ಪ್ರತೀ ಮುಸ್ಸಂಜೆ ನಿನ್ನನಗಲುವ ವಿರಹದ ಸಮಯ
ದಿನವೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನಿನ್ನ ನೋಡಿ
ಮುಸ್ಸಂಜೆಯಾಗಲು ವಿರಹ ವೇದನೆ
ಹೋಗುವ ಮೊದಲೊಮ್ಮೆ ನೋಡೋಣವೆಂದರೆ
ತುಂಟ ಮೋಡಗಳ ಕೀಟಲೆ ..ನಿನ್ನ ಮರೆಮಾಚಿ
ಹಕ್ಕಿ ಪಿಕ್ಕಿಗಳ ಕಲರವ ನೀ ಹೋಗುವ ಸಮಯ
ಗಾಳಿಗೂ ವಿರಹದ ನಿಟ್ಟುಸಿರು ...ಮೆಲ್ಲನೆ ಮೇಲೇರಿದೆ
ತುಂಡು ಮೋಡಗಳ ಚದುರಿಸಲು..
ಅಲ್ಲಲ್ಲಿ ಅಡಗಿ ಕುಳಿತ ನಕ್ಷತ್ರಗಳ ಸಾಲು ..
ಇದನ್ನೆಲ್ಲಾ ನೊಡುತ್ತ ಉಳಿದೆ ನಾನು ಅಲ್ಲೇ ...
ಮುಂದೆನಾಗುವುದೂ ಎಂದು ...
ಚಂದಿರನ ಮುಖ ರಂಗು ಚೆಲ್ಲಿ ..
ಖುಷಿಯಿಂದ ಮುಗುಳ್ನಗುತ್ತಿದ್ದ ......
ಈ ಆಗಲಿಕೆ ಬಹು ದಿನ ಇರದಿರಲಿ, ಆಕೆ ನಿಮ್ಮನ್ನೇ ವರಿಸಲಿ. ಆಗ ಸಂಜೆಗಳು ರಾತ್ರಿಗಳ ನಿರೀಕ್ಷಣೆಯ ಪರ್ವಗಳು.
ReplyDeleteಚೆನ್ನಾಗಿದೆ ಸಾಲುಗಳು..
ReplyDeleteNice One Venki.....Bega maduve maadkolli marre....
ReplyDelete