Wednesday, July 14, 2010

ನನ್ನ ಪ್ರೀತಿಯ ಹುಡುಗಿ



ನನ್ನ ಪ್ರೀತಿಯ ಹುಡುಗಿ ಒಂದು ದಿನ ತೀರ ನಸುಕಿನಲಿ ,
ಬೆಳಕಿನ್ನೂ ಕಣ್ಣುಜ್ಜಿಕ್ಕೊಳ್ಳುತ್ತ   ಎಚ್ಚರಾಗುವ ಸಮಯದಲಿ 
ನನ್ನ ಎದೆಯಲ್ಲೊಂದು ಕವಿತೆ ನೆಟ್ಟು ಹೋದಳು ,
ಪ್ರೀತಿಯ ಮೇಲೆ  ಬದುಕಿನ ಬದುಕಿನ ಮೇಲೆ ,
ನನ್ನ ಪ್ರೀತಿಯ ಹುಡುಗಿ ಹೊನ್ನ ಹೊಳಪುಳ್ಳ ಗೌರವರ್ಣದ ಬೆಡಗಿ ,
ಮುಗುಳ್ನಗುತ್ತ ಮಾತನಾಡುವ ,ಮಾತಿಗೆಳೆಯುವ ಇಷ್ಟಗಲ ಕಣ್ಣುಗಳ 
ಚೆಲುವೆ ,ನೋಡಬೇಕವಳ ಮೂಗಿನ ತುದಿಯ ಬಿಂಕವನ್ನ,
ಹತ್ತಿರ ಕರೆದೂ ....ದೂರವಿರಿಸುವ ,ತುಟಿಗಳ ತುಂಟತನವನ್ನ 
ಬೇಕಷ್ಟೇ ತುಟಿ ತೆರೆದು ನಕ್ಕಾಗ ಹೊಳೆವ ಸಾಲು ಹಲ್ಲುಗಳ ಮೋಹಕತೆಯ ,
ನನ್ನ ಪ್ರೀತಿಯ ಹುಡುಗಿ ,ಮಧ್ಯರಾತ್ರಿಯ ಕತ್ತಲಲಿ ,
ಕನಸು ಬೀಳುವ ಸುಮುಹೂರ್ತ ಸಮಯದಲಿ 
ಕಿವಿಯಲ್ಲುಸುರಿ ಹೋದಳು ,ನಂಬಿಸುವ ದನಿಯಲ್ಲಿ .....
ಹುಚ್ಚು ಹುಡುಗಾ ,
ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದು 
ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ .......

2 comments:

  1. ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದ

    ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ

    ಚೆನ್ನಾಗಿದೆ ಸಾಲುಗಳು ಜೊತೆಗೊಂದಿಷ್ಟು ಕನಸುಗಳು....

    ReplyDelete