ಮಳೆಗೂ ಅವಳಿಗೂ ಅದೆಲ್ಲಿನ ಸಂಬಂಧವೋ ...
ಪ್ರತೀ ಸಲ ಮಳೆ ಬೀಳುವಾಗಲೂ ಅವಳು ನೆನಪಾಗುತ್ತಾಳೆ ..
ಬೀಳುವ ಪ್ರತಿ ಹನಿಯ ಜೊತೆ ಅವಳೂ ಮನಸ ತಂಪನೆರೆಯುತ್ತಾಳೆ...
ಇದೆ ಮಳೆಯೇ ತಾನೇ ನಮ್ಮಿಬ್ಬರ ಒಂದು ಮಾಡಿದ್ದು ...
ಪಕ್ಕದ ಮರದ ರೆಂಬೆ ಮುರಿದು ಬೀಳುವಾಗ ಚೀರಿ ತಬ್ಬಿ ಹಿಡಿದದ್ದು ...
ಒಂದೊಂದು ಹನಿಯೂ ಕೂಡ ಅವಳ ನೆನಪ ಕಾಡುತ್ತಿವೆ ..
ಅದೇ ಹನಿಗಳನಲ್ಲವೇ ಇಬ್ಬರೂ ನಾಲಿಗೆ ಚಾಚಿ ಹೀರಿದ್ದು ...
ಪ್ರತೀ ಸಲ ಸುರಿಯೋ ಮಳೆಗೆ ಅಂಗಾತ ಮೈಚಾಚಿ...
ಮಳೆಗೆ ಕಣ್ಣು ಕೊಟ್ಟು ನೋವಾದಾಗ ತಬ್ಬಿ ಮೆಲ್ಲಗೊಂದು
ಮುತ್ತನೀದಿದ್ದು ...
....................................................
ಇಂದೂ ಮಳೆ ಬೀಳುತ್ತಿದೆ ... ಅವಳ ನೆನಪೂ ಕೂಡ ...
ಆದರೆ ಆ ಮಳೆಯ ಜೊತೆ ಅವಳೂ ಭೂಮಿ ಸೇರಿದ್ದಾಳೆ ...
ನನ್ನ ಕಣ್ಣೀರೂ ಸಹ .....
.
ReplyDeleteinteresting....
male hani molake odevante mannolagina avalu yaavagaadru huvagi arala kaala barli...