ಇತ್ತಿತ್ತಲಾಗಿ ನನಗೂ ಚಿಕ್ಕದಾಗಿ ಹೊಟ್ಟೆ ಬರುತ್ತಿದೆ
ಸುಖಾ ಸುಮ್ಮನೆ ಸ್ಲಿಮ್ ಆಗಿ ಇದ್ದ ನಾನು
ಸ್ವಲ್ಪ ದಪ್ಪನಾಗುತ್ತಿದ್ದೇನೆ ... ಎಲ್ಲ ಕಡೆಯೂ ಅಲ್ಲ
ಹೊಟ್ಟೆ ಮಾತ್ರ ...
ಓಡಾಟವಿಲ್ಲ , ಬಸ್ ಹಿಡಿದು ಒಡಬೇಕಾಗಿಲ್ಲ..
ಸುಮ್ಮನೆ ಕುಳಿತಲ್ಲಿಯೇ ಕೆಲಸ .. ಹೊಟ್ಟೆ ಮಾತ್ರ ತನ್ನ ಇರುವನ್ನ
ತೋರಿಸುತ್ತಿದೆ ..
ಅದೊಂದು ಕಾಲವಿತ್ತು ಎಲ್ಲ ಗಾಳಿಯನ್ನೂ ಹೊಟ್ಟೆಯೊಳಗೆ
ತುಂಬಿ ನನಗೂ ಹೊಟ್ಟೆ ಇದೆ ಎಂದು ತೋರಿಸಬೇಕಾಗಿತ್ತು
ಈಗ ಉಸಿರ ಒಳಗೆ ಎಳೆದು ಕೊಂಡರೂ ಹೊಟ್ಟೆ ಮಾತ್ರ ಹೊರಗೆ ಇಣುಕುತ್ತದೆ
ಪಾಪದ ಪ್ಯಾಂಟು ಗಳೋ ಹೊಟ್ಟೆಯ ಮುಚ್ಚಿಡಲು ಹರಸಾಹಸ ಮಾಡುತ್ತವೆ
ಮೊದಮೊದಲು ಹೊಟ್ಟೆ ಇರುವವರನ್ನು ಕಂಡರೆ
ಒಂಥರ ...ಥೋ ಹೇಗಪ್ಪ ಇವರ ಹೊಟ್ಟೆಗೆ ಜಾಗ ಬಿಡುವುದು ??
ಅವರೋ ತಮ್ಮ ಹೊಟ್ಟೆಯ ಜೊತೆ ನನ್ನನ್ನೂ ತಳ್ಳಿಕೊಂಡು ಹೋಗುತ್ತಿದ್ದರು
ಈಗ ಚಿಂತೆ ಶುರುವಾಗಿದೆ ನನ್ನ ಹೊಟ್ಟೆಯೂ ಇವರ ಸಾಲಿಗೆ ಸೇರುವದ ??
ಬೆಳಗ್ಗೆದ್ದು ಓಡಲು ಹೊಟ್ಟೆಗೂ ಬೇಸರ ...ಚಳಿಗೆ ಸುಮ್ಮನೆ
ಮಗ್ಗಲ ಬದಲಿಸುತ್ತದೆ ...
ಜಿಮ್ಮು ಸ್ವಿಮ್ಮು ಅಂತ ಹೋದರೆ ಹೊಟ್ಟೆಯ ಜೊತೆ
ಉಳಿದವಕ್ಕೆಲ್ಲ ಉಪವಾಸ ...
ಹೊಟ್ಟೆಗೂ ನಾಲಿಗೆಗೂ ಅದಾವ ಜನುಮದ ದ್ವೇಷವೋ ..
ಮನಸ್ಸು ಯಾವಾಗಲು ನಾಲಿಗೆಯ ಪರ ..
ಆಗಾಗ ಕೇಳುತ್ತಿರುತ್ತದೆ ಏನು ನಿನಗೊಬ್ಬನಿಗಾ ಹೊಟ್ಟೆ ಇರುವುದು ?
ಏನೋ ಇನ್ನು ಚಿಕ್ಕದು .ಸ್ವಲ್ಪ ಓಡಾಡಿದರೆ .ಕಡಿಮೆಯಾಗುತ್ತದೆ ಬಿಡು ಅನ್ನುತ್ತದೆ..
