ಅದೊಂದು ಮುಸ್ಸಂಜೆ ,ಸೂರ್ಯ ಕಿರಣವ ತಡೆದು ,
ಮಂಜಿನ ಹನಿಗಳ ಕಡೆಗಣಿಸಿ ,ಬಂತು ಮೊದಲ ವರ್ಷಧಾರೆ .
ಚಿಟ್ಟೆಗಳ ಮನವ ತಣಿಸಲು ,ಮಿಡತೆಗಳ ತುಡಿತವ ಕೆಣಕಲು ,
ಈ ಇಳೆಯ ತಾಕಿತು ಮೊದಲ ವರ್ಷಧಾರೆ .
ದಟ್ಟನೆಯ ಮೋಡಗಳಲಿ ಅಡಗಿ ಕುಳಿತು
ಬೆಂದ ಭುವಿಗೆ ನೊಂದ ಜೀವಿಗೆ ,
ತಂಪನ್ನೆರೆಯಲು ಬಂತು ಈ ವರ್ಷಧಾರೆ .
ರಪರಪನೆ ಜಿಟಜಿಟನೆ ತೊಟ್ಟಿಕ್ಕಿದವು
ಈ ಇಳೆಯ ಚುಂಬಿಸಲು .
ಹಸುರ ಹೊದ್ದಿಗೆಯ ಹಾಸಲು
ಬಂತು ಮೊದಲ ವರ್ಷಧಾರೆ
ಒಮ್ಮೊಮ್ಮೆ ಜೋರಾಗಿ ಮರುಕ್ಷಣವೇ ಮಿತವಾಗಿ ,
ಹಿತವಾಗಿ ಬಂತು ಈ ಧಾರೆ
ತಿಳಿ ನೀರ ಕದಡಿ ,ಹೊಂಬಣ್ಣಗಳ ಹರಡಿ
ಮಿಂಚಾಗಿ ಬಂತು ಜಲಧಾರೆ
ಮೈ ಮನ ತಣಿಸಲು ,ಕನಸುಗಳ ಉಳಿಸಲು
ಸಂಜೀವಿನಿಯಾಗಿ ಬಂತು ಮೊದಲ ವರ್ಷಧಾರೆ
sundaravaagide kavana.... modala maLeya haage....
ReplyDeleteಸುಂದರ ಕವನ.ತುಂಬಾ ಇಷ್ಟವಾಯಿತು.ನನ್ನ ಬ್ಲಾಗಿಗೂ ಭೇಟಿ ಕೊಡಿ.
ReplyDeleteThanks Dinakar& krishnamurt sir
ReplyDeleteಚೆ೦ದದ ಸಾಲುಗಳು..
ReplyDeleteಕವನ ಸುಂದರವಾಗಿದೆ
ReplyDelete"ಮಿಂಚಾಗಿ ಬಂತು ಜಲಧಾರೆ
ಮೈ ಮನ ತಣಿಸಲು ,ಕನಸುಗಳ ಉಳಿಸಲು
ಸಂಜೀವಿನಿಯಾಗಿ ಬಂತು ಮೊದಲ ವರ್ಷಧಾರೆ"
ಈ ಸಾಲುಗಳಂತೂ ಸೂಪರ್
thanks manamukta & nagaraaj sir
ReplyDeleteತುಂಬಾ ಚೆನ್ನಾಗಿದೆ ಸರ್ ಕವನ
ReplyDeleteನನ್ನ ಬ್ಲಾಗ್ ಗೆ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು