ಮೊನ್ನೆ ಚೂರು ಹರಿದಿತ್ತು ..
ಎಷ್ಟೋ ವರ್ಷಗಳಿಂದ ನನ್ನ ಅಪ್ಪಿದ್ದ ಆ ಹಳೆಯ ಚಾದರ
ಅದೆಂತದೋ ಆಪ್ತತೆ ..ನನಗೂ ಅದಕೂ ..
ನನ್ನ ರಾತ್ರಿಗಳ ನಿತ್ಯ ಸಂಗಾತಿ ..
ಎಷ್ಟೋ ಕನಸುಗಳ ಬೆಚ್ಚಗಿರಿಸಿ ...ಕಣ್ಣೀರುಗಳ ಒರೆಸಿ ..
ನನ್ನ ಜತೆಗಿತ್ತದು ..
ಬಣ್ಣ ಮಾಸಿ ಹಳೆಯದಾಗಿದ್ದರೂ ಹೊಸದರ ಮೇಲೆ ಮನಸಾಗುತ್ತಿಲ್ಲ
ಒಂದು ದಿನ ತೆಗೆದಿರಿಸಿ ಮತ್ತೆ ಅದನ್ನಪ್ಪಿದ್ದೆ
ಅದಾದರೂ ಎಷ್ಟು ದಿನ ತಡೆದೀತು ??
ದಿನ ದಿನವೂ ನನ್ನ ಕಾಲಡಿಗೆ ಸಿಗುವ
ಆ ಚಾದರ ...ಎರಡಾಗುವ ಮೊದಲು ಬಿಡಬೇಕು ...
ಏನಾಗಲಿ ಇವತ್ತೊಂದಿನ ....
ನಾಳೆ ಬದಲಿಸಿದರಾಯಿತು ....
cholo eddo
ReplyDeleteಪ್ರೀತಿಯ ವೆಂಕಟೇಶು..
ReplyDeleteಹಳತು..
ಹಳಸದೆ...
ಹೊಸತಾಗಿ...
ಸದಾ
ಹಸಿರಾಗಿರುವದು....
ನಮ್ಮೊಳಗಿನ ಬಚ್ಚಿಟ್ಟ ನೆನಪುಗಳ ಹಾಗೆ.... !
nice lines...
ReplyDeleteNice.. really it happens d same.
ReplyDelete