ಯಾರಿಗೂ ಗೊತ್ತಾಗದೆ ಬಂದವಳು
ತಾನೆಂದು ಅಂದುಕೊಂದಿದ್ದಳವಳು !
ಅವಳು ಹೃದಯದ ಬಾಗಿಲ ಕಡೆ
ಹೆಜ್ಜೆ ಇಟ್ಟಾಗಲೇ ಬೋರ್ಗರೆದಿತ್ತು ಮನ
ಹುಣ್ಣಿಮೆಯ ರಾತ್ರಿಯ ಕಡಲಿನಂತೆ....
ಕದ್ದೊಯ್ಯಲಿ ಸರ್ವಸ್ವವನ್ನು ಎಂದು
ಸುಮ್ಮನೆ ಕುಳಿತಿದ್ದೆ.........
ಮಾರಕಾಸ್ತ್ರಗಳಿಲ್ಲದೆ, ರಕ್ತಪಾತವಿಲ್ಲದೇ
ಕೇವಲ ಕುಡಿ ನೋಟದಿಂದಲೇ ಇರಿದು
ಎಲ್ಲವನ್ನೂ ಬಾಚಿ ಕಟ್ಟಿಕೊಂಡಳವಳು
ಒಂದಿನಿತೂ ನನಗೆ ಉಳಿಸದೆ !
ಅನುಕಂಪವೋ ಅನುರಾಗವೋ ಕಾಣೆ
ಬಿಟ್ಟು ಹೋಗಿದ್ದಳವಳು ತನ್ನ ಹೃದಯವನ್ನೇ
ಇಲ್ಲೇ ನನ್ನ ಒಳಗೆ ..........
ಕಳ್ಳತನವೂ ಇಷ್ಟೊಂದು ಸಿಹಿಯೇ ??
(ಸ್ನೇಹಿತ ಅಶೋಕ್ ಭಾಗಮಂಡಲ ಬರೆದದ್ದು ...)
Nice
ReplyDeleteಹೂಂ....
ReplyDeleteಕಳ್ಳತನದ ಸಿಹಿ ಚನ್ನಾಗಿ ಹೇಳಿದ್ದೀರಿ...
ಚಂದ ಚಂದ ಸಾಲುಗಳು....