ಇಂದು ಮಾತ್ರ ಕೋರ್ಟಿನ ಕಲಾಪಗಳು
ಮನಸ್ಸಿಗೆ ಹಿತ ನೀಡಿದ್ದವು ,ಹಳೆ ಫೈಲುಗಳೆಲ್ಲ
ಧೂಳು ಕೊಡವಿ ಅತ್ತಿಂದಿತ್ತ ಹಾರಾಡತೊಡಗಿದ್ದವು
ಪ್ರೇಮದ ಸಂದೇಶ ಹೊತ್ತು .
ಹುಡುಗೀ ಮೊದಲ ಸಲ ಏನೊಂದೂ ಗೊತ್ತಾಗುತ್ತಿರಲಿಲ್ಲ ,
ನನ್ನೆದುರಿಗೆ ಬಂದು ನಿಂತ ನಿನ್ನ ನೋಡಿ .
ನ್ಯಾಯಾಧೀಶರ ಮಾತೂ ಕೇಳದಾಗಿತ್ತು.
ಹುಡುಗೀ ನಿನ್ನ ನಗುವಿಗೆ ನನ್ನ ಮಾತೂ ಮರೆತುಹೋಗಿತ್ತು .
ಕಣ್ಣು ತೆಗೆಯದಾಗಿದ್ದೆ ನಿನ್ನ ಕಣ್ಣ ಬಿಟ್ಟು
ಮುಂಗುರುಳ ಸರಿಸಿ ಬೀರೋ ಓರೆನೋಟ ,
ಕಣ್ಣಂಚಿನ ಆ ಕಪ್ಪು ಕಾಡಿಗೆ , ಅರಳು ಹುರಿದ ಮಾತು
ನಕ್ಕಾಗ ನಿನ್ನ ಕೆಂಪುಗೆನ್ನೆಗುಳಿಯೊಳಗೆ ನನ್ನ ನಾನೇ ಮರೆತಿದ್ದೆ
ಯಾರ ಕೂಗೂ ಕೇಳದಾಗಿತ್ತು ನನಗೆ ,
ನಿನ್ನ ನೋಡುತ್ತಾ ನನ್ನ ಕೇಸನ್ನೇ ನಾ ಮರೆತಿದ್ದೆ !
ಅಂತೂ ತಮಗೊಬ್ಬ ಕನಸಿನ ಕನ್ಯೆ ಕಾಡುತ್ತಿದ್ದಾಳೆ, ಸಂತೋಷ, ಮುಂದುವರಿಯಲಿ ನಿಮ್ಮ ಪಯಣ! ಕವನ ಚೆನ್ನಾಗಿದೆ, ಆದರೆ ಕವನದ ಕನ್ನಿಕೆಯ ಬಗ್ಗೆ ವಾಸ್ತವದಲ್ಲಿ ಅಷ್ಟಾಗಿ ತಲೆಕೆಡಿಸಿಕೊಳ್ಳಬೇಡಿ, ನಮಸ್ಕಾರ
ReplyDeleteಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ವಿ .ಆರ್ . ಭಟ್ಟರೇ ... ಸ್ಫೂರ್ತಿ ಹೆಣ್ಣೇ ಅಲ್ಲವಾ ?
ReplyDelete