ಮನದೊಳಗಿನ ನೂರು ಮಾತು ಕಣ್ಣಂಚಿನಲಿ
ಬರುವ ಸಮಯ ..
ಕಾಯುತ್ತಿತ್ತು ಈ ಮನಸು ನೂರಾರು ಕನಸುಗಳೊಟ್ಟಿಗೆ ..
ಬೆಚ್ಚಗೆ ಕುಳಿತು ಪಿಸುನುಡಿಯುವ ಕಾತರದ ಕ್ಷಣಗಳಿಗೆ ..
ಬರೀ ಮೌನಗಳೊಟ್ಟಿಗೆ ಸರಿಯುತ್ತಿದ್ದವು ..ಕಾತರದ
ಕ್ಷಣಗಳೆಲ್ಲ ... ಸಂಕೋಚದ ಪರದೆ ಹಾಕಿ ..
ಹೃದಯದಲಿ ಬಚ್ಚಿಟ್ಟು ಕೊಂಡಿರುವ ಬಾವನೆಗಳೆಲ್ಲ
ಕೆಣಕುತ್ತಿದ್ದವು...ಹುಚ್ಚಾ ಕಲಿಸಬಾರದೆ , ಮೌನಗಳಿಗೆಲ್ಲ ..ಮಾತನ್ನ ..??.
ಮಾತು ಕಲಿಸುವ ಪ್ರಯತ್ನದಲಿ ತೊದಲು ನುಡಿಯಲಾಗದೆ...
ಮತ್ತೆ ಮೌನಕ್ಕೆ ಶರಣಾಗಿದ್ದೆ ....
ಕಾಯುತ್ತಿದ್ದೇನೆ ಮಾತು ಕಲಿಯುವ ಕ್ಷಣಗಳಿಗಾಗಿ ..
ಕನಸು ಸಾಕಾರಗೊಳ್ಳಲು ಬೇಕಿನ್ನೂ ಸಮಯ....
ಅಲ್ಲಿಯವರೆಗೆ ಕಾಯಬೇಕು ಹೀಗೆ .. ಮೌನಿಯಾಗಿ ...
ಮೌನಿಯಾದರೆ ಬರುವುದೇ ಹೃದಯದಾ ಮಾತು..
ReplyDeleteಒಳಗೆ ಕುಳಿತ ಪಿಸುನುಡಿಗಳಿಗೆ ಅರ್ಥವಾಗುವದೆಂತು..?
ಕನಸು ಸಾಕಾರಗೊಳ್ಳಲು ಕಾಯಬೇಕಾಗಿಲ್ಲ ಒಂದಿನಿತು..
ಸಂಕೋಚದ ಪರದೆ ಸಡಿಲಿಸಿ ಹರಿಯಬಿಡಲೆಂತು..??