ಮನದ ಮುಗಿಲಲ್ಲಿ ಕಟ್ಟಿಕೊಂಡ ಕನಸುಗಳು
ಹನಿಯಾಗಿ ಧರೆಗಿಳಿದು
ಲೆಕ್ಕಹಾಕೋ ನಕ್ಷತ್ರಗಳನೆಲ್ಲ ಒಟ್ಟುಗೂಡಿಸಿ
ಜೊತೆಗಿಟ್ಟ ಚಂದ್ರನ ಚೂರು
ನಿನ್ನ ಪದತಲ ಸೇರುವ ಸಮಯ ಮೌನ ಮಾತನಾಡಿದಾಗ
ಬೀಸುವ ಗಾಳಿಯ ಜೊತೆಗೆ ಹರಿವ ಝಾರಿಗಳಲಿ ,
ನಿನ್ನ ಹೆಸರ ಹರಿಬಿಟ್ಟು ಸದ್ದಾಗದೆ ಸುಮ್ಮಗೆ ನಿಂತು ಆಲಿಸುವಾಗ ,
ಹಸಿರ ಹೊದ್ದು ಮಲಗಿದ ಪ್ರಕೃತಿಗೆ ಕೊಂಚ ಸುಣ್ಣ ,ಬಣ್ಣ ಬಳಿದು
ಶೃಂಗರಿಸಿ ಕಾಯುವ ಸಮಯ ,
ಮೌನ ಮಾತನಾಡಿದಾಗ .
ಹೃದದೊಳಗಿನ ಬಾವನೆಗಳೆಲ್ಲ ಬೆಚ್ಚಗೆ ಹೊದ್ದು ಮಲಗಿರುವಾಗ
ಸದ್ದಾಗದೆ ಆಡುವ ಮಾತುಗಳೆಲ್ಲ ಪಿಸುಗುಟ್ಟುವವು
ಮೌನ ಮಾತನಾಡಿದಾಗ
No comments:
Post a Comment