Monday, January 16, 2012


 ಒಮ್ಮೆ ಇಣುಕಿ ನೋಡು ನನ್ನೊಳಗಿನ ಕನಸಿಗೆ ..
 ಸುಮ್ಮಗೆ ಬಲಗಾಲಿಟ್ಟು ಒಳಗೆ ಬಂದು
ಒಂದಷ್ಟು  ದಿನ ಹಾಗೆ ಸುಮ್ಮನೆ ಅತಿಥಿಯಾಗಿದ್ದುಬಿಡು ,
ನಿನಗಾಗಿಯೇ ತೂಗುತ್ತಿದೆ ಕನಸಿನ ಪಲ್ಲಂಗ ..
ಸುಮ್ಮನೆ ಹೆಗಲಿಗೆ ತಲೆ ಇಟ್ಟು ಕೈಯ ಬಳಸಿಬಿಡು ...
ನಮಗಾಗಿಯೇ ಮಿನುಗುತ್ತಿವೆ ಸಾವಿರ ನಕ್ಷತ್ರಗಳು ..
ಸುಮ್ಮನೆ ಬರೆದು ಬಿಡು ನನ್ನ ನಿನ್ನಯ ಹೆಸರ ..
ಶಾಶ್ವತ ವಾಗಿ ಮಿನುಗುತ್ತಿರಲಿ ಆ ಚಂದ್ರನ ಜೊತೆ .
ಸುಮ್ಮಗೆ ಕಾಪಿಟ್ಟುಕೋ...ಒಂದಷ್ಟು ಹಾಗೆ 
ಬೇಕಾಗಬಹುದು  ಮುಂದೊಂದು ದಿನ,
ನಮ್ಮ ಕನಸಿನ ದಿಬ್ಬಣವ ಅಲಂಕರಿಸಲು ..
ನಮ್ಮಿಬ್ಬರ ಕನಸಿಗೆ ಸಿದ್ದವಾಗಿಯೇ ಇದೆ 
ಒಡ್ಡೋಲಗ ,,,ಹಾಗೆ ಸಾಗಿಬಿಡಲಿ ಒಂದು ಸುಮುಹೂರ್ತ 
ಸಮಯದಲಿ ..ಕನಸಿನೂರಿನ ಕಡೆಗೆ ..








14 comments:

  1. ಅತ್ಯುತ್ತಮ ಚಿತ್ರ ಕವನ...

    ಪದ ಲಾಲಿತ್ಯದಲ್ಲೂ, ಭಾವ ಸರಸದಲ್ಲೂ ಇಲ್ಲಿನ ಸಾಲುಗಳು ಅಮೋಘ...

    ಆಕೆ ಇಂತಹ ಕವನ ಪಠಣದಿಂದ ಮನ ಸೋಲದಿರುವಳೇ ಹೇಳಿ?

    ನನ್ನ ಬ್ಲಾಗಿಗೂ ಸ್ವಾಗತ...

    ReplyDelete
    Replies
    1. ದನ್ಯವಾದಗಳು .. ಬದರಿನಾಥ್ ಸರ್ ,ನಿಮ್ಮ ಬ್ಲಾಗನ್ನು ನೊಡುತ್ತ ಇರುತ್ತೇನೆ ... ಸರ್

      Delete
  2. ಅದ್ಭುತವಾದ ಕವನಗಳು ಮನಸ್ಸಿನ ಆಳದಿಂದ ಹೊರಬಂದಿದ್ದು ಖುಷಿ
    ಅನಿಸಿದರೂ ನಿನ್ನ ಕನಸಿನ ಕನ್ಯೆಗೆ ಇದೆಲ್ಲಾ ಅರ್ಥವಾದೀತೇ ಅನ್ನೋ
    ಅನುಮಾನ ಕಾಡದಿರದು...! ಹೀಗೇ ಮುಂದುವರಿಯಲಿ ನಿನ್ನ ಕವನಗಳು..

    ReplyDelete
    Replies
    1. ಅನ್ಸತ್ತೆ ಅರ್ಥವಾಗುತ್ತದೋ ಇಲ್ಲವೋ ಗೊತ್ತಿಲ್ಲೆ ಆದರೆ ಇಷ್ಟ ಅಂತೂ ಆಗ್ತಾ ಇದ್ದು

      Delete
  3. ಚೆನ್ನಾಗಿವೆ ಸಾಲುಗಳು..... ಒಂದೆರಡು ಸಾಲುಗಳು ಮಾತ್ರ ನಿರಾಸೆಗೊಳಿಸುತ್ತವೆ, ಉಳಿದಂತೆ ಸುಂದರ ಕವಿತೆ....

    ReplyDelete
    Replies
    1. ಧನ್ಯವಾದಗಳು ಪ್ರವರ ... ಆದರೆ ನಿರಾಸೆ ಯಾವುದು ಅಂತ ಗೊತ್ತಾಗಿಲ್ಲ ... ಬಹುಷ ಇದು ನನಸಾಗದೇ ಕನಸೇ ಆದರೆ ನಿರಾಸೆಯೇನೋ ?

      Delete
  4. ತುಂಬಾನೇ ಚೆನ್ನಾಗಿದೆ ......
    ಭಾವಗಳಲ್ಲಿ ಅಡ್ಡಿ ಬರೆದಂತ ಕವಿತೆ .....
    ಮದುವೆಯ ಕರೆಯೋಲೆ ಯಂತೆ ಬಲಸ ಬಹುದು ಅನ್ನಿಸಿತು .....
    :)

    ReplyDelete
  5. ಕವನ ಹಾಗೆ ಕನಸಿನ ಲೋಕದ ಚಿತ್ರಣವನ್ನು ನಮ್ಮ ಮುಂದೂ ನಿಲ್ಲಿಸಿಬಿಡುತ್ತದೆ...
    ಚೆನ್ನಾಗಿದೆ....

    ReplyDelete
  6. ತುಂಬಾ ಚೆನ್ನಾಗಿದೆ ವೆಂಕಣ್ಣ.. ನಿಮ್ಮ ಲೈನು ನೀವು ಬಿಟ್ಟು ಹೋಗಲ್ಲ ಬಿಡಿ :)

    ReplyDelete
  7. ಒಳ್ಳೆಯ ಭಾವ ಅಭಿವ್ಯಕ್ತಿ..ಏನಾಗಬಹುದು ಎನ್ನುವ ಪ್ರಿಯೆ ನಿಜಕ್ಕೂ ಮಿಂಚುತ್ತಾಳೆ ತನ್ನ ಪಾತ್ರದಲ್ಲಿ...ಅದನ್ನು ಪದಗಳ ಚೌಕಟ್ಟಿನಲ್ಲಿ ಬಂಧಿಸಿ ಇಲ್ಲಿಟ್ಟ ನಿಮಗೂ ಅಭಿನಂದನೆಗಳು...

    ReplyDelete