ಮನದ ತುಂಬಾ ಕನಸುಗಳಿಗೆನು ಬರವಿಲ್ಲ... ನನಸಾಗದ ಕನಸುಗಳೂ ಇಲ್ಲಿ ಜೀವ ತಳೆಯುತ್ತದೆ .. ಸುಮ್ಮಗೆ ಹಾಗೊಂದಿಷ್ಟು ಕನಸುಗಳ ತವರು ... ಈ ನನ್ನೊಳಗಿನ ಕನಸು ...
Thursday, October 14, 2010
ನನ್ನ ಮನದಲ್ಲಿ ಮೈಯ ಕಣ ಕಣದಲ್ಲಿ ತುಂಬಿ ಬರುತಿದೆ
ಈ ನಿನ್ನ ಸುಂದರ ರೂಪ
ಬೀಸೋ ತಂಗಾಳಿಯಲಿ ,ಚಿಮ್ಮಿ ಹರಿಯುವ ನೀರಿನಲಿ
ತೇಲಿ ಬರುತಿದೆ ನಿನ್ನ ಸವಿ ನೆನಪು .
ಹುಣ್ಣಿಮೆಯ ಬೆಳದಿಂಗಳಲಿ ಮಂಜಿನ ಹನಿಗಳಲಿ
ಈ ಸುತ್ತ ಪರಿಸರದಿ ನೀನೇ ನೀನು ....
ನಿದ್ದೆಯಾ ಸವಿಗನಸಿನಲಿ ನೀನು ಬಂದೆ
ಈ ಹೃದಯ ತರಂಗಗಳನು ಮೀಟಿ ನಿಂತೆ..
ಆ ಕಣ್ಣ ನೋಟದಲಿ ಮನಸೆಳೆದೆ ನನ್ನ
ಈ ಹೃದಯ ಪ್ರೀತಿಸಿತು ಅರಿವಿಲ್ಲದೆ ನಿನ್ನ
ನನಗರಿವಿಲ್ಲದೆ ನಿನ್ನ ಪ್ರೀತಿಸಿದೆ
ನಿನಗಾಗಿ ನನ್ನೀ ಹೃದಯವನು ಮುಡುಪಾಗಿಟ್ಟೆ.
ನಿನ್ನ ಪ್ರೀತಿಯೇ ಶಾಶ್ವತವಾದರೆ, ಆಹಾ ಅದೆಷ್ಟು ಸುಂದರ ..!
ನಿನ್ನ ಪ್ರೀತಿಯೊಳು ನಾ ಹುಚ್ಚನಾದಾಗ ,
ನನ್ನ ನೋಡಿ ನಗುತ ನೀ ದೂರ ಹೋದೆ ..
ನಿನ್ನ ಹುಡುಕುತ ಕನವರಿಸಿ ನಡೆದಾಗ ,
ಕ್ಷಣದೊಳಗೆ ಮಾಯವಾದೆ ಈ ಕಣ್ಣಿನಿಂದ
ನಿನ್ನ ಕಾಣದೆ ನಾ ಪರಿತಪಿಸುತಿರುವಾಗ
ಸದ್ದಿಲ್ಲದೆ ಬಂದೆ ಕನಸಿನಲಿ ನನ್ನ
ನೀನೆನಗೆ ಚೈತನ್ಯ, ನಿನ್ನ ಹೊರತೆಲ್ಲ ಶೂನ್ಯ
ಈ ನಿನ್ನ ಪ್ರೀತಿಯಲೇ ಇರುವುದೆನ್ನ ಜೀವನ ..... !
Subscribe to:
Post Comments (Atom)
ಚೆನ್ನಾಗಿದೆ ಕವನ.
ReplyDeleteಕವನ ಚೆನ್ನಾಗಿದೆ.
ReplyDeleteಆದರೆ ನೀವು
ಗದ್ಯವನ್ನು ಹೆಚ್ಚು ಚೆನ್ನಾಗಿ ಬರೀತೀರಾ ಅಂತ ನನ್ನ ಭಾವನೆ..
ಬರೀತಿರಿ..ಸಾರ್.
ನೀನೆನಗೆ ಚೈತನ್ಯ, ನಿನ್ನ ಹೊರತೆಲ್ಲ ಶೂನ್ಯ
ReplyDeleteಈ ನಿನ್ನ ಪ್ರೀತಿಯಲೇ ಇರುವುದೆನ್ನ ಜೀವನ ..... !
pritiya amaratva saaruva kavana. chennagide.
ಸಾಲುಗಳ ಜೋಡಣೆ ಇಷ್ಟವಾಯಿತು
ReplyDeleteThanks venkatakrishna sir. pabhamani madam.& gurumurti sir,
ReplyDeleteVKK sir every prose am writing here is only my feelings, and inspirations.whatever my innerheart says i give it touch through writing . thanks for the comments
ಚಂದದ ಕವನ ವೆಂಕಟೀಶಣ್ಣ .. ಚಿತ್ರ ಇನ್ನು ಸ್ವಲ್ಪ ಸ್ಪಸ್ಟ ವಾಗಿದ್ದಿದ್ದರೆ ಚೆನ್ನಾಗಿರ್ತ ಇತ್ತು:)
ReplyDeleteಚೆಂದದ ಕವನ
ReplyDeleteಕೊನೆಯೆರಡು ಸಾಲುಗಳು ಮನಸೆಳೆಯಿತು.
ವಕೀಲ್ರೆ, ಅಂತೂ ಇಂತೂ ಪ್ರೀತಿ ಮಾಡಿ ಕನಸ ಕಂಡ್ರಾ? ಸ್ವಲ್ಪ ಹೊರ ಜಗತ್ತಿನ ಬಗ್ಗೂ ಬರೀರಿ, ಶುಭಾಶಯಗಳು
ReplyDeleteಸೀತಾರಾಮ್ ಸರ್ ,ವಿ ಆರ್ ಭಟ್ರೇ ,& ರಂಜಿತ ಧನ್ಯವಾದಗಳು . ಭಟ್ರೆ ಏನ್ ಮಾಡೋದು ನಮಗೆ ಯಾವುದು ಆಗುವುದಿಲ್ಲವೋ ಅದನ್ನು ಹೇಳಿಕೊಳ್ಳೋದು ಅಷ್ಟೇ . ಟ್ರೈ ಮಾಡ್ತಾ ಇದ್ದೇನೆ ಭಟ್ರೆ ಆದರೆ ಎಲ್ಲರೂ ಅದನ್ನೇ ಬರೆದರೆ ಇದನ್ನ ಬರೆಯುವವರು ಯಾರು ಅಲ್ಲವ?
ReplyDeleteTumba sogasagide Venkatesh....
ReplyDelete