ಅದೊಂದು ಹಾಗೆ ಸುಮ್ಮನೆ ಬಾವಗಳ ಮಿಲನ
ಬೆಳಕು ಕತ್ತಲೆ ನಡುವಿನ ಬದುಕಿನ ಆಟ..
ಅನಿವಾರ್ಯವದು ಬೆಳಕ ನಡುವೆ ಬದುಕಲು
ಅವಶ್ಯಕತೆಯದು ಕತ್ತಲೆಯ ನೀರವ ಮೌನವ ತೊಡೆಯಲು ..
ಬೆತ್ತಲೆಯಾಗುವ ಅಪರಿಚಿತ ಬಾವನೆಗಳಿಗೊಂದು ಕಾಲಮಿತಿ
ಬರಿದೇ ಬಾವನೆಗಳ ಸಮ್ಮಿಲನ ...
ಬರಿಯ ನಿಟ್ಟಿಸುರುಗಳಷ್ಟೇ ... ಬೇಕಿಲ್ಲ ಸಂಬಂದಗಳ ಬೇರು
ಬರಿಯ ಅವಶ್ಯಕತೆಯದು .. ಬದುಕ ಅನಿವಾರ್ಯವದು ..
ಕತ್ತಲೆಯ ಬದುಕಿಗೆ ಹೊಂದಿಕೊಂದವರೆಷ್ಟೋ .. ಕತ್ತಲೆಯಾಗುವುದೇ
ಕಾಯುವರೆಷ್ಟೋ ...
ಕತ್ತಲೆಯಾದರೆ ಕಾದು ನಿಲ್ಲಬೇಕು ಅವಶ್ಯಕತೆಯವರ ಹುಡುಕಿ ..
ಜಾಣ ವ್ಯವಹಾರವದು .. ಎಲ್ಲೆಂದರಲ್ಲಿ ಹುಡುಕುವ ಹಾಗಿಲ್ಲ
ಚೌಕಾಸಿ ವ್ಯಾಪಾರ ... ಲಾಭವೂ ಇಲ್ಲ ನಷ್ಟವೂ ಇಲ್ಲ ..
ಬೆಳಕು ಹರಿಯುವ ಮುನ್ನ ವ್ಯಾಪಾರ ಮುಗಿಸಬೇಕು ..
ಬೇಕಿಲ್ಲ ಯಾರ ಕಟ್ಟಪ್ಪಣೆ ಇಲ್ಲಿ ... ಮಾಡಿಲ್ಲ ಯಾವ ಚೌಕಟ್ಟು ಇಲ್ಲಿ ..
ಒಬ್ಬರಿಗದು ಅನಿವಾರ್ಯತೆ ...ಹುಡುಕಿ ಬರುವವರ ಅವಶ್ಯಕತೆ ..
ಒಂದೊಂದು ಅವಶ್ಯಕತೆಗೂ ಹೊಂದಿಕೊಳ್ಳುವ ಅನಿವಾರ್ಯತೆ ,,
ದಣಿದ ಮನಕೆ ಸಿಗುವ ಕಾಂಚಾಣ ಅವಡುಗಟ್ಟಿದ ನಿಟ್ಟಿಸುರೊಂದೆ ....
ಅನಿವಾರ್ಯವಾದವರಿಗದು ಜೀವನದ ಆಟ...
ReplyDeleteಅವಶ್ಯಕತೆಯಾದವರಿಗದು ಜೀವನದ ಜೊತೆ ಆಟ..
ಚಂದದ ಸಾಲುಗಳು...
ನಿಜ ಸಂದ್ಯಾ ..ಬದುಕು ಹಾಗೆ ... ದನ್ಯವಾದಗಳು
ReplyDeleteಅನಿವಾರ್ಯತೆ ಮನುಷ್ಯನನ್ನು ಏನು ಬೇಕಾದರೂ ಆಡಿಸುತ್ತೆ. ಒಳ್ಳೆಯ ವಸ್ತುನಿಷ್ಠ ಕವನ.
ReplyDeleteಇದೊಂದೇ ವಸ್ತು ಬಿಕರಿಯಾಗುವುದು ಪ್ರತಿ ಸಲ ಹೊಸತೆಂಬಂತೆ ,
ReplyDeleteಬದುಕೆಂದರೆ ಹೀಗೆ?!
ReplyDeleteಚೆನ್ನಾಗಿದೆ....