ಅದೇ ಆಫೀಸ್ಗಳು, ಅದೇ ಕೇಸುಗಳು , ದ್ರಾಫ್ಟಿ0ಗುಗಳು,
ಪರ ಪರನೇ ತೆಲೆಕೆರೆದು ಮಾಡುವ ಕೇಸ್ ಸರ್ಚುಗಳು ,
ತಲೆ ಒಡೆದು ಕೈ ಹಾಕಿ ತೂರಿಸಿದರೂ
ಅರ್ಥವಾಗದ ಇನಕಮ್ಮು ಟಾಕ್ಸುಗಳು,
ಹಿಯರಿಂಗು ಗಳು ಎಡ್ ಜರ್ನುಗಳು ,
ಎಲ್ಲಾ ನೋಡಿ ಬೇಸರವಾದರೂ ಶೇಂಗಾ ತಿನ್ನಲು ಬಿಡದ ಜಡ್ಜುಗಳು ...
ಎಲ್ಲಿ ನೋಡಿದರೂ ಕರಿ ಕೋಟುಗಳು ಮೇಲೆ ಒಂದು ಗೌನುಗಳು ,,.
.ಯುವರ್ ಹಾನರಗಳು, ಮೈ ಲಾರ್ಡ್ ಗಳು ,
ಮೈ ಲಾರ್ಡ್ ಶಿಪ್ ಗಳು , ಆರ್ಗ್ಯೂಮೆಂಟ್ ಗಳು , ಆರ್ಡರ್ ಸುಗಳು ,
ಎಂದೆಲ್ಲ ಪೂಸಿ ಹೊಡೆಯುವ ಸಿನಿಯರ್ರುಗಳು ...!
ಮೆಮೋಗಳು , ಡಾಕ್ಯು ಮೆಂಟುಗಳು, ದಪ್ಪ ದಪ್ಪ ಫಯಿಲುಗಳು ,
ತುಂಬಲೆಂದೇ ಇರುವ ದೊಡ್ಡ ಬ್ಯಾಗುಗಳು ,
ಪಾಪ ಏದುಸಿರು ಬಿಟ್ಟು ತಡವರಿಸಿ ಹೊತ್ತುಕೊಂಡು ಬರುವ ಜುನಿಯರ್ರುಗಳು ಮತ್ತು ಕ್ಲರ್ಕುಗಳು
,,,,,ಇದೆ ಕೋರ್ಟಿನ ರಿಪೋರ್ಟುಗಳು...... !
ಗುರುಗಳೇ ಇವತ್ತಿಗಿಷ್ಟು ಸಾಕು ನಿದ್ದೆ ಮಾಡುವ ಹೊತ್ತಾಯಿತು.... !
No comments:
Post a Comment