ಮನಸೇಕೆ ಹೀಗೆ .. ಬರೀ ಗೊಂದಲಗಳು
ಅರ್ಥವಿರುವ ಅರ್ಥವಿಲ್ಲದ ಗೊಂದಲಗಲೊಳಗೆ
ಹುದುಗಿಕೊಂಡಿರುವ ನೂರಾರು ಯೋಚನೆಗಳು ..
ಎಲ್ಲಿಂದಲೋ ಬಂದು ಎಲ್ಲಿಗೋ ಹಾರುವ ಹಕ್ಕಿಗಳ ಹಾಗೆ ..
ಸಾಗುತ್ತಲೇ ಇರುವ ಯೋಚನೆಗಳು ..
ಎಲ್ಲಿ ಹೋದರು ಬೆಂಬಿಡದ ನೆರಳಿನ ಹಾಗೆ ..
ಸದಾ ಹಿಂಬಾಲಿಸುವ ನೆನಪುಗಳು ...
ಆ ನೆನಪುಗಳಿಗೆ ಜೋತುಬೀಳುವ ಸಾವಿರ ಕನಸುಗಳು ...
ಮಾಡುವ ಹರಸಾಹಸಗಳು ...
ಪ್ರತಿ ಬಾರಿಯೂ ಸೋತಾಗ ಇರುವುದು
ಬರೀ ಗೊಂದಲಗಳು ...
ಗೊಂದಲಮಯ ಮನಸ್ಸು ತಿಳಿಗೊಳ್ಳ ಬೇಕೆಂದರೆ, ನಾವೇ ಸ್ವತಃ ಚಿಕಿತ್ಸಕ ಮನಸ್ಸಿನಿಂದ ಮನಸ್ಸನ್ನು ನಿಯಂತ್ರಿಸಬೇಕು.
ReplyDeleteಒಳ್ಳೆಯ ಬರಹ.
ನನ್ನ ಬ್ಲಾಗಿಗೂ ಸ್ವಾಗತ.
ಚಂದ ಇದ್ದು ವೆಂಕಟೇಶ್ ......
ReplyDelete"ಇರುವುದೇಲ್ಲವ ಬಿಟ್ಟು ಇರದುದರೆಡೆಗೆ .
ತುಡಿವುದೇ ಜೀವನ ....."
ಓ ಮನಸ್ಸೇ ರಿಲಾಕ್ಸ್ ಪ್ಲೀಸ್ !
ReplyDeleteಮನಸ್ಸೆಂಬುದು ಮರ್ಕಟ ...ಚೆನ್ನಾಗಿವೆ ನಿಮ್ಮ ಸಾಲುಗಳು....
ReplyDeleteನಾನು ಬ್ಲಾಗ್ ಆರಂಭಿಸಿದ ಮೊದಲಿಗೆ ಮನಸ್ಸಿನ ಬಗ್ಗೆ ಬರೆದಿದ್ದೆ...
ಅದೆಷ್ಟೋ ಭಾವನೆಗಳ ತುಂಬಿ ಕೊಂಡಿರುವ
ಹೊಸ ಹೊಸ ಕನಸುಗಳ ಕಟ್ಟಿ ಕೊಂಡಿರುವ
ಕನಸು ನನಸಾಗಿಸಲು ಪ್ರೇರೆಪಿಸುತಿರುವ
ನಗು ಬಾರದಿದ್ದರೂ ಮುಗುಳ್ನಗೆಯ ಬೀರುವ
ಅಳಲಾಗದಿದ್ದರು ಒಮ್ಮೊಮ್ಮೆ ಅಳುವ
ತಪ್ಪು ಸರಿಗಳನೆಲ್ಲ ಜೀರ್ಣಿಸಿ ಕೊಂಡಿರುವ
ಬದುಕಿನ ದಾರಿಯಲಿ ಮುಖವಾಡವ ಧರಿಸಿರುವ
ಓ ಮನಸ್ಸೇ ನೀನೆಷ್ಟು ಕಠಿಣ ..........
ಹೌದು,ಆದ್ರೂ ಗೊ೦ದಲಾ ಮನಸ್ಸಿಗ ನಮಗ ಹೇಳಿ ತಿಳಿತಿಲ್ಲೆ..
ReplyDeleteThank you aLL
ReplyDeletevenktesh.... nin kavana tereditta pustakada hage... ishta atu... :)..
ReplyDeleteThank You anupamakka
ReplyDelete