Friday, August 20, 2010

ಮೌನಿ !







ಹೇಗೆ ಕೊಡಲಿ ನನ್ನ ಮೌನಗಳಿಗೆಲ್ಲ ಕಾರಣವ ?
ಒಂದೊಂದು ಮೌನಗಳಿಗೂ ನೂರಾರು ಕಾರಣಗಳಿವೆ 
ಅರ್ಥವಾಗಬೇಕಲ್ಲ ......
ಸೋತಿದ್ದೇನೆ ಹಲವಾರು ಸಲ 
ಮೌನಗಳಿಗೆಲ್ಲ  ಕಾರಣಗಳ ಹುಡುಕಿ,
ನನಗಿನ್ನೂ ಉತ್ತರ ಸಿಕ್ಕಿಲ್ಲ.
ಹುಡುಕುತ್ತ ಹೋದ ಹಾಗೇ ಮೌನಗಳೆಲ್ಲ 
ಬರೀ ಪ್ರಶ್ನೆಗಳು ....ಉತ್ತರ ಸಿಗದ ಪ್ರಶ್ನೆಗಳು .....!
ಹುದುಗಿರುವ ಎಷ್ಟೋ  ಬಾವನೆಗಳ ನೋವುಗಳ  ಮಿಶ್ರಣ
ನನ್ನ ಮೌನಗಳು ....!ಕಂಡರೂ ಕಾಣದಿರುವ ವಿಷಾದ ಛಾಯೆ 
ಕೆಲವೊಮ್ಮೆ ನನ್ನ ಮೌನಗಳಿಗೆ ನನಗೆ ಕಾರಣ ಗೊತ್ತಿರುವುದಿಲ್ಲ
ಮನಸ ತುಂಬಾ ಬೆಚ್ಚಗೆ ಹೊದ್ದು ಕುಳಿತುಬಿಟ್ಟಿರುತ್ತದೆ
ನಾನೇನು ಮಾಡಲಿ ಹುಡುಗೀ 
ನಿನ್ನ ನೋಡಿದಾಗ ಸಹ ನಾನು ಮೊರೆಹೋಗುವುದು 
ಮೌನ ಸಂಬಾಷಣೆಗೆ ....
ಆದರೆ ನಿನಗರ್ಥವಾಗಬೇಕಲ್ಲ !


4 comments:

  1. ಸರ್
    ನಮಸ್ಕಾರ ಸರ್,
    ನಾನು ಕನಸು
    ಹೆಗಿದ್ದಿರಾ..?
    ನಿಮ್ಮ ಬ್ಲ್ಯಾಗನ್ನು ಮೊದಲ ಸಲ ನೋಡಿ ತುಂಭಾ ಖುಷಿ ಆಯ್ತು.
    ``ಹೇಗೆ ಕೊಡಲಿ ನನ್ನ ಮೌನಗಳಿಗೆಲ್ಲ ಕಾರಣವ ?

    ಒಂದೊಂದು ಮೌನಗಳಿಗೂ ನೂರಾರು ಕಾರಣಗಳಿವೆ
    ಅರ್ಥವಾಗಬೇಕಲ್ಲ ......`` ಈ ಮೇಲಿನ ಸಾಲುಗಳು ತುಂಬಾ ಇಷ್ಟವಾದವು

    ReplyDelete
  2. ಮೊದಲ ಸಲ ನಿಮ್ಮ ತಾಣಕ್ಕೆ ಭೇಟಿ ಕೊಟ್ಟು ಹಣಿಕಿದ್ದೇನೆ.'ಮೌನ'ಕ್ಕೂ ಕಾರಣಗಳಿವೆ, ಕಾರಣರಹಿತ ಮೌನ ಮಾತ್ರ ಅಸಹನೀಯವಾಗುತ್ತದೆ.ಚೆನ್ನಾಗಿದೆ. ಮುಂದುವರೆಸಿರಿ.

    ReplyDelete