವಾಗಿತಿಸುವುದೆಂಬ ಕಲ್ಪನೆಗಳು ಚೆಂದವಾಗಿ ಚಿತ್ತಾರವಾಡಿವೆ ನಿಮ್ಮ ಕವಿತೆಯಲ್ಲಿ.. ಶುಭಗಳಿಗೆಗೊಂದು ಕವಿತೆ, ಚೆಂದವಾಗಿ ಮೂಡಿಬಂದಿದೆ..:))) ಹಿಡಿಸಿತು..
ReplyDeleteಕನಸುಗಳ ಕನವರಿಕೆಗಳೆಲ್ಲ, ಕವನಕ್ಕಿಳಿದಿವೆ, ಚೆನ್ನಾಗಿದೆ ಬರಹ.....
ReplyDeleteNice one...chennagide:)
ReplyDeleteತುಂಬಾ ಚೆನ್ನಾಗಿದೆ... ಒಂದು ಸುಂದರ ನವೋದಯ ಭಾವವನ್ನು ಸಾಮ್ಯತೆ ಮತ್ತು ಅನುರಾಗಪೂರ್ಣ ಪದಗಳಲ್ಲಿ ನೋಡಿ ಆನಂದಪಟ್ಟೆ. ಕಷ್ಟ ಕಾರ್ಪಣ್ಯ, ಜಾತಿ ಧರ್ಮಗಳಿಲ್ಲದ ಯಾವುದೋ ಲೋಕದಲ್ಲಿ ಕುಳಿತು ಕವಿತೆ ಓದಿದಂತಾಯಿತು... ವಂದನೆಗಳು....
ReplyDeleteಧನ್ಯವಾದಗಳು..
ReplyDeletewow! nice one Venkatesh.. Situational song for u I guess!
ReplyDeleteಹಾಯ್ ವೆಂಕಿ.....
ReplyDeleteಚೆನ್ನಾಗಿದೆ ನಿಮ್ಮ ಕವನ...ಆದರೆ ಅದು ಯಾರು ಅಂತ ಗೊತ್ತಾಗಿಲ್ಲ....? ಸದ್ಯದಲ್ಲೇ ಸಿಹಿ ತಿನ್ನಿಸ್ತೀರ ಅಂತ ಆಯಿತು.....
ಚೊಲೋ ಇದ್ದು ವೆ೦ಕಟೇಶಅಣ್ಣ ಆದ್ರೇ ಯಾರು ಅದು ಅತ್ಗೇ ಆಗದು ನ೦ಗೆ?...
ReplyDeleteThank you all
ReplyDeletechenda barityalo! keep it up!
ReplyDelete