ಈ ವಯಸೇ ಹೀಗೆ,
ಕನಸುಗಳ ಬೆನ್ನು ಹತ್ತಿ ವಾಸ್ತವಗಳ ಕಣ್ಣು ಕಟ್ಟಿ ,
ಕಲ್ಪನೆಗಳ ಬಿಸಿಲುಕುದುರೆಯನೆರುವ
ಈ ವಯಸೇ ಹೀಗೆ ...
ಪ್ರೀತಿಯೆಂಬ ಮೋಡಿಯಲಿ ಸಿಲುಕಿ ,
ಬಾವನೆಗಳ ಅಡಿಯಲಿ ನಲುಗಿ ,
ನೋವಿನಲೂ ನಲಿವನ್ನು ಕಾಣುವ
ಈ ವಯಸೇ ಹೀಗೆ ...
ಬಯಸುವುದು ಕಣ್ಣಿಗೆ ಕಾಣಿಸುವುದ ,
ಅರಸುವುದು ಮನಸಿಗೆ ಅನಿಸುವುದ ..
ಕೈಗೆ ಸಿಗದಾಗ ಮುಮ್ಮಲ ಮರುಗುವ ,
ಈ ವಯಸೇ ಹೀಗೆ ...
ಕನಸುಗಳಲಿ ಹುಟ್ಟಿ ಕಲ್ಪನೆಗಳಲಿ ಸಾಯುವ
ಈ ವಯಸೇ ಹೀಗೆ ...
ಹುಚ್ಚು ವಯಸು ......
ಒಳ್ಳೆಯ ಕವಿತೆ.ಇಷ್ಟವಾಯಿತು.
ReplyDeleteಹುಚ್ಚು ಖೋಡಿ ಮನಸು............ ಕವನ ಸರಳ, ಸುಂದರವಾಗಿದೆ.
ReplyDeletenija nija ee vayase heege . . . ಬಿಸಿಲುಕುದುರೆಯನೆರುವ ee vayase heege
ReplyDeleteವೆಂಕಟೇಶ್ ಸರ್,
ReplyDeleteಈ ವಯಸೇ ಹೀಗೆ,
ಕಾಣದ್ದು ಕಂಡಂಗೆ,
ನೋಡಿದ್ದು ಕರಗಿದಂಗೆ,
ಕರಗಿದ್ದು ಕೈಗೆ ಸಿಕ್ಕಂಗೆ.....
ತುಂಬಾ ಸೊಗಸಾಗಿದೆ ಕವನ.....ಹದಿ ಹರೆಯದ ತುಮುಲ ತುಂಬಿದೆ ಕವನ....
krishnamurti sir, NRK sir, dinakar sir, & prabhamani madam THANK YOU ALL
ReplyDeletekavana tumba chennaagide Venkatesh ji.. !!
ReplyDelete