ಆದರೂ ಉಳಿದ ಹೊಟ್ಟೆಗಳು ಕೆಂಗಣ್ಣು ಬೀರುತ್ತಿವೆ ..
ನಮಗೆ ಜಾಗವಿಲ್ಲ ನೀ ಮತ್ತೆ ಬರಬೇಡ ಎಂದು ...
ಹ್ಹ ಹ್ಹ ಹ್ಹಾ ನಿಮಗೂ ಹೊಟ್ಟೆ ಬರುತ್ತಿದೆ ಅಂದರೆ ಮಹದಾಶ್ಚರ್ಯ ವೆಂಕಟೇಶ್ ಅವರೆ!!
ReplyDeleteನನ್ನ ಹೊಟ್ಟೆಯ ಸ್ಥಿತಿಯ ಕೈಗನ್ನಡಿ ಈ ಬರಹ. ಆದರೆ ಏನು ಮಾಡೋದು ಗೆಳೆಯ ತೂಕ ಇಳಿಸಲು ವಿಶ್ವ ಪ್ರಯತ್ನ ಮಾಡಿಯೂ ಸೋತ ಯೋಧ ನಾನು!
ReplyDeleteಸಕತ್ತಾಗಿದೆ ನಿಮ್ಮ ಹೊಟ್ಟೆ ಪುರಾಣ...
ReplyDeleteಹೊಟ್ಟೆಗೂ ನಾಲಿಗೆಗೂ ಅದಾವ ಜನ್ಮದ ದ್ವೇಷವೂ ಎಂಬ ಮಾತು ತುಂಬಾನೆ ಇಷ್ಟವಾಯಿತು ...
ತಮಾಷೆ ಮತ್ತು ಗಂಭೀರತೆ ಎರಡು ಇರುವ ಕವನ..
ReplyDeleteಸದ್ಯ ಎಲ್ಲರಿಗೂ ಕಾಡುವ ಅತಿ ಮುಖ್ಯ ಸಮಸ್ಯೆಗಳಲ್ಲಿ ಇದೂ ಒಂದು...
ಬಹಳ ಇಷ್ಟವಾದ ಕವನ..
ಚೆನ್ನಾಗಿ ನಿರೂಪಿಸಿದ್ದೀರಿ..
ಎಲ್ಲರಿಗೂ ಧನ್ಯವಾದಗಳು
ReplyDeleteಹೊಟ್ಟೆಯೊಡನೆ ಒದ್ದಾಟ... ಬಿಟ್ಟೆಯಲ್ಲಾ ಓಡಾಟ,,,ಹಹಹಹ್ ಚನ್ನಾಗಿದೆ ವೆಂಕಟೇಶ್... ನನ್ನ ಬ್ಲಾಗಿಗೆ ಬಂದ್ರಿ ಥ್ಯಾಂಕ್ಸ್... ಲಿಂಕ್ ಪಬ್ಲಿಕ್ ಆಗಿಲಿಲ್ಲ... ಈಗ ಮಾಡಿದ್ದೀನಿ...ನೋಡಿ...
ReplyDeleteದನ್ಯವಾದಗಳು ಸರ್ ಏನಕ್ಕೋ ಮೊನ್ನೆ ಹೀಗೆ ಪ್ಯಾಂಟ್ ಹಾಕಲು ಕಷ್ಟ ಪಡುತ್ತಿದ್ದಾಗ ನೆನಪಾಗಿದ್ದು ಈ ಹೊಟ್ಟೆ ಕವನ ... ಹಾಗೆ ಮೊದಲು ನೆನಪಿಗೆ ಬಂದವರೇ ನಮ್ಮ ಪಕ್ಕು ಮಾವ , ವಿ ಆರ್ ಭಟ್ರು . ಬದರಿ ಸರ್ ಆಮೇಲೆ ನೀವು ... ಕವಿಗಳೆಲ್ಲರಿಗೂ ಹೊಟ್ಟೆ ಇದೆ ಯಲ್ಲವ?
ReplyDeleteNice writeup
ReplyDeleteSwarna
Thanks Swarna ... Welcome to my Blog
ReplyDeletewow venktesh anna urig yavag barte? hotte tagandU?patakne baaro...
ReplyDelete