ಮನದ ತುಂಬಾ ಕನಸುಗಳಿಗೆನು ಬರವಿಲ್ಲ... ನನಸಾಗದ ಕನಸುಗಳೂ ಇಲ್ಲಿ ಜೀವ ತಳೆಯುತ್ತದೆ .. ಸುಮ್ಮಗೆ ಹಾಗೊಂದಿಷ್ಟು ಕನಸುಗಳ ತವರು ... ಈ ನನ್ನೊಳಗಿನ ಕನಸು ...
Friday, August 27, 2010
ಪ್ರತೀ ಸಲ ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ
ಮನದ ಬಾವನೆಗಳೆಲ್ಲ ಬೆತ್ತಲಾಗುತ್ತವೆ ,
ಮಾಡಿದ ತಪ್ಪುಗಳೆಲ್ಲ ಮುಖದ ಮೇಲಿನ
ಸುಕ್ಕುಗಳಂತೆ ಎದ್ದು ಕಾಣುತ್ತದೆ ..
ಅಣಕಿಸುತ್ತವೆ ಮೂರ್ಖನಾಗಿಸುವ ಎಷ್ಟೋ ಘಟನೆಗಳು ,
ಆದರೂ ಖುಷಿ ಪಡುತ್ತೇನೆ ,ಎಷ್ಟೋ ಸಲ ಮನದ
ಭೂತಕಾಲವನ್ನು ನೆನೆದು ....
ಎಷ್ಟೋ ಬೆಳೆದಿದ್ದೇನೆ ಜೀವನದಲ್ಲಿ
ಮಾಡಿದ ತಪ್ಪುಗಳಿಂದ ಕಲಿತಿದ್ದೇನೆ .
ನಕ್ಕಿದ್ದೇನೆ ಮನದಲ್ಲೇ ನಾ ಮಾಡಿದ ತಪ್ಪನ್ನೆ
ಬೇರೆಯವರು ಮಾಡಿದಾಗ .....
ನನ್ನಂತೆ ಮೂರ್ಖರಾದಾಗ ......
ಆದರೆ ನನಗೆ ಗೊತ್ತು ,ಅವರೂ ನನ್ನಂತೆ
ಬೆಳೆಯುತ್ತಿದ್ದಾರೆ ಎಂದು ....
ಮಾಡುವ ತಪ್ಪುಗಳಿಂದ ಕಲಿಯುತ್ತಿದ್ದಾರೆ ಎಂದು ....
Subscribe to:
Post Comments (Atom)
ಒಳ್ಳೆಯ ಕವನ.ಪ್ರತಿಯೊಬ್ಬರು ಈ ರೀತಿ ಆತ್ಮ ವಿಮರ್ಶೆ ಮಾಡಿಕೊಂಡರೆ ಒಳ್ಳೆಯದು ಎನ್ನುವ ಕವನದ ಆಶಯ ಚೆನ್ನಾಗಿದೆ.
ReplyDeleteಒಳ್ಳೆಯ ಪ್ರಯತ್ನದಲ್ಲಿ ನಡೆದಿದ್ದೀರಿ ವೆಂಕಟೇಶ್, ಇದೆ ರೀತಿ ಸಾಗಲಿ! ಎಷ್ಟು ಬರೆದೆ ಎನ್ನುವುದಕ್ಕಿಂತ ಉತ್ತಮ ಗುಂಮಟ್ಟದ ಚಿಂತನೆಗಳು ಬರಲಿ, ಆಗ ನಿಮ್ಮ ಬ್ಲಾಗಿಗೊಂದು ಮಹತ್ವ ಬರುತ್ತದೆ, ಬಹಳ ಚೆನ್ನಾಗಿದೆ, ಧನ್ಯವಾದಗಳು
ReplyDeletemeaning full & nice..poem.
ReplyDeleteಧನ್ಯವಾದಗಳು Dr. krishnamurti ಯವರೇ ಹಾಗು ಮುಕ್ತ ಅವರೇ ಹಾಗು ವಿ ಆರ್ ಭಟ್ಟರೇ ನಿಮ್ಮ ಸಲಹೆ ,ಸೂಚನೆ ಹೀಗೇ ಬರುತ್ತಾ ಇರಲಿ.ಖಂಡಿತ ಅಳವಡಿಸಿಕೊಳ್ಳುವೆ
ReplyDeleteಕನ್ನಡಿಗೆ ಮಾತು ಬಂದಿದ್ದರೇ!!! ಯಾವ ಮುಖಕ್ಕೆ ಯಾವ ಕಾಮೆಂಟ್ ಕೊಡುತ್ತಿತ್ತೋ ಅಲ್ವ .ಬರಹ ಚೆನ್ನಾಗಿದೆ,.
ReplyDelete'ಎಷ್ಟೋ ಬೆಳೆದಿದ್ದೇನೆ ಜೀವನದಲ್ಲಿ
ReplyDeleteಮಾಡಿದ ತಪ್ಪುಗಳಿಂದ ಕಲಿತಿದ್ದೇನೆ ' ಮಹತ್ವದ ಸಾಲುಗಳು. ಸ್ವ ವಿಮರ್ಶಾತ್ಮಕ ಸು೦ದರ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ .
Namma pratibimbakke kannadiye saakshiyaadaru...
ReplyDeletemanassina mukhakke aatma vimarsheyallade, mattellide berondu kannadi?.....