Friday, October 19, 2012



ಅಂದೇಕೋ ಕಡಲ ತೀರದಲ್ಲೊಂದು 
ಮರಳ ಗೂಡು ಕಟ್ಟುವ ಮನಸಾಗಿತ್ತು ..
ಸುಮ್ಮಗೆ ಹೊರಟಿದ್ದ ನನಗೆ ನೀ ಕಂಡಿದ್ದೆ ..
ಕಡಲು ಭೋರ್ಗರೆಯುತ್ತಿತ್ತು .. 

ಪ್ರತೀ ಸಲ ಕಟ್ಟಿದ ನಿನ್ನ ಮರಳ ಗೂಡನ್ನು 
ಚುಂಬಿಸಿ ಹೋಗುತ್ತಿತ್ತು 
ನನ್ನ ಮನವೂ ಭೋರ್ಗರೆದಿತ್ತಾ ?? 
ಸುಮ್ಮನೆ ಬಂದು ನಿನ್ನೆದುರು ಕೂತು 
ನಿನ್ನ ಜೊತೆ ಕೈ ಸೇರಿಸಿದ್ದೆ ..
ಅಕ್ಕ ಪಕ್ಕ ಮತ್ತೆರಡು ದಿಬ್ಬ ಮಾಡಿ 
ಮರಳ ಗೂಡ ಮೇಲೆ ನಿನ್ನ ಹೆಸರ ಕೆತ್ತಿದ್ದೆ ..

ನಿನ್ನ ಬಾವನೆಗಳೂ ಭೋರ್ಗರೆದಿತ್ತಾ ?? ..
ಸುಮ್ಮಗೆ ಮುಂಗುರುಳ ಸರಿಸಿ ನನ್ನ ಕಣ್ಣ ನೋಡಿದ್ದೇ 
ಪಕ್ಕ ನನ್ನ ಹೆಸರೂ ಬರೆದಿದ್ದೆ ...ತುಟಿಯಂಚಿನಲಿ 
ತುಂಟ ನಗುವಿತ್ತು ...
ಎಲ್ಲಿಂದಲೋ ಹೆಕ್ಕಿ ತಂದ ಹೂಗಳನೂ ಸಿಂಗರಿಸಿದ್ದೆ ..
ನನಗರ್ಥವಾಗಿರಲಿಲ್ಲ  ಕಡಲು ಭೋರ್ಗರೆದಿದ್ದು ..

ಇಂದೇಕೋ  ಕಡಲು ಕೂಡ ಪ್ರಶಾಂತವಾಗಿದೆ 
ಗೊತ್ತಾಗಿರಬಹುದೇನೋ ಅದಕ್ಕೂ ..
ನೀ ದೂರವಾದದ್ದು ..
ಅದಕ್ಕೆ ನೀ ಕಟ್ಟಿದ ಮರಳ ಗೂಡನೂ ಸೋಕದೆ 
ಸುಮ್ಮನಾಗಿದೆ ...

2 comments:

  1. ಇಂದೇಕೋ ಕಡಲು ಕೂಡ ಪ್ರಶಾಂತವಾಗಿದೆ
    ಗೊತ್ತಾಗಿರಬಹುದೇನೋ ಅದಕ್ಕೂ ನೀ ದೂರವಾದದ್ದು ..
    ಅದಕ್ಕೆ ನೀ ಕಟ್ಟಿದ ಮರಳ ಗೂಡನೂ ಸೋಕದೆ
    ಸುಮ್ಮನಾಗಿದೆ ..

    ನೈಸ್ ಲೈನ್ಸ್ ವೆಂಕಣ್ಣಾ :)

    ReplyDelete
  2. ತುಂಬಾ ಚೆಂದದ ಸಾಲುಗಳು..ಕಡಲಿನ ಬೋರ್ಗರೆಯುವಿಕೆಯನ್ನು ಭಾವನೆಗಳಲ್ಲಿ ಸೇರಿಸಿದ್ದೀರಿ. ಪೃಕೃತಿಯ ಕೆಲವು ಸೂಚನೆಗಳು ಬದುಕನ್ನು ಪ್ರತಿಬಿಂಬವಾಗಿರಿಸುತ್ತೆ..

    https://padmabhat.blogspot.in

    ReplyDelete