ಕನಸುಗಳೂ ಹಠ ಹಿಡಿದಿವೆ ..
ನೀನಿಲ್ಲದ ಕಣ್ಣುಗಳ ಜೊತೆ ನಿದ್ದೆ ಹೋಗಲು..
ನೀ ನಂಬಿಸಿ ಹೋದ ಮೇಲೆ ..
ಕಣ್ಣ ರೆಪ್ಪೆಗಳಿಗೂ ನಿನ್ನದೇ ಚಿಂತೆ ..
ಸುಮ್ಮಗೆ ಒಂದಕ್ಕೊಂದು ಪಿಸುಗುಡುತ್ತಾ
ಯೋಚಿಸುತ್ತಿರುತ್ತವೆ ..
ಅಷ್ಟೆಲ್ಲ ದಿನಗಳು ನಿನ್ನ ಜೊತೆಗಿದ್ದ
ಮನಸೀಗ ಒಂಟಿತನದ ನಿತ್ಯ ಸಂಗಾತಿ
ಸುಮ್ಮಗೆ ಮೂಲೆಯ ಹಿಡಿದು ನಿನ್ನ ಹೆಸರ ಗೀಚುತ್ತಿದೆ ..
ಬಣ್ಣದಲ್ಲಿ ಗೀಚಿದ ಹೆಸರಿಗ ಅಸ್ಪಷ್ಟ ...
ಮನಸಿಗೂ ತಿಳಿಯುತ್ತಿಲ್ಲ ....ಒಂಟಿತನ ಬಿಡುತ್ತಿಲ್ಲ ..
ಜೊತೆ ಜೊತೆಗೆ ಇರುವ ಒಂಟಿತನವೀಗ
ಕಣ್ಣ ರೆಪ್ಪೆಗಳಿಗೂ ಇಷ್ಟ ...
ಒಂದಷ್ಟು ಹೊತ್ತು ಪಿಸು ನುಡಿದು
ಕನಸಿನೊಳಗೆ ನೀನಿದ್ದಿಯೋ ಇಲ್ಲವೋ ಎಂದು ನೋಡಿ
ಸುಮ್ಮಗೆ ನಿದ್ದೆ ಹೋಗುತ್ತಿವೆ ..
ಕನಸುಗಳು ... ಈಗೀಗ ಮೌನಿಯಾಗಿವೆ ...
ಕೊನೆಯ ಉಸಿರಿನ ಮೌನ ...
ಆ ಮೌನದ ಅಂಚಲ್ಲೆ ಕಾಮನ ಬಿಲ್ಲಿನ ಚಿತ್ತಾರ ಮೂಡುವ ಗಳಿಗೆಯೂ ದೂರದಲ್ಲಿಲ್ಲ!!!
ReplyDeleteಕಣ್ಣ ರೆಪ್ಪೆಗಳಿಗೂ ನಿನ್ನದೇ ಚಿಂತೆ ..
ReplyDeleteಸುಮ್ಮಗೆ ಒಂದಕ್ಕೊಂದು ಪಿಸುಗುಡುತ್ತಾ
ಯೋಚಿಸುತ್ತಿರುತ್ತವೆ ..
ಅಬ್ಬಾ ಅದ್ಬುತ ಸಾಲುಗಳು......
ಮನಸಿಗೂ ತಿಳಿಯುತ್ತಿಲ್ಲ ....ಒಂಟಿತನ ಬಿಡುತ್ತಿಲ್ಲ ..
ReplyDeleteಜೊತೆ ಜೊತೆಗೆ ಇರುವ ಒಂಟಿತನವೀಗ
ಕಣ್ಣ ರೆಪ್ಪೆಗಳಿಗೂ ಇಷ್ಟ ...
ಒಂದಷ್ಟು ಹೊತ್ತು ಪಿಸು ನುಡಿದು
ಕನಸಿನೊಳಗೆ ನೀನಿದ್ದಿಯೋ ಇಲ್ಲವೋ ಎಂದು ನೋಡಿ
ಸುಮ್ಮಗೆ ನಿದ್ದೆ ಹೋಗುತ್ತಿವೆ ..
Sooper Lines....:)