ಮಧ್ಯರಾತ್ರಿ ಚಂದ್ರ
ಮಧ್ಯರಾತ್ರಿ ಚಂದ್ರ ಛಳಿಯ ಹೊತ್ತು ತಂದ
ಬೀಸೋ ಗಾಳಿ ,ಮಂಜಿನ ಹನಿ ,
ಬೆರೆತ ಕ್ಷಣ ಈ ಧರೆಗೆ
ಮಧ್ಯರಾತ್ರಿ ಚಂದ್ರ ಛಳಿಯ ಹೊತ್ತು ತಂದ
ಹನಿ ಹನಿ ಮುತ್ತು ಎಲೆಯ ಮೇಲೆ
ಇಬ್ಬನಿ ಸಾಲು ಹಾದಿಗುಂಟ ..
ತೋರಿಸುತ್ತಿದ್ದ ಬೆಳ್ಳಂಬೆಳಕ
ಮಧ್ಯರಾತ್ರಿ ಚಂದ್ರ ಧರೆಗೆ
ಬೆಳ್ಳಿ ಬೆಳಕ ತಂದ
ಮಾಗಿದ ಚಳಿಯಲಿ ಹೊತ್ತು ಕಳೆದಂತೆ
ಮುತ್ತುಗಳು ಒಡೆದಂತೆ
ಸಾಲು ತಪ್ಪಿದ ಇಬ್ಬನಿಗಳ ನೊಡುತ್ತ
ನಿಂತ ಚಂದ್ರ,
ಪಡುವಣದ ಮೂಲೆಯಲಿ !
wondereful, keep going
ReplyDeleteವೆಂಕಟೇಶ್ ಸರ್,
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಕವನ .....ತುಂಟ ಕವಿಯ ವಿವರಣೆ.....
nice one,
ReplyDelete