ಮತ್ತೆ ಮತ್ತೆ ಬಂದು ...
ನಿನ್ನ ಮರೆಯಲೇ ಓಡುತ್ತಿರುವುದು ಬಲುದೂರ
ಹೊಸ ಕನಸು ಹೊಸ ಆಕಾಂಕ್ಷೆ ಗಳೊಡನೆ ...
ಆದರೂ ಮತ್ತೆ ಬಂದು ನೋಯಿಸದಿರು ,
ತಾಳಿಕೊಳ್ಳದು ಈ ಹೃದಯ ....
ಮತ್ತೆ ಮತ್ತೆ ಬರುವ ನಿನ್ನ ನೆಪುಗಳ
ಸಾವಿರ ಹೋಳಾಗುವುದು ಖಚಿತ ..
ಏನು ಮಾಡಲಿ ಆ ಸಾವಿರ ಚೂರುಗಳು ....
ಸಾವಿರ ನೆನಪುಗಳಾಗಿ ಕಾಡಿಸಿದರೆ..???
ಎಲ್ಲಿ ಹೋಗಲಿ ನಿನ್ನಿಂದ ತಪ್ಪಿಸಿಕೊಂಡು..
ಹಕ್ಕಿಯಾಗಿ ಹಾರಿ ಹೋಗೋಣವೆಂದರೆ ,,, ಬಿರುಗಾಳಿಯಾಗಿ
ಬಂದು ದಿಕ್ಕು ತಪ್ಪಿಸುವೆ ....
ಭೋರ್ಗರೆಯುವ ನೀರಾಗಿ ಹರಿದು ಬಿಡಲೆಂದರೆ
ಹೆಬ್ಬಂಡೆಯಾಗಿ ತಡೆಯುವೆ ...
ಕತ್ತಲಲಿ ಕಣ್ಣು ತಪ್ಪಿಸಿ ಹೋಗೋಣವೆಂದರೆ
ಬೆಳದಿಂಗಳ ನೆರಳಿನಂತೆ ಹಿಂಬಾಲಿಸುವೆ...
ಎಲ್ಲಿ ಹೋದರು ಬೆಂಬಿಡದೆ ಬರುವೆ ....ನೆರಳಾಗಿ ...
ಏಕೆಂದರೆ ನೀನು ನೆನಪಲ್ಲವೇ ?
ನೆನಪುಗಳೇ...ಹಾಗಲ್ಲವೇ...?
ReplyDeleteಬೇಡವೆಂದರೂ ಬಂದು ಕಾಡುತವೆ..!
ಬೇಕಾದಾಗ ಬರದೇ ನಗುತ್ತವೆ..!
ನಿನ್ನ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಕ್ಕೆ,ಸಾರ್ಥಕವಲ್ಲವೇ..??
ನನಗನಿಸಿದ ಹಾಗೆ.. ನೆನಪುಗಳೆಲ್ಲಾ ಹಾಗೆ ಅಲ್ವಾ? ಸಿಹಿ, ಕಹಿ ನೆನಪುಗಳು....,
ReplyDeleteಒಮ್ಮೊಮ್ಮೆ ಇಷ್ಟ...,ಒಮ್ಮೊಮ್ಮೆ ಕಷ್ಟ.........,
ಆದ್ರೂ ಏನೋ ಹಿತ ಕೊಡುತ್ತವೆ.