Saturday, July 24, 2010

ಸಾವಿರ ಕನಸುಗಳ ಧಾರಾವಾಹಿ ...


ಮನಸಿನಾಳದ ಸುತ್ತ ಕಟ್ಟಿಕೊಂಡ ಕನಸುಗಳು
 ಗಿರಕಿ ಹೊಡೆಯುತ್ತಿದೆ ನಿನ್ನ ಸುತ್ತ..
ಬರಿ ಮಾತು ಚೂರು ನಗು ಒಂದು ಕಣ್ಣ ನೋಟಕ್ಕೆ
 ಕಟ್ಟಿಕೊಂಡ ರಾಶಿ ಕನಸುಗಳವು,
ಹೇಗೆ ತಿಳಿಸಲೇ ನಿನಗೆ ???
ಅದಾರೋ ಹೇಳಿದರು ಪ್ರೀತಿ ಹುಟ್ಟುವುದು ,
ಹೃದಯ ಮಿಡಿಯುವುದು ಮನಸುಗಳು ಕೂಡಿದಾಗ
ನೀನಾದರೋ ಕೈಗೆಸಿಗದ ಮರೀಚಿಕೆ ,
ನನ್ನ ಮನಸಿನ ಬಾವನೆಗಳು, ನನ್ನ ಕವನಗಳು.
ಕವನಗಳೋ ನಿನಗೊಂದು ಅರ್ಥವಾಗದ ರಾಮಾಯಣ ,
ಕೇಳಿಲ್ಲಿ ....
ಎಲ್ಲವನ್ನೂ ಹೇಳಲಾಗುವುದಿಲ್ಲ ಬಾಯ್ಬಿಟ್ಟು,
ನನ್ನ ಕಣ್ಣುಗಳನೊಮ್ಮೆ ಕಣ್ಣಿಟ್ಟು ನೋಡು ...
ಅರ್ಥವಾಗುತ್ತದೆ ನನ್ನ ಸಾವಿರ ಕನಸುಗಳ ಧಾರಾವಾಹಿ ....

5 comments:

  1. ತುಂಬಾ ಚೆನ್ನಾಗಿದ್ದು :) episode ಕಡಿಮೆ ಇದ್ದಷ್ಟು ಬೇಗ ಅರ್ಥ ಆಗ್ತು. :D

    ReplyDelete
  2. ಥ್ಯಾಂಕ್ಸ್ ರಂಜಿತ , ಆದ್ರೆ ರೆಜೆಕ್ಟ್ ಮಾಡಿದ್ರೆ ಧಾರಾವಾಹಿ ಬೇಗನೆ ಮುಗ್ದುಹೊಗ್ತು

    ReplyDelete
  3. channaagide nimma saavira kanasugala dhaaraavaahi..
    nice poem

    ReplyDelete