ಮನದ ತುಂಬಾ ಕನಸುಗಳಿಗೆನು ಬರವಿಲ್ಲ... ನನಸಾಗದ ಕನಸುಗಳೂ ಇಲ್ಲಿ ಜೀವ ತಳೆಯುತ್ತದೆ .. ಸುಮ್ಮಗೆ ಹಾಗೊಂದಿಷ್ಟು ಕನಸುಗಳ ತವರು ... ಈ ನನ್ನೊಳಗಿನ ಕನಸು ...
Saturday, August 7, 2010
ಹುಚ್ಚುಮನಸು
ಅದಾವ ಆಕರ್ಷಣೆ ನಿನ್ನಲ್ಲಿ
ಬರಿ ಕನಸ ಗೋಪುರ ಕಟ್ಟಿ ನಿನ್ನ
ನೆನಪಲ್ಲೇ ಹುಚ್ಚನಾದನಲ್ಲೇ ...
ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಿಲ್ಲ ,
ಮಾತನಾಡಿದ್ದಿಲ್ಲ ..ನನ್ನೊಳಗೆ
ನಾನೇ ಮೌನಿಯಾದೆನಲ್ಲೇ
ನೀನಿಲ್ಲದಾಗೂ ನಿನ್ನ ಹುಡುಕುವ
ಎದುರಿಗೆ ಬಂದರೆ ಮತ್ತೆಲ್ಲೋ ನೋಡುವ
ಈ ಹುಚ್ಚು ಮನಸಿಗೇನು ಮಾಡಲೇ ?
ನಿನ್ನ ಬಾವನೆಗಳ ಅರಿಯದೆ ,
ನನ್ನ ಬಾವನೆಗಳ ಬಿರಿಯದೆ
ಅಲ್ಲೇ ಗುಟ್ಟಾಗಿ ಮುಚ್ಚಿಟ್ಟುಕೊಂಡ
ಈ ಪ್ರೀತಿಗೇನು ಮಾಡಲೇ?
ಎದುರಿಗೆ ಹೇಳಿಕೊಳ್ಳಲು ಕಳೆದುಕೊಳ್ಳುವ ಭೀತಿ ,
ಹೇಳಿಕೊಳ್ಳದೆ ಕಳೆದುಕೊಂಡ ರೀತಿ
ಈ ರೀತಿ ಮನಸ ಹಚ್ಚಿಕೊಂಡೂ
ನಿನ್ನ ಹೇಗೆ ಕಳೆದುಕೊಳ್ಳಲೇ
ಹೇಗೆ ತಿಳಿಸಲೇ ನಿನಗೆ ನನ್ನೆಲ್ಲ ಬಾವನೆಗಳ .....?
Subscribe to:
Post Comments (Atom)
prayatnisideeri, paravaagilla ! go ahead! dhanyavada
ReplyDeleteಥ್ಯಾಂಕ್ಸ್ ವಿ ಆರ್ ಭಟ್ರೇ , ನನ್ನ ಎಲ್ಲ ಕವನಗಳು ಕೆ . ಕಲ್ಯಾಣ್ ತರಾನೆ ಬರ್ತಾ ಇದ್ಯಾ? (ಮೀನ್ಸ್ ಪ್ರೇಮಕವಿ???
ReplyDeleteಚೆನ್ನಾಗಿದ್ದು ವೆಂಕಟೀಶಣ್ಣ .. ಕೊನೇ 5 ಸಾಲುಗಳು ತುಂಬಾ ಇಷ್ಟ ಆತು :)
ReplyDeleteವಕೀಲರೆ ,
ReplyDeleteಚೆನ್ನಾಗಿದೆ ನಿಮ್ಮ ಕವನ..... ಹೇಳಲಿಕ್ಕೆ ಆಗಲ್ಲ ಅಂತ ಹೇಳ್ತಾ ಎಲ್ಲವನ್ನೂ ಹೇಳಿಬಿಟ್ರಲ್ಲ ..... ಚೆನ್ನಾಗಿದೆ ನಿಮ್ಮ ವರಸೆ..... ಎಲ್ಲಿಗೂ ಹೋಗಲ್ಲ ಬಂದೆ ಬರ್ತಾಳೆ....