ಏನಾದರೂ ಸರಿಯೇ
ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸೋದೆ ಹೆಗ್ಗುರಿ
ಎಂದೆಲ್ಲ ಬಡಬಡಿಸಿ,ಹುರುಪಿನಿಂದಲೇ ಎಲ್ಲಾ ಕಚೇರಿ ಗಳನು ತಿರುಗಿ,
ಕೇಳಿದವರಿಗಿಷ್ಟು, ಬೇಡಿದವರಿಗಿಷ್ಟು ,
ಎಂದೆಲ್ಲ ಹಣವ ಚೆಲ್ಲಿ ....
ಎಲ್ಲಾ ದಸ್ತಾವೇಜುಗಳ ಜಾಲಾಡಿ,
ಕೇಸು ಜಡಿದವರೀಗ,
ಕೊನೆಗೆ, ಕಟ್ಟ ಕಡೆಗೆ ,ಚಟ್ಟವೇರಿ.....
ಅವರ ವಾರಸುದಾರರೆಲ್ಲ ಸುತ್ತುತ್ತಲೇ ಇದ್ದಾರೆ
ಚಾವಟಿಯಿಲ್ಲದ ಬುಗುರಿಯಂತೆ
ತುಂಬಾ ಪ್ರಸ್ತುತ ಚುಟುಕು. ತಮ್ಮ ಮಾತು ಅಕ್ಷರಶಃ ಸತ್ಯ. ನಮ್ಮ ಕೊರ್ಟ್-ಗಳಲ್ಲಿನ ಹೆಚ್ಚಿನ ಕೆಸಗಳು ಒಣ ಪ್ರತಿಷ್ಟೆಗೆ ಯಾರೋ ಮಾಡಿದ್ದು ಯಾರೋ ಅನುಭವಿಸುವ೦ತಿವೆ.
ReplyDeleteಚಟ್ಟವೇರುವ ಮುನ್ನ ಜೀವನದ ಅರಿವಾಗಿದ್ದರೆ..
ReplyDeleteಕೋರ್ಟ್,ಕಛೇರಿ ಎಂದು ಅಲೆಯದಿದ್ದರೆ...
ಚಾವಟಿಯಿಲ್ಲದ ಬುಗುರಿಯಂತೇ ನೀವಾಗಿರುತ್ತಿದ್ದಿರಿ..!!