ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಎಲ್ಲ ಸಾಲಾಗಿ ನಿಲ್ಲುವರು ಪರಮಾತ್ಮನೆಂದು
ಅದೆಂತ ಭಕ್ತಿಯೋ ನಾ ಕಾಣೆ
ಮೊದಮೊದಲು ಸ್ವಲ್ಪ ಒಗರಂತೆ ,
ಕೆಲವೊಂದು ಹುಳಿಯಂತೆ .ಕೆಲಕೆಲವು
ಕಹಿಯಂತೆ .... ಕುಡಿದಾದಮೇಲೊಂದು
ಗಾಳಿಯಲ್ಲೇ ತೇಲುವರಂತೆ...
ಅಕ್ಕ ಪಕ್ಕದಲ್ಲೊಂದು, ನೆಚ್ಚಿಕೊಳ್ಳಲೊಂದು
ಬೇಕಂತೆ ಉಪ್ಪು ಹುಳಿ ಕಾರ ....!
ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಬೇರೆ ಬೇರೆ ವೇರಯ್ಟಿ ಗಳಂತೆ
ಅದಕ್ಕೂ ಬೇರೆ ರೆಟಂತೆ
ಕುಡಿದರೆ ಸ್ವರ್ಗ ಸುಖ ಗ್ಯಾರಂಟಿ ಯಂತೆ
ಅಬ್ಬಬ್ಬಾ ಅದೆಂತ ರುಚಿನೋ ನಾ ಕಾಣೆ !?
ಈಗ ಎಲ್ಲ ಕಾಮನ್ ಅಂತೆ,
ಅದಕ್ಕಿಲ್ಲವಂತೆ ಭೇಧ ಭಾವ ,
ಪಾರ್ಟಿ ಎಂಬ ಪೂಜೆಯಲ್ಲಿ ಅದೇ
ಪವಿತ್ರ ತೀರ್ಥವಂತೆ ! .
ದಯವಿಟ್ಟು ಹಾಗೇ ಅನ್ಕೋಬೇಡಿ!
ReplyDeleteಚೆನ್ನಾಗಿದೆ ವರಸೆ
ಅಂತೆ ಕಂತೆಗಳ ಸಂತೆ ಚೆನ್ನಾಗಿದೆ... ಇಂತವುಗಳಿಂದ ಮಕ್ಕಳನ್ನಾದ್ರೂ ದೂರವಿರಿಸುವುದು ಅತಿ ಅವಶ್ಯಕ ಅಲ್ವೇ???
ReplyDeleteFantastic poem...
ReplyDeleteಚೆನ್ನಾಗಿದೆ ಸಾರ್..
ReplyDeleteವಕೀಲ್ರೆ, ದಯವಿಟ್ಟು ಸ್ವಲ್ಪ ಕಾಗುಣಿತದ ಬಗ್ಗೆ ಗಮನವಿರಲಿ, ಕವನದ ಭಾವಾರ್ಥ ಚೆನ್ನಾಗಿದೆ, ಆದರೆ ಅದು ಕಾಮನ್ ಎನ್ನುವುದನ್ನು ನಾವೂ ನೀವೂ ಒಪ್ಪಬೇಕೆ ಎನ್ನುವುದ ನಿಮ್ಮಲ್ಲಿ ನನ್ನ ಪ್ರಶ್ನೆ, ನಾನು ಹೀಗೆ ಬರೆದದ್ದಕ್ಕೆ ಬೇಸರಿಸಬೇಡಿ, ಧನ್ಯವಾದ
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು . ಹೊಸದಾಗಿ ಬಂದ ಸ್ನೇಹಿತ ಸುಬ್ರಮಣ್ಯ ಹೆಗಡೆಯವರಿಗೆ ಸುಸ್ವಾಗತ .
ReplyDelete