ಒಂದಷ್ಟು ಕನಸುಗಳ ಚಿತ್ತಾರ ಬಿಡಿಸಿ
ಅದಕ್ಕೊಂದಿಷ್ಟು ಬಣ್ಣಗಳ ಹರವಿಬಿಡು..
ಮನದ ಗೂಡ ತುಂಬಾ ಅಲಂಕರಿಸಿಬಿಡುತ್ತೇನೆ..
ಸಿಂಗಾರಗೊಳ್ಳಲಿ ನನ್ನ ಮನಸೂ ಕೊಂಚ
ನೀ ಕಾಲಿಡುವ ಮುನ್ನ ..
ಹೇಳಿದ್ದೇನೆ ಬಾನ ಚಂದಿರಗೆ ... ಸ್ವಲ್ಪ ಬೆಳಕ
ಕೂಡಿಟ್ಟುಕೋ ..ಎಲ್ಲವ ಕಾಲಿ ಮಾಡಬೇಡ ...
ನನ್ನವಳು ಬಂದಾಗ ಬೆಳಗುವಿಯಂತೆ ..
ಬಾನ ಚುಕ್ಕಿ ಗಳೂ ಸಿದ್ದವಾಗಿಯೇ ಇವೆ ..
ನೀ ಬಂದಾಗ ಮನದ ಬಾಗಿಲ ಮುಂದೆ ರಂಗೋಲಿ ಬಿಡಿಸಲು ..
ಅಲ್ಲೆಲ್ಲೋ ನೋಡಬೇಡ ...ದಾರಿ ತೋರಿಸಲು
ತಂಗಾಳಿ ಸಿದ್ದವಾಗಿಯೇ ಇದೆ ..
ನೀ ಬಂದೊಡನೆ ನನ್ನ ಮನದ ಕಡೆಗೆ
ಅದು ನಿನ್ನ ಜೊತೆಗಿರುತ್ತದೆ ...
ಸಿಂಗರಿಸಿಕೊಂಡಿವೆ ನೀ ಬರುವ ದಾರಿ ತುಂಬಾ ..
ಎಲ್ಲ ಹೂಗಳು ...ತಾವೇನು ಕಡಿಮೆ ಎಂದು ..
ದುಂಬಿಗಳಿಗೂ ರಜಾ ... ಎಲ್ಲ ಕೂಡಿ ಹಾಡಲು ಸಿದ್ದವಾಗಿವೆ ..
ಮಿಂಚು ಹುಳಗಳೂ ಮಿನುಗುತ್ತಿವೆ ನೀ ಬರುವ ಸುದ್ದಿ ಕೇಳಿ ..
ಮತ್ತೇಕೆ ತಡ ... ನಾ ಕಳಿಸಿದ ಬಾಳ ದೋಣಿ ಬಂದಿದೆ
ಹತ್ತಿ ಬಂದುಬಿಡು ... ನನ್ನ ಮನದ ಕಡೆಗೆ ...
ದಾರಿಯಂತೂ ತಪ್ಪುವುದಿಲ್ಲ ...ತಂಗಾಳಿ ನಿನ್ನ ಜೊತೆಗಿದೆ ...
ದಾರಿಯಂತೂ ತಪ್ಪುವುದಿಲ್ಲ.. :) ಚಂದ ಕವನ ಅವಳಿಗೆ ವೆಂಕಣ್ಣ...
ReplyDeleteಕಿರಣ ಅವಳು ಯಾರಾದರೂ ಆಗಿರಲಿ ..ಈ ಮನದ ಕಡೆ ಬರಲೇ ಬೇಕು ಅಲ್ದಾ ?
DeleteGood one Venkatesh
ReplyDeleteGood One
ReplyDelete