Thursday, February 23, 2012



ಅದಾವ ಆಕರ್ಷಣೆಯೋ ನಾ ಕಾಣೆ ..
ನೀ ಮಾತನಾಡುವಾಗ ನಿನ್ನ ಕಣ್ಣನ್ನೇ ನೋಡುತ್ತಾ 
ಕುಳಿತಿರುವ ಮೌನಿ ನಾನು ..
ಯಾವ ಬಂಧವೋ ನಿನ್ನಲ್ಲಿ , ನೋಡುತ್ತಲೇ  ಕನಸುಗಳೆಲ್ಲ
ಬಿಕರಿಯಾಗಿವೆ ... 


ನೂರು ಸಾರಿ ನಿನ್ನ ನೋಡಿ , ತಿರು ತಿರುಗಿ ನೋಡುವಾಸೆ 
ಮತ್ತೆ  ಕಾಡಿದೆ  ... 
ಪ್ರೀತಿ  ಹೃದಯದೊಳಗೆ ಬಚ್ಚಿಟ್ಟ  ನಿಧಿ ..
ಒಮ್ಮೆ ನನ್ನ ಹೃದಯದ ಬಾಗಿಲ ಕಡೆ ಇಣುಕಿ ನೋಡು 
 ನಿನಗಷ್ಟೆ ಇರುವ ಪ್ರೀತಿ .. ನನಗಲ್ಲಿ ಖಾಸಗಿ ಸಂಬ್ರಮ ..


ಸುಮ್ಮನೆ ಕೈ ಹಿಡಿದು ಬಿಡು ....ನಾವಲ್ಲಿ ನಡೆವ ಹಾದಿ 
ಎಂದೂ ಕೊನೆಯಾಗದು ..
ಕಣ್ಣನು ಮುಚ್ಚಿ ನೋಡಿದರೂ ಅಲ್ಲಿ  ಕಾಣುವ ಲೋಕ ಉನ್ಮಾದಕ 


ನನ್ನ ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೆ 
ಸೆಳೆದುಬಿಡು ನಿನ್ನ ಒಲುಮೆಯೂರಿಗೆ ....
ಅಲ್ಲಿ ನನ್ನ ನಾನು ಮರೆವಂತೆ ಮಾಡು..












7 comments:

  1. ವಾವ್ಹ್ ಎನಿಸಿತು..
    ಪ್ರೀತಿಯ ಸುಂದರ ಚಿತ್ರಣ....
    ಮನ ಮುಟ್ಟುವ ಸುಮಧುರ ಸಾಲುಗಳು...

    ತುಂಬಾ ಚೆನ್ನಾಗಿದೆ..

    ReplyDelete
  2. ಸುಂದರ ಪ್ರೇಮ ಕವನ... ಇಷ್ಟವಾಯ್ತು.

    ReplyDelete
  3. ದನ್ಯವಾದಗಳು ಅಶೋಕ್ ಸಾರ್ ... ಈಶ್ವರ್ ಪ್ರಸಾದ್ ದನ್ಯವಾದಗಳು ಹಾಗೆ ನನ್ನೊಳಗಿನ ಕನಸಿಗೆ ಸ್ವಾಗತ

    ReplyDelete
  4. ನಿನ್ನೊಳಗಿನ ಕನಸು,ಸುಮಧುರವಾಗಿ ಬೈಂದು..
    ನನಸಾಗುವ ಸಮಯ ಬರಲಿ ಎನ್ನಲಾ...?

    ReplyDelete