ನೆನಪುಗಳು ಕಾಡುವ ಹೊತ್ತು.
ಹೃದಯ ಬುಟ್ಟಿಯ ತುಂಬಾ ಮಾಗಿದ ಸಿಹಿ ನೆನಪುಗಳು
ಕಾಡುವ ಹೊತ್ತು ಈ ಮುಸ್ಸಂಜೆಯ ಹೊತ್ತು.
ಕಣ್ಣ ನೋಟ ತುಂಬ ಕಾಣುವ ಸಿಹಿ ಕನಸುಗಳು
ಮನಸ ಮೂಲೆಯ ಬದಿ ನೋವಿನ ನನಸು ,ಕಾಡುವ ಹೊತ್ತು
ಈ ಮುಸ್ಸಂಜೆಯ ಹೊತ್ತು .
ಸಿಹಿ ಕನಸುಗಳ ಜೊತೆಗೆ ಬಾವಗಳ ತುಳುಕಾಟ
ಕಹಿ ನನಸುಗಳ ಪಾಲಿಗೆ ದುಃಖಗಳ ಮುಲುಗಾಟ,
ಕಾಡುವ ಹೊತ್ತು ಈ ಮುಸ್ಸಂಜೆ ಹೊತ್ತು .
ಹೊತ್ತು ಕಳೆದಂತೆ ಮುಗಿಯುವ ಮಾಗಿದ ಸಿಹಿ ನೆನಪುಗಳು
ಯಾರಿಗೂ ಬೇಡದೆ ಉಳಿಯುವ ಕಹಿನೆನಪುಗಳು
ಮತ್ತೆ ಮತ್ತೆ ಕಾಡುವವು ಈ ಮುಸ್ಸಂಜೆ ಹೊತ್ತು