Saturday, December 17, 2011




ಕನಸ ಕಾಣಲು ಬಿಡು  ಹಾಗೆ ನನ್ನ , ...
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಕೊನೆಯವರೆಗೂ ..
ಕಾಣುವುದಿದೆ ಎಷ್ಟೋ ಕನಸುಗಳ ...ನಿನ್ನ ಜೊತೆ ..
ನನಸಾಗುವುದೋ ....ಕನಸಾಗುವುದೋ ... 
ನನಸು ಹೃದಯದೊಳಗಿನ ಮರೀಚಿಕೆ ..
ನೋಡ ನೋಡುತ್ತಲೇ ಕನಸಾಗಿಬಿಡುವುದು..
ಸಾಕಿನ್ನು ಕಣ್ಣ ಅಂಚುಗಳ ಒಂಟಿತನ ..  
ಹಾಗೆ ಮುಚ್ಚಿಬಿಡು ಒಮ್ಮೆ ನನ್ನ ಕಣ್ಣುಗಳ ...
ನಿನ್ನ ಮುಖವೇ ಶಾಶ್ವತವಾಗಿ ಬಿಡಲಿ ಈ ಕಣ್ಣುಗಳಿಗೆ ..
ಈ ಜೀವ ಹೋಗುವ ಮುನ್ನ ...



7 comments:

  1. ಕನಸು ನನಸಾಗಲು ಪಕ್ವವಾಗಬೇಕು ಕಾಲ..
    ಹಾಗೇ ಕಣ್ಣು ರೆಪ್ಪೆಯೊಳಗೆ ತುಂಬಿಸಿಡು ಎಲ್ಲಾ..
    ಮನಸಿನ ಆಸೆಯ ರಂಗೋಲಿ ಮನದೊಳಗೆಲ್ಲಾ..
    ಅದರಲ್ಲಿ ದೊರೆವ ಆನಂದ ಬೇರೆಲ್ಲೂ ಸಿಗದಲ್ಲಾ..!

    ನಿನ್ನ ಮನದ ಆಸೆಗಳನ್ನೆಲ್ಲಾ ಚೆನ್ನಾಗಿ ಬರದ್ದೆ...ಒಳ್ಳೇ ಕವನ..

    ReplyDelete
  2. ಸುಂದರ ಸಾಲುಗಳು ವೆಂಕಟೇಶ್ ರವರೆ..:))) ಕವಿತೆಯಲ್ಲಿ ನೀವು ನಿಮ್ಮ ಪ್ರೀತಿಯನ್ನು ಶಾಶ್ವತವಾಗಿಸಿಕೊಳ್ಳುವ ಹಪಹಪಿಕೆ ಸುಂದರವಾಗಿ ಅಭಿವ್ಯಕ್ತಗೊಂಡಿದೆ.. ನಿಮ್ಮ ಪ್ರೀತಿಯ ಆಳವನ್ನು ಓದುಗರಿಗೆ ತೆರೆದಿಡುವ ಪ್ರಯತ್ನದಲ್ಲಿ ಸಂಪೂರ್ಣ ಯಶ ಕಂಡಿದ್ದೀರಿ..

    ReplyDelete
  3. ಚೆನ್ನಾಗಿದೆ ಕವನ :-)

    ReplyDelete
  4. kannige kanasina kaadige yannu chennagi hacchidheera...

    ReplyDelete