Thursday, April 5, 2012



ನನ್ನ ಹುಡುಗಿ ಕೇಳಿದಳೊಮ್ಮೆ ನನ್ನ ,
ನನ್ನನ್ನೇಕೆ ಇಷ್ಟೊಂದು ಪ್ರೀತಿಸುವೆಯೆಂದು?
ನಾ ಹೇಳಿದೆ ಹುಡುಗೀ ,ಪ್ರೀತಿಗೆ ಕಾರಣ ಬೇಕೇ ?
ಆದರೂ ಹಠ ಹಿಡಿದಳವಳು
ಪ್ರೀತಿಗೆ ಕಾರಣವೇನೆಂದು ?
ಏನು ಹೇಳಲಿ ಹುಡುಗೀ ,ನನ್ನ ಪ್ರೀತಿಗೆ ಕಾರಣವ
ನೀನೆಲ್ಲಿ ಸುಂದರವಾಗಿರುವೆಯೆಂದು ಹೇಳಿದರೆ ,
ರಂಬೆ ಊರ್ವಶಿ,ಮೆನಕೆಯರು ಕೋಪಗೊಂಡು
ಆಮೇಲೆ ಶಾಪ ಕೊಟ್ಟಾರು.
ನಿನಗೀಗಿರುವ ಸೌಂದರ್ಯವೇ ಸಾಕಲ್ಲವೇ?
ನೀನೆ ಆಕರ್ಷಣೆಯ ಕೇಂದ್ರಬಿಂದು ,ನಿನ್ನ ಬಿಟ್ಟರೆ ಬೇರಿಲ್ಲ
ಎಂದೆಲ್ಲ ಹೇಳಲು ವಯಸ್ಸು ನನ್ನ ಬಿಡಬೇಕಲ್ಲ ,
ನಿನಗಿಂತ ಸುಂದರ ಹುಡುಗಿ ಎದುರಿಗೆ ಬಂದರೆ
ಕಣ್ಣು ಮುಚ್ಚಿಕೊಳ್ಳಲೇ ?
ಕೇಳಿಲ್ಲಿ ಹುಡುಗಿ
ಪ್ರೀತಿ ಹುಟ್ಟುವುದು ,ಸೌಂದರ್ಯದಿಂದಲ್ಲ,
ಹೃದಯದಾಳದ ಮನಸಿನಿಂದ ,
ಅದಕ್ಕೆ ಕಾರಣ ಬೇಕಿಲ್ಲಾ,
ಅದು ವಿನಾಕಾರಣ

4 comments:

  1. ಹುಡುಗಿ ನಿಮ್ಮ ಈ ಮಾತಿಗೆ ಮನ ಸೋತು ಹೋಗ್ತಾಳೆ ಬಿಡಿ...... ಚೆನ್ನಾಗಿದೆ

    ReplyDelete
  2. ವಾವ್ವ..ವಾವ್ವ.....
    ಚಂದದ ಉತ್ತರ ಕೊಟ್ಟಿರಿ ನಿಮ್ಮ ಹುಡುಗಿಗೆ.....
    ಎಲ್ಲಾ ಕಾಲಕ್ಕೂ ಮೆಚ್ಚುಗೆಯಾಗುವ ಉತ್ತರ ....

    ReplyDelete
  3. ವಿನಾಕಾರಣ ಅರಳುವುದೇ ಪ್ರೀತಿ ಲಕ್ಷಣ.

    ಇಷ್ಟವಾಯಿತು.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  4. ಚೆಂದಿದ್ದು.. ಕವನಗಳು, ಚಿತ್ರಕವನದ ಪರಿಕಲ್ಪನೆ ಸೊಗಸಾಗಿ ಮೂಡಿದ್ದು

    ReplyDelete