ನನ್ನದೊಂದಿಷ್ಟು ಪಕೀರನ ಕನಸುಗಳು .
ಹೊಟ್ಟೆಗೊಂದಿಷ್ಟು ಪರಮಾತ್ಮ ಸೇರಿದಾಗ
ನಿಶೆ ಏರಿದ ಹಾಗೆ ಅವುಗಳದೇ ಲೋಕದಲ್ಲಿ
ತೇಲಾಡುವ ಪಕೀರನಂತೆ ... ನನ್ನ ಕನಸುಗಳು ..
ಬೇಕಿಲ್ಲ ಯಾವ ದೊಣ್ಣೆ ನಾಯಕನ ಕಟ್ಟಪ್ಪಣೆ
ಮನಸಲ್ಲಿ ಹಾಡುವ ಹಾಡು ಕುಣಿತಗಳಿಗೆ
ಚಂದ್ರ ನಕ್ಷತ್ರಗಳೇ ಸಂಯೋಜಕರು
ಕೇಳಿ ಕಿವಿಗೊಟ್ಟು ... ಕನಸುಗಳ ಲೊಕದಲ್ಲೊಂದು
ನನ್ನದೇ ಕಥಾಮಂಜರಿ ..
ರಸವತ್ತಾದ ಕನಸುಗಳಿಗೊಂದು ಮರೀಚಿಕೆ ಕಥಾನಾಯಕಿ..
ನಾಚಬೇಕು ಕಥಾನಾಯಕಿ .. ಪಕೀರನ ವರ್ಣನೆಗಳಿಗೆ ..
ಬಿಟ್ಟು ಕೊಡುವುದಿಲ್ಲ ಒಂಟಿಯಾಗಿ ..
ತಂಗಾಳಿ ಬೀಸಿ ಮುಸ್ಸಂಜೆ ಕೆಂಪೆರುತ್ತದೆ.. ಜೊತೆಗೊಂದಿಷ್ಟು
ಚುಕ್ಕಿ ತಾರೆಗಳೂ ಮುದಗೊಳ್ಳುತ್ತವೆ ..
ಪ್ರಕೃತಿಯೂ ಸಿಂಗಾರಗೊಳ್ಳುತ್ತವೆ..
ನವ ವಧುವಿನಂತೆ ..
ಪಕೀರನ ಕನಸುಗಳಿವು ... ಮನಸು ಪೂರ್ಣ ಬೆತ್ತಲೆ ..
ಬಾವನೆಗಳ ಅಡಗಿಸಿ ಮೇಲಿನ ಅಲಂಕಾರಗಳಿಲ್ಲ..
ಒಪ್ಪ ಓರಣಗಳಿಲ್ಲ ..
ಕನಸಿನ ಲೋಕಕ್ಕೆ ಕಾಲಿಡಬೇಕು ಒಮ್ಮೆ ..
ಪಕೀರನ ಲೋಕವಿದು .
ಏನಿಲ್ಲ !!!... ಏನಿಲ್ಲದಿರಲಿ...
ಜುಟ್ಟಿಗೆ ಮಲ್ಲಿಗೆಯಂತೂ ಇದೆ .. ಒಳಬಂದವಳಿಗೆ
ಗೊತ್ತು ... ಪಕೀರನ ಕನಸುಗಳು ...
ಇವನಿಗೆ ಮಾತ್ರ ಬಚ್ಚಿಟ್ಟು ಕೊಂಡಿದ್ದೆ ಬಂತು ..
ಹೊರಬರಲು ಗೊತ್ತಿಲ್ಲ ... ತನ್ನದೇ ಕನಸುಗಳ ಲೋಕದಿಂದ ...
ಪ್ರೀತಿಯ ವೆಂಕಟೇಶ್ ನಿಮ್ಮ ಕವಿತೆ ಬರೆಯುವ ರೀತಿಯೇ ಓದುಗರನ್ನು ಸೆಳೆಯುತ್ತದೆ. ಪ್ರೇಮ ಕವಿಯ ತಾಳಕ್ಕೆ ಕನ್ನಡ ಪದಗಳು ಸಾಥ್ ನೀಡಿವೆ. ಸುಂದರ ಕವಿತೆ ಇಷ್ಟವಾದ ಸಾಲುಗಳು ಇಲ್ಲಿವೆ
ReplyDeleteಬೇಕಿಲ್ಲ ಯಾವ ದೊಣ್ಣೆ ನಾಯಕನ ಕಟ್ಟಪ್ಪಣೆ
ಮನಸಲ್ಲಿ ಹಾಡುವ ಹಾಡು ಕುಣಿತಗಳಿಗೆ
ಚಂದ್ರ ನಕ್ಷತ್ರಗಳೇ ಸಂಯೋಜಕರು
ಕೇಳಿ ಕಿವಿಗೊಟ್ಟು ... ಕನಸುಗಳ ಲೊಕದಲ್ಲೊಂದು
ನನ್ನದೇ ಕಥಾಮಂಜರಿ ..
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Danyavaadagalu baalanna :)
ReplyDeleteವೆಂಕಟೇಶ್,
ReplyDeleteನಿಮ್ಮ ಕವನವನ್ನು ಓದಿದೆ. ನಿಮ್ಮೊಳಗಿನ ಕನಸುಗಳು...ಕಲ್ಪನೆಗಳ ಲೋಕದಲ್ಲಿ ತೇಲುವಂತೆ ಮಾಡಿವೆ...ಪದಗಳ ಜೋಡಣೆ ಇಷ್ಟವಾಯ್ತು.